ಆಯುಷ್ಮಾನ್ ಖುರಾನಾ ಅಭಿನಯದ ಸಿನಿಮಾಗಳು ನೂರು ಕೋಟಿಯ ಕ್ಲಬ್ ಸೇರುವುದು ಸಾಮಾನ್ಯ ಎಂಬಂತೆ ಆಗಿತ್ತು. 2018ರಲ್ಲಿ ಬದಾಯಿ ಹೋ ಸಿನಿಮಾದಿಂದ ಶುರುವಾದದ್ದು, ಈಚೆಗೆ ಡ್ರೀಮ್ ಗರ್ಲ್ ಮತ್ತು ಬಾಲಾ ಮೂಲಕ ಡಬಲ್ ಸೆಂಚುರಿ ಹೊಡೆದಿದ್ದರು ಆಯುಷ್ಮಾನ್ ಖುರಾನಾ. ಆ ಕಾರಣಕ್ಕೆ ಶುಭ್ ಮಂಗಳ್ ಜಾದಾ ಸಾವಧಾನ್ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿತ್ತು.
ಈ ಸಿನಿಮಾ ಸಲಿಂಗ ಕಾಮದ ವಿಷಯವನ್ನು ಒಳಗೊಂಡಿದ್ದು, ವೀಕ್ಷಕರನ್ನು ಸೆಳೆಯುವ ಸಾಮರ್ಥ್ಯ ಕಡಿಮೆ ಎಂದುಕೊಂಡಿದ್ದರೂ 75 ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಗಳಿಸಬಹುದು ಎಂಬ ಅಂದಾಜಿತ್ತು. ಜಾದಾ ಸಾವಧಾನ್ ಆರಂಭವು 9.55 ಕೋಟಿ ರುಪಾಯಿ ಜತೆಗೆ ಉತ್ತಮವಾಗಿಯೇ ಆಗಿತ್ತು. ಆದರೂ ಆಯುಷ್ಮಾನ್ ಖುರಾನಾ ಅವರ ಆರ್ಟಿಕಲ್ 15 ಸಿನಿಮಾ ಒಟ್ಟಾರೆ ಸಂಗ್ರಹಿಸಿದ 65.45 ಕೋಟಿ ರುಪಾಯಿ ದಾಟುವುದು ಅನುಮಾನವಾಗಿದೆ.
ಶುಭ್ ಮಂಗಳ್ ಜಾದಾ ಸಾವಧಾನ್
ಶುಭ್ ಮಂಗಳ್ ಜಾದಾ ಸಾವಧಾನ್ ಸಿನಿಮಾ ಆ ದಾಖಲೆಯನ್ನು ತಲುಪುವಲ್ಲಿ ಅಥವಾ ಸ್ವಲ್ಪ ಮಟ್ಟಿಗೆ ದಾಟುವಲ್ಲಿ ಸಫಲವಾಗಬಹುದು. ಆನಂದ್ ಎಲ್ ರಾಯ್ ಪ್ರೊಡಕ್ಷನ್ ನ ಶುಭ್ ಮಂಗಳ್ ಜಾದಾ ಸಾವಧಾನ್ ಈ ತನಕ (ಮೂರನೇ ವಾರದ ಕೊನೆಗೆ) 61.01 ಕೋಟಿ ರುಪಾಯಿ ಸಂಗ್ರಹಿಸಿದೆ.
ನಿರ್ಮಾಪಕರಿಗೆ ಟೇಬಲ್ ಪ್ರಾಫಿಟ್
ಸದ್ಯಕ್ಕೆ ಈ ಸಿನಿಮಾ ಲಾಭ ಮಾಡುತ್ತಿದೆ. ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳ ಮಾರಾಟದಿಂದಲೇ ನಿರ್ಮಾಪಕರಿಗೆ ಟೇಬಲ್ ಪ್ರಾಫಿಟ್ ಬಂದಿದೆ. ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದ್ದರಿಂದ ಹೆಚ್ಚಿನ ಲಾಭ ಬಂದಿಲ್ಲ. ಆದರೂ ಇದು ಯಶಸ್ವಿ ಸಿನಿಮಾ ಎಂದು ಕರೆಯಲು ಬೇಕಾದಷ್ಟು ಹಣ ಮಾಡಿದೆ.
