ಕ್ರೀಡಾ ಕ್ಷೇತ್ರದಲ್ಲಿ ಇದ್ದು, ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಗಳ ಮೂಲಕ ಅತಿ ಹೆಚ್ಚು ಸಂಪಾದನೆ ಮಾಡುತ್ತಿರುವವರು ಎಂಬ ಶ್ರೇಯವನ್ನು 2019ರ ಜುಲೈನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಹೊಂದಿದ್ದರು. ಇದೀಗ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಗಳಿಸುವ ಕ್ರೀಡಾ ತಾರೆ ಎಂಬ ಕಿರೀಟ ಅವರ ಪಾಲಾಗಿದೆ ಎಂದು ಓಪನ್ ಡೋರ್ಸ್ ವರದಿ ಮಾಡಿದೆ.
ಅಥ್ಲೀಟ್ ಗಳು ತಮ್ಮ ಕಾರ್ಪೊರೇಟ್ ಪಾರ್ಟನರ್ ಗಳ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲು ಈ ಸಂಸ್ಥೆಯು ನೆರವು ನೀಡುತ್ತದೆ. ಅಂದ ಹಾಗೆ ಪೋರ್ಚುಗೀಸ್ ಮೂಲದ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಒಂದು ಟ್ವೀಟ್ ಗೆ 8,68,606 ಅಮೆರಿಕನ್ ಡಾಲರ್ ಸಂಪಾದಿಸುತ್ತಾರೆ. ಅಂದರೆ ಭಾರತೀಯ ರುಪಾಯಿಗಳಲ್ಲಿ ಹೇಳಬೇಕೆಂದರೆ, ಒಂದು ಟ್ವೀಟ್ ಗೆ 6.16 ಕೋಟಿ.
ಎರಡನೇ ಸ್ಥಾನದಲ್ಲಿ ಇರುವ ಆಂಡ್ರೆ ಇನಿಯೆಸ್ಟಾಗೆ 5,90,825 ಅಮೆರಿಕನ್ ಡಾಲರ್ ಮತ್ತು ನೇಯ್ಮರ್ ಗೆ 4,78,138 ಅಮೆರಿಕನ್ ಡಾಲರ್ ದೊರೆಯುತ್ತದೆ. ಫುಟ್ಬಾಲ್ ಹೊರತುಪಡಿಸಿದರೆ ಎನ್ ಬಿಎ ಆಟಗಾರ ಲೆಬ್ರಾನ್ ಜೇಮ್ಸ್ ಗೆ ಒಂದು ಪೋಸ್ಟ್ ಗೆ 4,70,356 ಅಮೆರಿಕನ್ ಡಾಲರ್ ಬರುತ್ತಿದೆ.

ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಇರುವವರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಅವರ ಒಂದು ಟ್ವೀಟ್ ಗೆ 3,50,101 ಅಮೆರಿಕನ್ ಡಾಲರ್ ಸಂಪಾದಿಸುತ್ತಾರೆ. ಈ ಪಟ್ಟಿಯಲ್ಲಿ ಇರುವ ಏಕೈಕ ಮಹಿಳೆ ಸೆರೆನಾ ವಿಲಿಯಮ್ಸ್. ಅವರು ಹದಿಮೂರನೇ ಸ್ಥಾನದಲ್ಲಿ ಇದ್ದು, ಒಂದು ಪೋಸ್ಟ್ ಗೆ 1,15,926 ಅಮೆರಿಕನ್ ಡಾಲರ್ ಗಳಿಸುತ್ತಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications