For Quick Alerts
ALLOW NOTIFICATIONS  
For Daily Alerts

ಡಿ.1ರಂದು ಕ್ರಿಪ್ಟೋ ಮಾರುಕಟ್ಟೆಯಲ್ಲಿ ಕರೆನ್ಸಿಗಳ ಮೌಲ್ಯದಲ್ಲಿ ಏರಿಕೆ

|

ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಕೆಲವು ಕರೆನ್ಸಿಗಳ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ. ಬುಧವಾರ (ಡಿಸೆಂಬರ್ 1)ದಂದು ಬಿಟ್‌ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಬಹುತೇಕ ಕರೆನ್ಸಿಗಳ ಮೌಲ್ಯದಲ್ಲಿ ಏರಿಕೆಯಾಗಿದೆ. ಒಟ್ಟಾರೆ, ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಮೌಲ್ಯ 2,653,436,660,555 ಯುಎಸ್ ಡಾಲರ್ ಗೇರಿದೆ. ಬ್ಯಾಂಕ್ ಲೆಸ್ ಡಾಯೋ ಕರೆನ್ಸಿ ಮೌಲ್ಯದಲ್ಲಿ ಅತಿಹೆಚ್ಚು ಏರಿಕೆಯಾಗಿದ್ದು, ಶೇಕಡಾ 6209.04ರಷ್ಟು ಹೆಚ್ಚಳವಾಗಿದೆ.

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ.

ಚಿನ್ನದ ಬೆಲೆ ಕೊಂಚ ಇಳಿಕೆ: ಡಿಸೆಂಬರ್ 01ರ ದರ ತಿಳಿದುಕೊಳ್ಳಿ ಚಿನ್ನದ ಬೆಲೆ ಕೊಂಚ ಇಳಿಕೆ: ಡಿಸೆಂಬರ್ 01ರ ದರ ತಿಳಿದುಕೊಳ್ಳಿ

ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ನಿಯಂತ್ರಣ ಹೇರಿವೆ. ಹೀಗಿದ್ದರೂ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಕ್ರಿಪ್ಟೋಕರೆನ್ಸಿಗಳ ಖರೀದಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಭಾರತದಲ್ಲಿ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರ ಹೂಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಭಾರತೀಯರೇ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇಳಿಕೆಯಾಗಿದ್ದರೂ ಹಣದ ಹೂಡಿಕೆ ಪ್ರಮಾಣ ಮೊದಲಿಗಿಂತ ಏರಿಕೆಯಾಗಿದೆ.

ಹಾಗಿದ್ದರೆ ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಡೋಜ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಮತ್ತು ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಇತ್ತೀಚಿನ ದರ ಎಷ್ಟಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಬಿಟ್‌ಕಾಯಿನ್ ಬೆಲೆಯಲ್ಲಿ ಏರಿಕೆ

ಬಿಟ್‌ಕಾಯಿನ್ ಬೆಲೆಯಲ್ಲಿ ಏರಿಕೆ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 57,222.36 ಯುಎಸ್ ಡಾಲರ್‌ಗೆ ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದು, ಶೇ 0.88ರಷ್ಟು ಏರಿಕೆಯಾಗಿದೆ. ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 1,079,741,396,469 ಯುಎಸ್ ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 59,113.40 ಡಾಲರ್ ಮತ್ತು ಕಡಿಮೆ ಬೆಲೆ 56,597.16 ಡಾಲರ್ ಆಗಿತ್ತು. ಕಳೆದ ವಾರದಲ್ಲಿ ಶೇ.1.08ರಷ್ಟು ಏರಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 96.81 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 68,990.90 ಡಾಲರ್ ಆಗಿದೆ.

