ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮತ್ತೆ ಕ್ರಿಪ್ಟೋಕರೆನ್ಸಿ ವಿರುದ್ಧ ಧ್ವನಿಯನ್ನು ಎತ್ತಿದ್ದಾರೆ. ಜನವರಿ 13ರಂದು ಕ್ರಿಪ್ಟೋಕರೆನ್ಸಿಯ ಬಗ್ಗೆ ಆತಂಕವನ್ನು ಶಕ್ತಿಕಾಂತ್ ದಾಸ್ ವ್ಯಕ್ತಪಡಿಸಿದ್ದಾರೆ. ಕ್ರಿಪ್ಟೋಕರೆನ್ಸಿ ಅತೀ ಕೆಟ್ಟ ಗ್ಯಾಂಬ್ಲಿಂಗ್ ಆಗಿದೆ, ಅದನ್ನು ಬೆಳೆಯಲು ನಾವು ಅವಕಾಶ ಮಾಡಿಕೊಡಬಾರದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
"ಕ್ರಿಪ್ಟೋಕರೆನ್ಸಿ ಅತೀ ಕೆಟ್ಟದಾದ ಬೆಟ್ಟಿಂಗ್ ಆಗಿದೆ. ಕ್ರಿಪ್ಟೋಕರೆನ್ಸಿ ಇನ್ನಷ್ಟು ಬೆಳೆಯಲು ನಾವು ಅವಕಾಶ ಮಾಡಿಕೊಟ್ಟರೆ, ಕೇಂದ್ರ ಬ್ಯಾಂಕ್‌ನ ಅಥಾರಿಟಿಯನ್ನೇ ಅದು ದುರ್ಬಳಗೊಳಿಸುವ ಸಾಧ್ಯತೆಯಿದೆ. ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ಆರ್‌ಬಿಐನ ನಿಲುವು ಸರಿಯಾಗಿದೆ. ಎಲ್ಲ ಕ್ರಿಪ್ಟೋಕರೆನ್ಸಿಗನ್ನು ಬ್ಯಾನ್ ಮಾಡಬೇಕು," ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಶಕ್ತಿಕಾಂತ್ ದಾಸ್ ಪ್ರಕಾರ, ಕ್ರಿಪ್ಟೋಕರೆನ್ಸಿಯಿಂದಾಗಿ ಮನಿ ಲಾಂಡರಿಂಗ್, ಉಗ್ರ ಸಂಘಟನೆಗೆ ಹಣಕಾಸು ಸಹಾಯ ಹೊರತುಪಡಿಸಿ ಬೇರೆ ಪ್ರಮುಖವಾದ ಸಮಸ್ಯೆಗಳು ಈ ಕ್ರಿಪ್ಟೋಕರೆನ್ಸಿ ನಡೆದಿಲ್ಲ. "ಕ್ರಿಪ್ಟೋ ಎಂದರೇನು?, ಕೆಲವರು ಇದನ್ನು ಅಸೆಟ್ ಎಂದು ಕರೆಯಲಾಗುತ್ತದೆ. ಕೆಲವರು ಇದರನ್ನು ಹಣಕಾಸು ಪ್ರೊಡೆಕ್ಟ್ ಎಂದು ಕರೆಯುತ್ತಾರೆ. ಆದರೆ ಕ್ರಿಪ್ಟೋಕರೆನ್ಸಿಯಿಂದ ಅತೀ ದೊಡ್ಡ ಸಮಸ್ಯೆಯೇನು ಉಂಟಾಗಿಲ್ಲ," ಎಂದು ಉಲ್ಲೇಖಿಸಿದ್ದಾರೆ.

"ಯಾವುದರ ಮೌಲ್ಯವು ಬರೀ ನಂಬಿಕೆಯ ಮೇಲೆ ನಿಂತಿರುತ್ತದೆ, ಊಹೆಯ ಮೇಲೆ ನಿಂತಿರುತ್ತದೆ, ಅದು ಉತ್ತಮ ಹೂಡಿಕೆ ಏನಲ್ಲ," ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಆರ್‌ಬಿಐ ಗವರ್ನರ್ ಕ್ರಿಪ್ಟೋಕರೆನ್ಸಿ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಭಾರತದಲ್ಲಿ ಭವಿಷ್ಯದಲ್ಲಿ ಶೇಕಡ 20ರಷ್ಟು ವಹಿವಾಟು ಸಂಪೂರ್ಣವಾಗಿ ಕ್ರಿಪ್ಟೋಕರೆನ್ಸಿ ಮೂಲಕ ನಡೆಯುವ ಸಾಧ್ಯತೆಯ ಬಗ್ಗೆಯೂ ವರದಿಯಾಗಿದೆ.
