24.5 ಪರ್ಸೆಂಟ್ ಸಿಬ್ಬಂದಿಗೆ ಏಪ್ರಿಲ್ ವೇತನವೇ ಆಗಿಲ್ಲ: ಸಮೀಕ್ಷೆ ತೆರೆದಿಟ್ಟ ಲೆಕ್ಕಾಚಾರ

ಐ.ಟಿ., ಉತ್ಪಾದನಾ ಕಂಪೆನಿಗಳೂ ಸೇರಿದಂತೆ ಹಲವು ಉದ್ಯಮ ನಡೆಸುವವರಿಗೆ ಉದ್ಯೋಗಿಗಳಿಗೆ ಏಪ್ರಿಲ್ ನಲ್ಲಿ ಸಂಬಳ ನೀಡಲು ಸಹ ಸಾಧ್ಯವಾಗಿಲ್ಲ. ಕೊರೊನಾದ ಕಾರಣಕ್ಕೆ ಭಾರತದಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಮಾರ್ಚ್ ತಿಂಗಳ ವೇತನವನ್ನು 13.3 ಪರ್ಸೆಂಟ್ ನಷ್ಟು ಕಂಪೆನಿಗಳಿಗೆ ನೀಡಲು ಸಾಧ್ಯವಾಗಿರಲಿಲ್ಲ. ಈ ಪ್ರಮಾಣ ಏಪ್ರಿಲ್ ತಿಂಗಳ ಸಂಬಳದ ಹೊತ್ತಿಗೆ 24.5 ಪರ್ಸೆಂಟ್ ಗೆ ಏರಿಕೆ ಆಗಿದೆ ಎಂದು ಸಮೀಕ್ಷೆಯೊಂದು ಬಯಲು ಮಾಡಿದೆ.

Husys Industry Pulse ಸಮೀಕ್ಷೆ ಪ್ರಕಾರ, ಸೀನಿಯರ್ ಮ್ಯಾನೇಜ್ ಮೆಂಟ್ ಹಂತದ ಅಧಿಕಾರಿಗಳಿಗೆ ವೇತನ ನೀಡಲು 17 ಪರ್ಸೆಂಟ್ ನಷ್ಟು ಕಂಪೆನಿಗಳಿಗೆ ಸಾಧ್ಯವಾಗಿಲ್ಲ. ಇನ್ನು 7 ಪರ್ಸೆಂಟ್ ನಷ್ಟು ಮಧ್ಯಮ ಹಂತದ ಮ್ಯಾನೇಜ್ ಮೆಂಟ್ ನಲ್ಲಿ ಕಾರ್ಯ ನಿರ್ವಹಿಸುವವರಿಗೆ ವೇತನ ಆಗಿಲ್ಲ.

ಇನ್ನು ವೇತನ ಹೆಚ್ಚಳವನ್ನು ರದ್ದು ಮಾಡಿರುವುದು ಹಾಗೂ ನೇಮಕಾತಿ ನಿಲ್ಲಿಸಿರುವ ಉದಾಹರಣೆಗಳಂತೂ ಹೇಳುವ ಅಗತ್ಯವೇ ಇಲ್ಲ. ಸಿಇಒಗಳ ಪೈಕಿ ಶೇಕಡಾ 72ರಷ್ಟು ಮಂದಿ ಹೇಳಿರುವ ಪ್ರಕಾರ, ಲಾಕ್ ಡೌನ್ ಅವಧಿಯಲ್ಲಿ ಉದ್ಯೋಗಿಗಳಿಗೆ ವೇತನ ಸಹಿತ ರಜಾ ನೀಡಲು ಸಾಧ್ಯವೇ ಇಲ್ಲ.

24.5 ಪರ್ಸೆಂಟ್ ಸಿಬ್ಬಂದಿಗೆ ಏಪ್ರಿಲ್ ವೇತನವೇ ಆಗಿಲ್ಲ: ಸಮೀಕ್ಷೆ

ಮಾರ್ಚ್ 29 ಏಪ್ರಿಲ್ 29ರ ಮಧ್ಯೆ ಹೈದರಾಬಾದ್ ಮೂಲದ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಜನರು ಹಾಗೂ ಉದ್ಯಮದ ಮೇಲೆ ಕೊರೊನಾ ಪರಿಣಾಮ ಎಂದು ಈ ಸಮೀಕ್ಷೆಗೆ ಹೆಸರನ್ನು ಇಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+