ಚೀನಾದಲ್ಲಿ ತಲೆದೂರಿರುವ ಕೊರೊನಾವೈರಸ್ ಜನರಲ್ಲಿ ಸಾವಿನ ಆತಂಕ ಮೂಡಿಸಿರುವುದಷ್ಟೇ ಅಲ್ಲದೆ ಚೀನಾದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು ಎಂದು ಮೂಡಿಸ್ ಅಂದಾಜಿಸಿದೆ.
ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್, ಕೊರೊನಾವೈರಸ್‌ನಿಂದಾಗಿ ಆಗಿರುವ ಅಡ್ಡಿ ಆತಂಕವು ಸುಲಭವಾಗಿ ಸಾರಿಗೆ, ಸಗಟು ಮತ್ತು ಚಿಲ್ಲರೆ ವ್ಯಾಪಾರ, ಉತ್ಪಾದನೆ, ರಿಯಲ್ ಎಸ್ಟೇಟ್ ಮತ್ತು ಮನರಂಜನೆ, ಹಣಕಾಸು ವಲಯದಂತಹ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ.

ಇದರಿಂದ ಚೀನಾದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) 1 ಪರ್ಸೆಂಟ್ ನಷ್ಟು ತ್ರೈಮಾಸಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಮೂಡಿಸ್ ವಿಶ್ಲೇಷಣೆ ಬುಧವಾರ ವ್ಯಾಖ್ಯಾನದಲ್ಲಿ ಹೇಳಿದೆ. ಚೀನಾದ 2018ರ ಜಿಡಿಪಿ ಅಂಕಿ-ಅಂಶಗಳ ಪ್ರಕಾರ ಅಂದಾಜು 40 ಲಕ್ಷ ಕೋಟಿಯಷ್ಟು ಆರ್ಥಿಕತೆಯನ್ನು ನುಂಗಿಹಾಕಬಹುದು ಎಂದು ಮೂಡಿಸ್ ಅಂದಾಜಸಿದೆ.
ಮೂಡಿಸ್ ಅನಾಲಿಟಿಕ್ಸ್‌ನ ಏಷ್ಯಾದ ಮುಖ್ಯ ಪೆಸಿಫಿಕ್ ಅರ್ಥಶಾಸ್ತ್ರಜ್ಞ ಸ್ಟೀವ್ ಕೊಕ್ರೇನ್ ಪ್ರಕಾರ '' ಐದು ಕೈಗಾರಿಕಾ ವಲಯಗಳು ಕೊರೊನವೈರಸ್‌ನಿಂದ ಉಂಟಾಗುವ ಅಪಾಯಕ್ಕೆ ಹೆಚ್ಚು ಗುರಿಯಾಗುತ್ತವೆ ಮತ್ತು ಚೀನಾದಲ್ಲಿ ಉಂಟಾಗುವ ಸಂಪರ್ಕ ತಡೆಯು ಆರ್ಥಿಕತೆಯ ಮೇಲೆ ಪರಿಣಾಮವನ್ನು ಉಂಟುಮಾಡಬಹುದು'' ಎಂದು ಹೇಳಿದರು.

2019ರಲ್ಲಿ ಚೀನಾದ ಆರ್ಥಿಕ ಬೆಳವಣೀಗೆ ದರವು 6.1 ಪರ್ಸೆಂಟ್‌ನಷ್ಟು ದಾಖಲಾಗಿದ್ದು, ಇದು ಕಳೆದ 24 ವರ್ಷಗಳಲ್ಲಿ ಅತ್ಯಂತ ಕಡಿಮೆ ಎಂದು ಕಳೆದ ತಿಂಗಳು ಬೀಜಿಂಗ್‌ನಲ್ಲಿ ಬಿಡುಗಡೆಯಾದ ಅಂಕಿ-ಅಂಶಗಳು ತಿಳಿಸಿವೆ.
ಬುಧವಾರ ವೇಳೆಗೆ ಜಾಗತಿಕವಾಗಿ ಸುಮಾರು 24,505 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಚೀನಾದಲ್ಲಿ ಸಾವಿನ ಸಂಖ್ಯೆ 493ಕ್ಕೆ ತಲುಪಿದೆ.


Click it and Unblock the Notifications