ಕೊರೊನಾವೈರಸ್ ಸೋಂಕು ಹರಡುವ ಭೀತಿಯಿಂದ ದೇಶದೆಲ್ಲೆಡೆ ಲಾಕ್ ಡೌನ್ ಘೋಷಿಸಿದ್ದು, ಎಲ್ಲಾ ಬಗೆಯ ವ್ಯಾಪಾರ, ವಹಿವಾಟು ಬಂದ್ ಆಗಿವೆ. ಈ ಸಂದರ್ಭದಲ್ಲಿ ಸಂಘಟಿತ ವಲಯಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭವಿಷ್ಯ ನಿಧಿ ವಿಥ್ ಡ್ರಾ ಕುರಿತಂತೆ ಕೂಡಾ ಪ್ರಮುಖ ಘೋಷಣೆ ಮಾಡಿದರು. ಈ ಹೊಸ ಇಪಿಎಫ್ ನಿಯಮದಂತೆ ಎಷ್ಟು ವಿಥ್ ಡ್ರಾ ಮಾಡಬಹುದು ಎಂಬ ಮಾಹಿತಿ ಮುಂದಿದೆ.
ಮೂಲವೇತನ(Basic Pay)+ ತುಟ್ಟಿ ಭತ್ಯೆ (DA) ಸೇರಿ ಮೂರು ತಿಂಗಳ ಮೊತ್ತ (ಪೂರ್ತಿ ವೇತನ ಅಲ್ಲ) ಅಥವಾ ಪಿಎಫ್ ಒಟ್ಟು ಮೊತ್ತದ ಶೇಕಡಾ 75ರಷ್ಟು ಇವೆರಡರಲ್ಲಿ ಯಾವ ಮೊತ್ತವು ಕಡಿಮೆಯೋ ಅಷ್ಟನ್ನು ಮಾತ್ರ ವಿಥ್ ಡ್ರಾ ಮಾಡಬಹುದು. ಆ ಮುಂಗಡವನ್ನು ಹಿಂತಿರುಗಿಸಬೇಕು ಅಂತೇನೂ ಇಲ್ಲ. ಇದಕ್ಕಾಗಿ ಇಪಿಎಫ್ ಯೋಜನೆ 1952ರಲ್ಲಿ ಬದಲಾವಣೆ ಮಾಡಲಾಗಿದೆ.

ಇಪಿಎಫ್ಒ ಅಧಿಕೃತ ವೆಬ್ ತಾಣದ ಮೂಲಕ ಆನ್ಲೈನ್‌ನಲ್ಲಿ ಪಿಎಫ್ ವಿಥ್ ಡ್ರಾ ವಿಧಾನ:
ಅಧಿಕೃತ ವೆಬ್ ತಾಣ (unifiedportal-mem.epfindia.gov.in)ಕ್ಕೆ ಭೇಟಿ ಕೊಡಿ, ಮುಖಪುಟದಲ್ಲಿ ಅಡ್ವಾನ್ಸ್ಡ್ ಕ್ಲೇಮು ಮಾಡಲು ಕ್ಲಿಕ್ ಮಾಡಿ ಎಂಬ ಲಿಂಕ್ ನೋಡಿ.. ಅದರಲ್ಲಿರುವ ನಿಬಂಧನೆಗಳನ್ನು ಪರೀಕ್ಷಿಸಿ ಅರ್ಜಿ ಸಲ್ಲಿಸಿ. ನಿಮ್ಮ ಅರ್ಜಿ ನಿಮ್ಮ ಉದ್ಯೋಗದಾತರಿಗೆ ತಲುಪಿ ಅಪ್ರೂ ಆದ ಕೂಡಲೇ ನಿಮ್ಮ ಕ್ಲೇಮು ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
1. UAN ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
2. ಆನ್ ಲೈನ್ ಸರ್ವೀಸಸ್ ವಿಭಾಗಕ್ಕೆ ಭೇಟಿ ನೀಡಿ ಕ್ಲೇಮ್ ಆಯ್ಕೆ ಮಾಡಿಕೊಳ್ಳಿ.
3. ನಿಮ್ಮ ಬ್ಯಾಂಕ್ ಅಕೌಂಟ್ ಸಂಖ್ಯೆ ದೃಢಪಡಿಸಿ.
4. ಚೆಕ್ ಅಥವಾ ಪಾಸ್ ಬುಕ್ ಸ್ಕ್ಯಾನ್ಡ್ ಕಾಪಿ ಸಲ್ಲಿಸಿ
5.ಮುಂಗಡವಾಗಿ ವಿಥ್ ಡ್ರಾ ಮಾಡುತ್ತಿರುವುದೇಕೆ ಎಂಬುದಕ್ಕೆ ಕಾರಣ ನೀಡಿ. ಇಲ್ಲಿ'outbreak of pandemic' ಕಾರಣ ಆಯ್ಕೆ ಮಾಡಿಕೊಳ್ಳಿ
6. ಆಧಾರ್ ಬಳಸಿ ಒಟಿಪಿ ಸೃಷ್ಟಿಸಿಕೊಳ್ಳಿ. ನಿಮ್ಮ ಕ್ಲೇಮು ಉದ್ಯೋಗ ಸಂಸ್ಥೆ ತಲುಪಲಿದ್ದು, ನಿಮ್ಮ ಸಂಸ್ಥೆ ಒಪ್ಪಿಗೆ ಸೂಚಿಸುತ್ತಿದ್ದಂತೆ ನೀವು ಮೊತ್ತ ಪಡೆದುಕೊಳ್ಳಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications