"2021- 22ರ ಆರ್ಥಿಕ ವರ್ಷಕ್ಕೆ ಕಾರ್ಪೊರೇಟ್ ಸಾಲ 1.67 ಲಕ್ಷ ಕೋಟಿ ಹೆಚ್ಚಳ"

ಕೊರೊನಾ ಲಾಕ್ ಡೌನ್ ತೆರವು ಹಂತಹಂತವಾಗಿ ಆಗುತ್ತಿದ್ದರೂ ವ್ಯಾಪಾರ- ವ್ಯವಹಾರಗಳು ಪುನರಾರಂಭಕ್ಕೆ ಕಷ್ಟ ಪಡುತ್ತಿವೆ. ಕಾರ್ಪೊರೇಟ್ ಸಾಲಗಳು ಹೆಚ್ಚಾಗುವ ಸಾಧ್ಯತೆ ಇವೆ. ಭಾರೀ ಪ್ರಮಾಣದಲ್ಲಿ ಸಾಲ ಮಾಡಿರುವ ಟಾಪ್ 500 ಖಾಸಗಿ ವಲಯದ ಕಂಪೆನಿಗಳ ಸಾಲ ಪ್ರಮಾಣ 2021- 22ರ ಆರ್ಥಿಕ ವರ್ಷಕ್ಕೆ 1.67 ಲಕ್ಷ ಕೋಟಿ ಹೆಚ್ಚಾಗಬಹುದು ಎಂದು ಇಂಡಿಯಾ ರೇಟಿಂಗ್ಸ್ ಅಂಡ್ ರೀಸರ್ಚ್ (Ind- Ra) ತಿಳಿಸಿದೆ.

ಖರ್ಚಿನ ಪ್ರಮಾಣದಲ್ಲಿ ಮಿತಿ, ಆದಾಯದಲ್ಲಿ ಇಳಿಕೆ ಕಾರಣಕ್ಕೆ 2021ರ ಆರ್ಥಿಕ ವರ್ಷದಲ್ಲಿ ಸಾಲದ ಬೆಳವಣಿಗೆ ಮಿತಿಗೊಳಿಸಬಹುದು ಎಂದು ಸೋಮವಾರ ಹೇಳಲಾಗಿದೆ. ಕೊರೊನಾ ಬಿಕ್ಕಟ್ಟು ಸರಿ ಹೋಗುವ ಮುನ್ನ ಆಗುವ 2.54 ಲಕ್ಷ ಕೋಟಿ ರುಪಾಯಿ ಜತೆಗೆ 1.67 ಲಕ್ಷ ಕೋಟಿ ರುಪಾಯಿ ಸೇರ್ಪಡೆ ಆಗಿ, ಒಟ್ಟು 4.21 ಲಕ್ಷ ಕೋಟಿ ಸಾಲ ಆಗಿರುತ್ತದೆ ಎನ್ನಲಾಗಿದೆ.

2021- 22ರ ಆರ್ಥಿಕ ವರ್ಷಕ್ಕೆ ಒಟ್ಟು ಕಾರ್ಪೊರೇಟ್ ಹೊರೆ 5.89 ಲಕ್ಷ ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾದ ಪಕ್ಷದಲ್ಲಿ ಒಟ್ಟು ಸಾಲದ ಶೇಕಡಾ 20.84ರಷ್ಟು ಒತ್ತಡದಲ್ಲಿರುತ್ತದೆ. ಕೊರೊನಾದಿಂದ ಆರ್ಥಿಕ ಚೇತರಿಕೆ ಕಾಣುವುದು 2022ನೇ ಇಸವಿಯ ತನಕ ಆಗಬಹುದು ಎಂಬ ಅಂದಾಜು ಮಾಡಲಾಗಿದೆ.

ಕೊರೊನಾದಿಂದ ನಿರೀಕ್ಷೆಗಿಂತ ಹೆಚ್ಚಿನ ಹಾನಿ ಆಗಿದೆ. ಬೇಡಿಕೆ ಕುಸಿತ ಆಗಿದೆ. ಸಾಲ ಮರುಪಾವತಿ ಆಗದ ಪ್ರಮಾಣ ಹೆಚ್ಚಾಗಬಹುದು. ಕಳೆದ ದಶಕದಲ್ಲೇ ಕಾಣದಂಥ ಮಟ್ಟಕ್ಕೆ ಇದು ತಲುಪಬಹುದು ಎಂದು ತಿಳಿಸಲಾಗಿದೆ. ಇನ್ನು ಆರ್ಥಿಕ ಅನಿಶ್ಚಿತತೆ ಇನ್ನಷ್ಟು ಸಮಯ ಮುಂದುವರಿಯಬಹುದು. ನಗದು ದೊರೆತರೂ ತಮ್ಮ ಬಂಡವಾಳ ಹೂಡಿಕೆ ಬಗ್ಗೆ ಆಲೋಚನೆ ಬದಲಿಸಿಕೊಳ್ಳುವ ಜನರು ಅಲ್ಪಾವಧಿಗೆ ಚಿಂತಿಸಲಿದ್ದಾರೆ ಎನ್ನಲಾಗಿದೆ.

ಸಾಲ ನೀಡುವ ಸಂಸ್ಥೆಗಳು ಕೂಡ ತಮ್ಮ ಆಯ್ಕೆಯಲ್ಲಿ ಕಠಿಣವಾಗಿರುತ್ತದೆ. ಮರುಪಾವತಿ ಸಾಮರ್ಥ್ಯದ ಬಗ್ಗೆ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+