'ಕಾಯಿನ್' ಇದ್ದ ಮಾತ್ರಕ್ಕೆ ಅದು ಹಣವಲ್ಲ!
ಕ್ರಿಪ್ಟೋ ಉತ್ಪನ್ನಗಳನ್ನು ಹಣದ ನಡುವೆ ಹಲವಾರು ಗೊಂದಲಗಳ ವಿರುದ್ಧ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿವಾ ಪ್ರತಿಕ್ರಿಯೆ ನೀಡಿದ್ದರು. ಬಿಟ್‌ಕಾಯಿನ್‌ನಲ್ಲಿ 'ಕಾಯಿನ್' ಎಂಬ ಪದ ಇದ್ದ ಮಾತ್ರಕ್ಕೆ ಅದು ಹಣವಲ್ಲ ಎಂದು ಖಡಕ್ ಆಗಿ ಹೇಳಿದ್ದರು.
ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ ಕುರಿತು ನಡೆದ ಅಧಿವೇಶನದಲ್ಲಿ ಮಾತನಾಡಿದ ಐಎಂಎಫ್ ಮುಖ್ಯಸ್ಥ ಕ್ರಿಸ್ಟಾಲಿನಾ ಜಾರ್ಜಿವಾ, "ಕ್ರಿಪ್ಟೋ ಉತ್ಪನ್ನಗಳು ಹೆಚ್ಚು ಕಡಿಮೆ ವೆಚ್ಚದಲ್ಲಿ ಮತ್ತು ಉತ್ತಮ ಒಳಗೊಳ್ಳುವಿಕೆಯಲ್ಲಿ ವೇಗವಾಗಿ ಲಾಭವನ್ನು ನೀಡಬಹುದು. ಆದರೆ ಸೇಬು ಬೇರೆ ಬಾಳೆಹಣ್ಣು ಬೇರೆಯೇ ಎಂಬುವುದು ನಮಗೆ ತಿಳಿದಿರುವುದು ಅವಶ್ಯಕವಾಗಿದೆ. ಕ್ರಿಪ್ಟೋ ವಿಚಾರದಲ್ಲಿ ನಿಯಂತ್ರಣ ಮುಖ್ಯವಾಗಿದೆ," ಎಂದು ಉಲ್ಲೇಖ ಮಾಡಿದ್ದರು.
"ನಾನು ಯಾವಾಗಲೂ ಕ್ರಿಪ್ಟೋವನ್ನು ಸ್ವತ್ತು ಎಂದು ಉಲ್ಲೇಖಿಸಿ ಮಾತನಾಡುತ್ತೇನೆಯೇ ಹೊರತು ಅದನ್ನು ಹಣ ಎಂದು ಅಲ್ಲ. ಯಾವುದೇ ಕರೆನ್ಸಿಗೆ, ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಕ್ರಿಪ್ಟೋ ಕರೆನ್ಸಿಯಲ್ಲಿ ಯಾರೂ ಕೂಡಾ ಜವಾಬ್ದಾರರಲ್ಲ," ಎಂದು ಐಎಂಎಫ್ ಮುಖ್ಯಸ್ಥ ಕ್ರಿಸ್ಟಾಲಿನಾ ಜಾರ್ಜಿವಾ ವಿವರಿಸಿದ್ದರು.
ಕ್ರಿಪ್ಟೋ ವಿರುದ್ಧ ಕೇಂದ್ರ ಸರ್ಕಾರದ ಚಿತ್ತ
ಭಾರತದಲ್ಲಿ ಕ್ರಿಪ್ಟೋಕರೆನ್ಸಿ (ಡಿಜಿಟಲ್ ಕರೆನ್ಸಿ) ರದ್ದು ಮಾಡಲಾಗುತ್ತದೆ ಎಂಬ ವರದಿಗಳ ನಡುವೆ ಕೇಂದ್ರ ಬಜೆಟ್ ಬಳಿಕ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಚೌಕಟ್ಟನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ 10 ಕೋಟಿಗೂ ಅಧಿಕ ಜನರು ಹೂಡಿಕೆ ಮಾಡುತ್ತಿದ್ದು, ಅತಿದೊಡ್ಡ ಮಾರುಕಟ್ಟೆ ಎನಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಡಿಜಿಟಲ್ ಕರೆನ್ಸಿಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರವು ಡಿಜಿಟಲ್ ಕರೆನ್ಸಿ ವರ್ಗಾವಣೆ ಮೇಲೆ ತೆರಿಗೆ ವಿಧಿಸುವುದಕ್ಕೆ ನಿರ್ಧರಿಸಿದೆ. ಬಳಿಕ ಶೇಕಡ 30ರಷ್ಟು ಟಿಡಿಎಸ್ ಅನ್ನು ವಿಧಿಸಿದೆ.


Click it and Unblock the Notifications