ಎಥೆರಿಯಮ್

ಎಥೆರಿಯಮ್

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 4,742.20 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 6.61ರಷ್ಟು ಏರಿಕೆಯಾಗಿದ್ದು, ಈ ಮೂಲಕ ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 562,202,757,837 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 4,780.73 ಡಾಲರ್ ಮತ್ತು ಕಡಿಮೆ ಬೆಲೆ 4,435.08 ಡಾಲರ್ ಆಗಿತ್ತು. ಕಳೆದ ವಾರ ಶೇ 10.73ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಎಥೆರಿಯಮ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 541.58 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,865.57 ಡಾಲರ್‌ನಷ್ಟಿದೆ.

ಎಕ್ಸ್‌ಆರ್‌ಪಿ

ಎಕ್ಸ್‌ಆರ್‌ಪಿ

ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 1.01 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 2.74ರಷ್ಟು ಏರಿಕೆಯಾಗಿದ್ದು, ಈ ಮೂಲಕ ಎಕ್ಸ್‌ಆರ್‌ಪಿ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 47,602,570,702 ಡಾಲರ್‌ ಆಗಿದೆ. ಕಳೆದ 24 ಗಂಟೆಗಳಲ್ಲಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 1.03 ಡಾಲರ್ ಮತ್ತು ಕನಿಷ್ಠ ಬೆಲೆ 0.98 ಡಾಲರ್ ಆಗಿತ್ತು. ಕಳೆದ ವಾರ ಶೇ 2.79ರಷ್ಟು ಇಳಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, XRP ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 354 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.40 ಡಾಲರ್‌ನಷ್ಟಿದೆ.

ಕಾರ್ಡಾನೊ

ಕಾರ್ಡಾನೊ

ಕಾರ್ಡಾನೊ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 1.59 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 1.49ರಷ್ಟು ಏರಿಕೆಯಾಗಿದ್ದು, ಈ ಮೂಲಕ ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 53,163,789,185 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 1.62 ಡಾಲರ್ ಮತ್ತು ಕಡಿಮೆ ಬೆಲೆ 1.54 ಡಾಲರ್ ಆಗಿತ್ತು. ಕಳೆದ ವಾರ ಶೇ. 5.37ರಷ್ಟು ಇಳಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಕಾರ್ಡಾನೊ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ ಶೇ.764.10 ಪ್ರಮಾಣದ ಆದಾಯವನ್ನು ನೀಡಿದೆ. ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.10 ಡಾಲರ್ ಆಗಿದೆ.

ಬಿಟ್ ಕಾಯಿನ್ ಕ್ಯಾಶ್

ಬಿಟ್ ಕಾಯಿನ್ ಕ್ಯಾಶ್

ಬಿಟ್ ಕಾಯಿನ್ ಕ್ಯಾಶ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 572.91 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 2.15ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಬಿಟ್ ಕಾಯಿನ್ ಕ್ಯಾಶ್ ಮಾರುಕಟ್ಟೆ ಕ್ಯಾಪ್ 10,836,792,536 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಬಿಟ್ ಕಾಯಿನ್ ಕ್ಯಾಶ್ ಗರಿಷ್ಠ ಬೆಲೆ 586.90 ಡಾಲರ್ ಮತ್ತು ಕಡಿಮೆ ಬೆಲೆ 560.71 ಡಾಲರ್ ಆಗಿತ್ತು. ಕಳೆದ ಒಂದು ವಾರದಲ್ಲಿ ಬಿಟ್ ಕಾಯಿನ್ ಕ್ಯಾಶ್ ಶೇ.1.00ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್ ಕಾಯಿನ್ ಕ್ಯಾಶ್ ಕಳೆದ ಒಂದು ವರ್ಷದಲ್ಲಿ67.01 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಬಿಟ್ ಕಾಯಿನ್ ಕ್ಯಾಶ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 1,836.63 ಡಾಲರ್ ಆಗಿದೆ.