ಬಾಗಿ 3 ಸಿನಿಮಾ ಬಿಡುಗಡೆಯಿಂದ ಸಮಸ್ಯೆಯಾಗಿಲ್ಲ
ಇನ್ನು ತಾಪ್ಸಿ ಪನ್ನು ಅಭಿನಯದ ಥಪ್ಪಡ್ ಕೂಡ ಎರಡನೇ ವಾರದಲ್ಲಿ ಉತ್ತಮ ಗಳಿಕೆ ಕಂಡಿದೆ. ಮೊದಲನೇ ವಾರದಲ್ಲಿ 22.79 ಕೋಟಿ ಸಂಗ್ರಹ ಮಾಡಿದೆ. ಬಾಗಿ 3 ಸಿನಿಮಾ ಬಿಡುಗಡೆ ಆಗಿದ್ದರಿಂದ ಥಪ್ಪಡ್ ಗೆ ಹಿನ್ನಡೆ ಆಗಬಹುದು ಎನ್ನಲಾಗುತ್ತಿತ್ತು. ಆದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಥಪ್ಪಡ್ ಸಿನಿಮಾ ಯಶಸ್ವಿಯಾಗಿದೆ.
ತಾಪ್ಸಿ ಪನ್ನು ಹಿಂದಿನ ಸಿನಿಮಾಗಳ ದಾಖಲೆ ಬ್ರೇಕ್
ತಾಪ್ಸಿ ಪನ್ನು ಅಭಿನಯದ ಥಪ್ಪಡ್ ಎರಡನೇ ವಾರಾಂತ್ಯಕ್ಕೆ 27.84 ಕೋಟಿ ರುಪಾಯಿ ಸಂಗ್ರಹಿಸಿದೆ. ಈಗಾಗಲೇ ತಾಪ್ಸಿಯ ಈ ಹಿಂದಿನ ಮುಲ್ಕ್ ಸಿನಿಮಾಗಿಂತಲೂ ಹೆಚ್ಚು ಸಂಗ್ರಹಿಸಿದೆ. ಮುಲ್ಕ್ ಸಿನಿಮಾದ ಒಟ್ಟಾರೆ ಕಲೆಕ್ಷನ್ 21.10 ಕೋಟಿ ರುಪಾಯಿ ಆಗಿತ್ತು. ಅಷ್ಟೇ ಅಲ್ಲ, ತಾಪ್ಸಿ ಪನ್ನು ಅಭಿನಯಿಸಿದ್ದ ಸಾಂಡ್ ಕೀ ಆಂಖ್ (ರು. 23.40 ಕೋಟಿ) ಸಿನಿಮಾಗಿಂತಲೂ ಹೆಚ್ಚು ವಸೂಲಿ ಮಾಡಿದೆ. ಈಗಿನ ಸ್ಥಿತಿಯನ್ನು ವಿಶ್ಲೇಷಿಸುವುದಾದರೆ ಥಪ್ಪಡ್ ಸಿನಿಮಾ ಒಟ್ಟಾರೆ 33ರಿಂದ 35 ಕೋಟಿ ರುಪಾಯಿ ಸಂಗ್ರಹಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಹೇಳಬೇಕೆಂದರೆ ಆ ಸಿನಿಮಾ ಹಿಟ್ ಅಲ್ಲ. ಆದರೂ ಸ್ಯಾಟಲೈಟ್, ಡಿಜಿಟಲ್ ಹಕ್ಕು ಮಾರಾಟದಿಂದ ಉತ್ತಮ ಮೊತ್ತ ಸಂಗ್ರಹವಾಗಿದೆ.


Click it and Unblock the Notifications