ಸದ್ಯ ಭಾರೀ ಸುದ್ದಿಯಾಗುತ್ತಿರುವ ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಮೌಲ್ಯವು ಸೋಮವಾರ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿದ್ದು, 2 ಟ್ರಿಲಿಯನ್ ಡಾಲರ್‌ಗೆ ತಲುಪಿದೆ.
ಡೇಟಾ ಮತ್ತು ಮಾರುಕಟ್ಟೆ ಟ್ರ್ಯಾಕರ್‌ಗಳಾದ ಕಾಯಿನ್‌ಜೆಕೊ ಮತ್ತು ಬ್ಲಾಕ್‌ಫೋಲಿಯೊ ಪ್ರಕಾರ, ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಬಂಡವಾಳೀಕರಣವು ಸೋಮವಾರ 2 ಟ್ರಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ಕೆಲವು ತಿಂಗಳಿನಲ್ಲಿ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಹೆಚ್ಚಿದ್ದು, ಚಿಲ್ಲರೆ ಹೂಡಿಕೆದಾರರಿಂದ ಸಾಕಷ್ಟು ಆಕರ್ಷಣೆಗೆ ಒಳಗಾಗಿದೆ.

ಸೋಮವಾರ ಮಧ್ಯಾಹ್ನದ ಹೊತ್ತಿಗೆ, ಕ್ರಿಪ್ಟೋ ಮಾರುಕಟ್ಟೆ ಮೌಲ್ಯವು $ 2.02 ಟ್ರಿಲಿಯನ್ ಆಗಿತ್ತು. ಬಿಟ್ ಕಾಯಿನ್ ಮಧ್ಯಾಹ್ನದ ವೇಳೆಗೆ ಶೇ 1.4ರಷ್ಟು ಏರಿಕೆ ಕಂಡು 59 ಸಾವಿರ ಡಾಲರ್ ಮೌಲ್ಯ ಗಳಿಸಿತು. ಜೊತೆಗೆ ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ 2.02 ಟ್ರಿಲಿಯನ್ ಡಾಲರ್ ದಾಟಿತು. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ.
ಮಾರ್ಚ್ ಮಧ್ಯದಲ್ಲಿ ಬಿಟ್‌ಕಾಯಿನ್ 61,000 ಡಾಲರ್‌ಗಿಂತ ಹೆಚ್ಚಿನ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಹೆಚ್ಚಿನ ಏರಿಳಿತ ಕಂಡಿರಲಿಲ್ಲ.
ಏನಿದು ಬಿಟ್‌ಕಾಯಿನ್?
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.


Click it and Unblock the Notifications