For Quick Alerts
ALLOW NOTIFICATIONS  
For Daily Alerts

ಸ್ಥಳೀಯ ಲಾಕ್‌ಡೌನ್ ವಿಸ್ತರಣೆ : ಬೇಡಿಕೆ ಮತ್ತು ಖರ್ಚಿನ ಮೇಲೆ ಆಳವಾದ ಪರಿಣಾಮ

|

ಕೋವಿಡ್-19 ಎರಡನೇ ಅಲೆಯು ಸಾಕಷ್ಟು ಪ್ರಾಣ ಹಾನಿ ಜೊತೆಗೆ ಮತ್ತೊಮ್ಮೆ ದೇಶದ ಆರ್ಥಿಕತೆಯೇ ಮೇಲೆ ಆಳವಾದ ಪರಿಣಾಮ ಬೀರತೊಡಗಿದೆ. ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಜೂನ್ ತಿಂಗಳಿನಲ್ಲಿಯೂ ಲಾಕ್‌ಡೌನ್‌ ಹೇರಿಕೆ ಮುಂದುವರಿಸಿರುವುದು ಎಚ್ಚರಿಕೆಯ ಗಂಟೆ ಬಾರಿಸಿದೆ.

 

ಕೈಗಾರಿಕೆ ಮತ್ತು ವ್ಯವಹಾರಿಕ ಚಟುವಟಿಕೆ ಮೇಲೆ ಕಳೆದ ವರ್ಷದ ಸಂಪೂರ್ಣ ಲಾಕ್‌ಡೌನ್‌ನಂತೆ ಈ ಬಾರಿ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಪ್ರಮುಖ ವಿಶ್ಲೇಷಣೆಗಳು ತೋರಿಸುತ್ತಿವೆ. ಆದರೆ ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆ ಮಟ್ಟದಲ್ಲಿರುವುದು ಮತ್ತು ಕೊವಿಡ್ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಇನ್ನೂ ಹೆಚ್ಚಿರುವುದರಿಂದ ಬೇಡಿಕೆ ಹಾಗೂ ಖರ್ಚಿನ ಮೇಲೆ ಪರಿಣಾಮ ಬೀರಲಿದೆ ಎಂದು ಗೂಗಲ್ ಮೊಬಿಲಿಟಿ ಡೇಟಾ ತಿಳಿಸಿದೆ.

ಕಳೆದ ವರ್ಷಕ್ಕಿಂತ ಬೇಡಿಕೆ, ಬಳಕೆಯಲ್ಲಿ ಕುಸಿತ

ಕಳೆದ ವರ್ಷಕ್ಕಿಂತ ಬೇಡಿಕೆ, ಬಳಕೆಯಲ್ಲಿ ಕುಸಿತ

ಹೌದು ಕಳೆದ ವರ್ಷದ ಸಂಪೂರ್ಣ ಲಾಕ್‌ಡೌನ್‌ಗೆ ಹೋಲಿಸಿದರೆ ಈ ವರ್ಷ ಜನರ ಖರ್ಚು, ಬೇಡಿಕೆ, ಬಳಕೆ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ಈ ಬಾರಿ ಕೊರೊನಾ ಕುರಿತು ಸಾರ್ವಜನಿಕರ ಭಯ ಮತ್ತು ಆತಂಕ ಹೆಚ್ಚು ಆಳವಾಗಿದೆ ಮತ್ತು ಬಳಕೆ ಹಾಗೂ ಬೇಡಿಕೆಯಲ್ಲಿ ಸಾಕಷ್ಟು ಇಳಿಕೆಗೆ ಕಾರಣವಾಗಿದೆ.

ಈ ಕುರಿತು ಗೂಗಲ್ ಮೊಬಿಲಿಟಿ ಮತ್ತು ಇತರೆ ಡೇಟಾಗಳ ಪ್ರಕಾರ ಮಾರ್ಚ್‌ ಮತ್ತು ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ಮೂರನೇ ವಾರದಲ್ಲಿ ಚಿಲ್ಲರೆ ವ್ಯಾಪಾರ, ದಿನಸಿ, ಸಾರಿಗೆ, ಟೋಲ್ ಸಂಗ್ರಹಗಳು ಸೇರಿದಂತೆ ಅನೇಕ ಚಟುವಟಿಕೆಗಳು ಕುಸಿತದತ್ತ ಸಾಗಿದೆ.

ದಿನಸಿ, ಔಷಧಾಲಯ ಬೇಡಿಕೆ ಇಳಿಕೆ

ದಿನಸಿ, ಔಷಧಾಲಯ ಬೇಡಿಕೆ ಇಳಿಕೆ

ಗೂಗಲ್ ಮೊಬಿಲಿಟಿ ಡೇಟಾ ಪ್ರಕಾರ ಕಳೆದ ವರ್ಷ ಮೇ 18, 2020 ರಂದು (ಸೋಮವಾರ) ದಿನಸಿ ಮತ್ತು ಔಷಧಾಲಯ ಅಂಗಡಿಗಳಿಗೆ ಭೇಟಿ ಪ್ರಮಾಣವು ಕೋವಿಡ್ ಪೂರ್ವ ಮೂಲ ರೇಖೆಗೆ ಹೋಲಿಸಿದರೆ ಶೇಕಡಾ 21ರಷ್ಟು ಕಡಿಮೆಯಾಗಿತ್ತು. ಆದರೆ ಈ ವರ್ಷ ಮೇ 17, 2021 ರಂದು (ಸೋಮವಾರ) ಈ ಕುಸಿತವು ಶೇಕಡಾ 27.6ರಷ್ಟಿದೆ.

