Credit Suisse: ಹೂಡಿಕೆದಾರರಲ್ಲಿ ಆತಂಕ, $54 ಬಿಲಿಯನ್ ಸಾಲ ಪಡೆಯಲು ಮುಂದಾದ ಕ್ರೆಡಿಟ್ ಸ್ಯೂಸ್

ಯುಎಸ್‌ನಲ್ಲಿ ಸಿಲಿಕಾನ್‌ ವ್ಯಾಲಿ ಬ್ಯಾಂಕ್ ಬಂದ್ ಆದ ಬಳಿಕ ಹಲವಾರು ಬ್ಯಾಂಕ್‌ಗಳಲ್ಲಿ ಆತಂಕ ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ಹೂಡಿಕೆದಾರರಲ್ಲಿ ಆತಂಕವಿದೆ. ಹೂಡಿಕೆದಾರರ ನಡುವಿನ ಗೊಂದಲದಿಂದಾಗಿ, ಡೆಪಾಸಿಟ್ ಬಿಕ್ಕಟ್ಟಿನ ಮಧ್ಯೆ ಕ್ರೆಡಿಟ್ ಸ್ಯೂಸ್ ಷೇರು ಶೇಕಡ 24ರಷ್ಟು ಇಳಿಕೆಯಾಗಿದೆ. ಇದಾದ ಬೆನ್ನಲ್ಲೇ ಹೂಡಿಕೆದಾರರ ಆತಂಕವನ್ನು ನಿವಾರಣೆ ಮಾಡಲು ಕ್ರೆಡಿಟ್ ಸ್ಯೂಸ್ ಸ್ವಿಸ್‌ ಸೆಂಟ್ರಲ್ ಬ್ಯಾಂಕ್‌ನಿಂದ 54 ಬಿಲಿಯನ್ ಡಾಲರ್ ಸಾಲವನ್ನು ಪಡೆಯಲು ಮುಂದಾಗಿದೆ.

ನಿಯಂತ್ರಕ ನಿರ್ಬಂಧಗಳಿಂದ ಹೆಚ್ಚಿನ ಹಣಕಾಸು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕ್ರೆಡಿಟ್ ಸ್ಯೂಸ್‌ನ ಅತೀ ದೊಡ್ಡ ಹೂಡಿಕೆದಾರರು ಹೇಳಿದ ಬಳಿಕ ಬ್ಯಾಂಕ್‌ನ ಷೇರುಗಳು ಮಾರಾಟ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಆರಂಭವಾದ ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ಯುರೋಪ್‌ಗೆ ತಲುಪಿದೆ. ಈ ಖಾಸಗಿ ಬ್ಯಾಂಕ್ ಬಗ್ಗೆ ಹೂಡಿಕೆದಾರರಲ್ಲಿ ಇರುವ ಆತಂಕವನ್ನು ಕಡಿಮೆ ಮಾಡುವ ಪ್ರಯತ್ನವನ್ನು ನಿಯಂತ್ರಕರು ಬುಧವಾರ ಮಾಡಿದ್ದಾರೆ.

Credit Suisse:$54 ಬಿಲಿಯನ್ ಸಾಲ ಪಡೆಯಲು ಮುಂದಾದ ಕ್ರೆಡಿಟ್ ಸ್ಯೂಸ್

ಬ್ಯಾಂಕಿಂಗ್ ವಲಯದಲ್ಲಿ ಹುಟ್ಟಿದ ಭಯ

ನಿರಂತರವಾಗಿ ಬ್ಯಾಂಕಿಂಗ್ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರಮುಖವಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್‌ ನಷ್ಟದಲ್ಲಿ ಬಂದ್ ಆದ ಬಳಿಕ ಈ ಬ್ಯಾಂಕಿಂಗ್ ಬಿಕ್ಕಟ್ಟು ವಿಸ್ತರಣೆಯಾಗುತ್ತಿದೆ. ಅಮೇರಿಕಾದಲ್ಲಿ ಮತ್ತೊಂದು ಬ್ಯಾಂಕ್ ಕೂಡಾ ಮುಚ್ಚುವ ಆತಂಕ ಉಂಟಾಗಿದೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಏಷ್ಯನ್ ಸ್ಟಾಕ್‌ಗಳು ಗುರುವಾರ ವಾಲ್‌ ಸ್ಟ್ರೀಟ್‌ನಲ್ಲಿ ಕುಸಿತವನ್ನು ಕಂಡಿದೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಸಭೆಗೂ ಮುನ್ನ ಹೂಡಿಕೆದಾರರು ಚಿನ್ನ, ಬಾಂಡ್‌ಗಳು ಮತ್ತು ಡಾಲರ್‌ಗಳನ್ನು ಖರೀದಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ನಷ್ಟವು ಉಂಟಾದ ಬಳಿಕ ಕ್ರೆಡಿಟ್ ಸ್ಯೂಸ್ ಯುರೋಪಿಯನ್ ಸಮಯದಲ್ಲಿ ಮುಂಜಾನೆಯಾದಾಗ ಪ್ರಕಟಣೆಯನ್ನು ನೀಡಿದ್ದು, ನಷ್ಟಗಳನ್ನು ಸರಿದೂಗಿಸುವ ಪ್ರಯತ್ನವನ್ನು ಮಾಡಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್‌ನಿಂದ 54 ಬಿಲಿಯನ್ ಡಾಲರ್‌ನಷ್ಟು ಸಾಲವನ್ನು ಪಡೆಯುವುದಾಗಿ ಹೇಳಿದೆ. ಈ ಮಧ್ಯೆ ಹೂಡಿಕೆದಾರರು ಕೇಂದ್ರ ಬ್ಯಾಂಕ್ ಮತ್ತು ಏಷ್ಯಾದಲ್ಲಿನ ಇತರೆ ನಿಯಂತ್ರಕರು ಈ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಏನು ಪ್ರಯತ್ನ ಮಾಡುತ್ತದೆ ಎಂದು ಗಮನಿಸುತ್ತಿದ್ದಾರೆ.

ಹೂಡಿಕೆದಾರರ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ವಿಸ್ ಫೈನಾನ್ಶಿಯಲ್ ರೆಗ್ಯೂಲೇಟರ್ ಎಫ್‌ಐಎನ್‌ಎಂಎ ಮತ್ತು ರಾಷ್ಟ್ರದ ಕೇಂದ್ರ ಬ್ಯಾಂಕ್ ಜಂಠಿ ಹೇಳಿಕೆಯನ್ನು ನೀಡಿದೆ. "ಪ್ರಮುಖ ಬ್ಯಾಂಕ್‌ಗಳ ಮೇಲೆ ವಿಧಿಸಲಾದ ಬಂಡವಾಳ ಮತ್ತು ಸಾಲದ ಅಗತ್ಯತೆಯನ್ನು ಪೂರೈಸಲಾಗುವುದು," ಎಂದು ಹೇಳಿದೆ. ಅಗತ್ಯವಿದ್ದರೆ ಕ್ರೆಡಿಟ್ ಸ್ಯೂಸ್ ಬ್ಯಾಂಕ್ ಕೇಂದ್ರೀಯ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದು ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಸ್ವಿಸ್ ಫೈನಾನ್ಶಿಯಲ್ ರೆಗ್ಯೂಲೇಟರ್ ಎಫ್‌ಐಎನ್‌ಎಂಎ ಮತ್ತು ರಾಷ್ಟ್ರದ ಕೇಂದ್ರ ಬ್ಯಾಂಕ್ ಜಂಠಿ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಕ್ರೆಡಿಟ್ ಸ್ಯೂಸ್ ಬ್ಯಾಂಕ್ ಹೇಳಿದೆ. 2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಮೊದಲ ಬಾರಿಗೆ ಮೊದಲ ಬಾರಿಗೆ ಒಂದು ಬ್ಯಾಂಕ್‌ಗೆ ಸಾಲದ ಅವಕಾಶ ನೀಡಿದ್ದರೆ, ಅದು ಕ್ರೆಡಿಟ್ ಸ್ಯೂಸ್ ಬ್ಯಾಂಕ್ ಆಗಿದೆ. ಇನ್ನು ಸಿಲಿಕಾನ್ ವ್ಯಾಲಿ ಬ್ಯಾಕ್ ಮತ್ತು ಸಿಗ್ನೇಚರ್ ಬ್ಯಾಂಕ್ ಕುಸಿತದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+