ಡೋಜ್‌ಕಾಯಿನ್

ಡೋಜ್‌ಕಾಯಿನ್

ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 0.2141 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 1.57ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 28,393,152,996 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಡೋಜ್‌ಕಾಯಿನ್‌ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 0.2249 ಡಾಲರ್ ಮತ್ತು ಕಡಿಮೆ ಬೆಲೆ 0.2129 ಡಾಲರ್ ಆಗಿತ್ತು. ಕಳೆದ ವಾರ ಶೇ 2.89ರಷ್ಟು ಇಳಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 4,415.71 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 0.740796 ಡಾಲರ್‌ನಷ್ಟಿದೆ.

ಸ್ಟೆಲ್ಲರ್ ‍XLM

ಸ್ಟೆಲ್ಲರ್ ‍XLM

ಸ್ಟೆಲ್ಲರ್ ‍XLM ಕರೆನ್ಸಿ ದರ ಪ್ರಸ್ತುತ 0.3355 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 1.05ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಸ್ಟೆಲ್ಲರ್ XLM ಮಾರುಕಟ್ಟೆ ಕ್ಯಾಪ್ 8,240,023,538 ಯುಎಸ್ ಡಾಲರ್‌ನಷ್ಟು ಆಗಿದೆ. ಕಳೆದ 24 ಗಂಟೆಗಳಲ್ಲಿ, ಸ್ಟೆಲ್ಲರ್ XLM ಗರಿಷ್ಠ ಬೆಲೆ 0.3508 ಡಾಲರ್ ಆಗಿದ್ದು, ಕಡಿಮೆ ಬೆಲೆ 0.3353 ಡಾಲರ್ ಆಗಿದೆ. ಕಳೆದೊಂದು ವಾರದಲ್ಲಿ ಶೇ.0.22ರಷ್ಟು ಇಳಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ ಸ್ಟೆಲ್ಲರ್ XLM ಕಳೆದ ಒಂದು ವರ್ಷದಲ್ಲಿ ಶೇಕಡಾ 164.67ರಷ್ಟು ರಿಟರ್ನ್‌ ನೀಡಿದ್ದು, ಇದರ ಸಾರ್ವಕಾಲಿಕ ಹೆಚ್ಚಿನ ಬೆಲೆ 0.797482 ಆಗಿದೆ.

ಲೈಟ್‌ಕಾಯಿನ್ LTC

ಲೈಟ್‌ಕಾಯಿನ್ LTC

ಲೈಟ್‌ಕಾಯಿನ್ LTC ಕರೆನ್ಸಿ ಕಾಯಿನ್ ಪ್ರಸ್ತುತ 212.76 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 5.50ರಷ್ಟು ಏರಿಕೆಯಾಗಿದ್ದು, ಈ ಮೂಲಕ ಲೈಟ್‌ಕಾಯಿನ್ LTC ಮಾರುಕಟ್ಟೆ ಕ್ಯಾಪ್‌ 14,734,250,547 ಯುಎಸ್ ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಲೈಟ್‌ಕಾಯಿನ್ LTC ಗರಿಷ್ಠ ಬೆಲೆ 218.34 ಡಾಲರ್ ಮತ್ತು ಕಡಿಮೆ ಬೆಲೆ 201.23 ಡಾಲರ್ ಆಗಿದೆ. ಕಳೆದ ವಾರ ಶೇ 0.13ರಷ್ಟು ಇಳಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ ಲೈಟ್‌ಕಾಯಿನ್ ಕಳೆದ ಒಂದು ವರ್ಷದಲ್ಲಿ ಶೇಕಡಾ 71.04ರಷ್ಟು ರಿಟರ್ನ್ ನೀಡಿದ್ದು, ಇದರ ಸಾರ್ವಕಾಲಿಕ ಹೆಚ್ಚಿನ ಬೆಲೆ 413.47 ಡಾಲರ್ ಆಗಿದೆ.

English summary

Cryptocurrency Prices Today (1 December 2021): Bitcoin, Dogecoin, XRP and Ethereum Latest Rate Here

Cryptocurrency Prices Today (1 December 2021): Check out the Bitcoin, Dogecoin, Xrp and Ethereum Latest Rate Here.
Story first published: Wednesday, December 1, 2021, 17:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X