ಅದೇ ರೀತಿಯಲ್ಲಿ ಕೆಲಸದ ಸ್ಥಳಗಳಿಗೆ ಭೇಟಿ ನೀಡುವ ಪ್ರಮಾಣ ಮೇ 18 ರಂದು ಶೇ. 45ರಷ್ಟು ಕಡಿಮೆಯಾಗಿದೆ. ಆದರೆ ಈ ವರ್ಷ ಶೇ. 51ರಷ್ಟು ಕಡಿಮೆಯಾಗಿದೆ.

ಇನ್ನು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು ಮೇ 17, 2021ರಂದು ಶೇ. 18.7ರಷ್ಟು, ವಿದ್ಯುತ್ ಪೂರೈಕೆ ಶೇ. 4.5ರಷ್ಟು, ರೈಲ್ವೆ ಸರಕು ಸಾಗಾಣೆ ಶೇ.1.7ರಷ್ಟು, ಜಿಎಸ್‌ಟಿ ಇ-ವೇ ಬಿಲ್‌ ಸಂಗ್ರಹ ಶೇ. 14ರಷ್ಟು ಕುಸಿತಗೊಂಡಿವೆ.

ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಳವೇ ಕಾರಣ
 

ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಳವೇ ಕಾರಣ

ಕೊರೊನಾವೈರಸ್‌ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಜೊತೆಗೆ ಲಸಿಕೆಗಳ ಕೊರತೆಯು ಉಲ್ಬಣಗೊಳ್ಳುತ್ತಿರುವುದು ಜನರ ಖರ್ಚು ಮತ್ತು ಬೇಡಿಕೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕಟ್ಟುನಿಟ್ಟಾದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಇಲ್ಲದಿದ್ದರೂ, ರಾಜ್ಯಗಳಲ್ಲಿನ ಲಾಕ್‌ಡೌನ್ ವಿಸ್ತರಣೆಯು ವಿವಿಧ ವಲಯಗಳಲ್ಲಿ ಬೇಡಿಕೆ ಪ್ರಮಾಣವನ್ನು ತಗ್ಗಿಸಿದೆ. ಜನರು ತಮ್ಮ ಕೆಲಸ ಕಾರ್ಯಗಳಿಗೆ ಭೇಟಿ ನೀಡುವ ಪ್ರಮಾಣವನ್ನು ತಗ್ಗಿಸಿದ್ದಾರೆ.

ಈ ಬಾರಿ ಹಲವಾರು ವಾಹನ ತಯಾರಕರು ಮತ್ತು ಮಾರಾಟಗಾರರು ಮೇ ಮೊದಲಾರ್ಧದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಮುಚ್ಚಿದ್ದು, ಕ್ರಮೇಣ ಉತ್ಪಾದನೆ ಆರಂಭಿಸಿದ್ದಾರೆ. ಈ ಲಾಕ್‌ಡೌನ್ ಸಂದರ್ಭದಲ್ಲಿ ಕೇವಲ ಒಂದು ಶಿಫ್ಟ್‌ನಲ್ಲಿ ಕೆಲಸ ಮಾಡಿದ್ದಾರೆ.

ಜುಲೈ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ

ಜುಲೈ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ

''ಜೂನ್‌ 2020ರ ತ್ರೈಮಾಸಿಕಕ್ಕಿಂತ 2021ರ ಜೂನ್‌ ತ್ರೈಮಾಸಿಕದಲ್ಲಿ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮವು ಕಡಿಮೆಯಿರುತ್ತದೆ. ಏಕೆಂದರೆ ಲಾಕ್‌ಡೌನ್‌ಗಳ ನಿಯಮಗಳ ಸಡಿಲಿಕೆಯು ಆಯಾ ರಾಜ್ಯಗಳ ಮೇಲೆ ಅವಲಂಬಿಸಿರುತ್ತದೆ'' ಎಂದು ಯುಬಿಎಸ್ ಸೆಕ್ಯುರಿಟೀಸ್ ಇಂಡಿಯಾದ ಅರ್ಥಶಾಸ್ತ್ರಜ್ಞ ತನ್ವೀ ಗುಪ್ತಾ ಜೈನ್ ಹೇಳಿದ್ದಾರೆ.

'' ಕೆಲವು ರಾಜ್ಯಗಳು ಈಗಾಗಲೇ ಲಾಕ್‌ಡೌನ್‌ನಲ್ಲಿ ಸೀಮಿತ ವಿಶ್ರಾಂತಿಯನ್ನ ಘೋಷಿಸಿದೆ. ಇದು ಜೂನ್‌ನಲ್ಲಿ ಆರ್ಥಿಕ ಚಟುವಟಿಕೆ ಚೇತರಿಕೆ ಕಂಡು, ಜುಲೈ ವೇಳೆಗೆ ಮಾತ್ರ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಯಿದೆ'' ಎನ್ನಲಾಗಿದೆ.

ಕೆಲವು ಪ್ರಮುಖ ಡೇಟಾ ಪ್ರಕಾರ ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿನ ಚಟುವಟಿಕೆಯ ಕುಸಿತದ ತೀವ್ರತೆ ಕಡಿಮೆಯಾಗಿತ್ತು. ಆದ್ದರಿಂದ ಚೇತರಿಕೆಯ ಪ್ರಮಾಣವು ಶೀಘ್ರದಲ್ಲೇ ಆಗುವ ನಿರೀಕ್ಷೆಯಿದೆ.

English summary

Covid 2nd Wave Lockdown Impact On Demand and Spending

Covid 2nd wave lockdown impact on all fronts including retail, grocery, transit stations and toll collections as compared to March and April.
Story first published: Monday, May 31, 2021, 10:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X