ಜಾಗತಿಕ ಮಟ್ಟದಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಸಖತ್ ಸದ್ದು ಮಾಡುತ್ತಿದೆ. ಪ್ರಮುಖ ಕ್ರಿಪ್ಟೋಕರೆನ್ಸಿ ಮೌಲ್ಯದಲ್ಲಿ ಎರಡನೇ ದಿನವೂ ಕುಸಿತ ಕಂಡು ಬಂದಿದೆ. ಗುರುವಾರ (ನವೆಂಬರ್ 11)ದಂದು ಬಿಟ್‌ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಬಹುತೇಕ ಕ್ರಿಪ್ಟೋಕರೆನ್ಸಿ ಮೌಲ್ಯದಲ್ಲಿ ಇಳಿಕೆಯಾಗಿದೆ. ಒಟ್ಟಾರೆ, ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಮೌಲ್ಯ 2,849,683,001,526 ಯುಎಸ್ ಡಾಲರ್ ಗೇರಿದೆ. ಕೊಕೊಸ್ವಾಪ್ ಕರೆನ್ಸಿ ಮೌಲ್ಯದಲ್ಲಿ ಅತಿಹೆಚ್ಚು ಏರಿಕೆಯಾಗಿದ್ದು, ಶೇಕಡಾ 65738.54ರಷ್ಟು ಹೆಚ್ಚಳವಾಗಿದೆ.
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ.
ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ನಿಯಂತ್ರಣ ಹೇರಿವೆ. ಹೀಗಿದ್ದರೂ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಕ್ರಿಪ್ಟೋಕರೆನ್ಸಿಗಳ ಖರೀದಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಭಾರತದಲ್ಲಿ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರ ಹೂಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಭಾರತೀಯರೇ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇಳಿಕೆಯಾಗಿದ್ದರೂ ಹಣದ ಹೂಡಿಕೆ ಪ್ರಮಾಣ ಮೊದಲಿಗಿಂತ ಏರಿಕೆಯಾಗಿದೆ.
ಹಾಗಿದ್ದರೆ ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಡೋಜ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಮತ್ತು ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಇತ್ತೀಚಿನ ದರ ಎಷ್ಟಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
ಬಿಟ್‌ಕಾಯಿನ್ ಬೆಲೆಯಲ್ಲಿ ಇಳಿಕೆ
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 65,424.73 ಯುಎಸ್ ಡಾಲರ್‌ಗೆ ಏರಿಕೆಗೊಂಡಿದ್ದು, ಶೇ 1.96ರಷ್ಟು ಏರಿಕೆಯಾಗಿದೆ. ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 1,232,394,589,867 ಯುಎಸ್ ಡಾಲರ್‌ನಷ್ಟಿದೆ.
ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 68,742.31 ಡಾಲರ್ ಮತ್ತು ಕಡಿಮೆ ಬೆಲೆ 63,208.11 ಡಾಲರ್ ಆಗಿತ್ತು. ಕಳೆದ ವಾರದಲ್ಲಿ ಶೇ.6.33ರಷ್ಟು ಏರಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 123.36 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 68,990.90 ಡಾಲರ್ ಆಗಿದೆ.
ಎಥೆರಿಯಮ್
ಎಥೆರಿಯಮ್ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 4,735.37 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 0.40ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 557,669,051,001 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 4,859.50 ಡಾಲರ್ ಮತ್ತು ಕಡಿಮೆ ಬೆಲೆ 4,485.09 ಡಾಲರ್ ಆಗಿತ್ತು. ಕಳೆದ ವಾರ ಶೇ.5.16ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಎಥೆರಿಯಮ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 532.03 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,865.57 ಡಾಲರ್‌ನಷ್ಟಿದೆ.
ಎಕ್ಸ್‌ಆರ್‌ಪಿ
ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 1.24 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 0.01ರಷ್ಟು ಏರಿಕೆಯಾಗಿದ್ದು, ಈ ಮೂಲಕ ಎಕ್ಸ್‌ಆರ್‌ಪಿ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 58,381,386,460 ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 1.35 ಡಾಲರ್ ಮತ್ತು ಕನಿಷ್ಠ ಬೆಲೆ 1.13 ಡಾಲರ್ ಆಗಿತ್ತು. ಕಳೆದ ವಾರ ಶೇ 4.17ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, XRP ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 453.80 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.40 ಡಾಲರ್‌ನಷ್ಟಿದೆ.
ಕಾರ್ಡಾನೊ
ಕಾರ್ಡಾನೊ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 2.15 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 3.96ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 71,119,336,581 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 2.36 ಡಾಲರ್ ಮತ್ತು ಕಡಿಮೆ ಬೆಲೆ 1.94 ಡಾಲರ್ ಆಗಿತ್ತು. ಕಳೆದ ವಾರ ಶೇ. 6.40ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಕಾರ್ಡಾನೊ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ ಶೂನ್ಯ ಪ್ರಮಾಣದ ಆದಾಯವನ್ನು ನೀಡಿದೆ. ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.10 ಡಾಲರ್ ಆಗಿದೆ.
ಬಿಟ್ ಕಾಯಿನ್ ಕ್ಯಾಶ್
ಬಿಟ್ ಕಾಯಿನ್ ಕ್ಯಾಶ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 678.35 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 2.84ರಷ್ಟು ಇಳಿಕೆಗೊಂಡಿದ್ದು, ಈ ಮೂಲಕ ಬಿಟ್ ಕಾಯಿನ್ ಕ್ಯಾಶ್ ಮಾರುಕಟ್ಟೆ ಕ್ಯಾಪ್ 12,789,585,459 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಬಿಟ್ ಕಾಯಿನ್ ಕ್ಯಾಶ್ ಗರಿಷ್ಠ ಬೆಲೆ 729.13 ಡಾಲರ್ ಮತ್ತು ಕಡಿಮೆ ಬೆಲೆ 651.13 ಡಾಲರ್ ಆಗಿತ್ತು. ಕಳೆದ ಒಂದು ವಾರದಲ್ಲಿ ಬಿಟ್ ಕಾಯಿನ್ ಕ್ಯಾಶ್ ಶೇ.12.78ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್ ಕಾಯಿನ್ ಕ್ಯಾಶ್ ಕಳೆದ ಒಂದು ವರ್ಷದಲ್ಲಿ 96.02 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಬಿಟ್ ಕಾಯಿನ್ ಕ್ಯಾಶ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 1,836.63 ಡಾಲರ್ ಆಗಿದೆ.
ಡೋಜ್‌ಕಾಯಿನ್
ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 0.2614 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 4.21ರಷ್ಟು ಇಳಿಕೆಯಾಗಿದ್ದು, ಈ ಮೂಲಕ ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 34,473,529,452 ಯುಎಸ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ, ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 0.277 ಡಾಲರ್ ಮತ್ತು ಕಡಿಮೆ ಬೆಲೆ 0.238 ಡಾಲರ್ ಆಗಿತ್ತು. ಕಳೆದ ವಾರ ಶೇ 1.31ಷ್ಟು ಏರಿಕೆ. ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 5,351.90 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಡೋಜ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 0.740796 ಡಾಲರ್‌ನಷ್ಟಿದೆ.
ಸ್ಟೆಲ್ಲರ್ XLM
ಸ್ಟೆಲ್ಲರ್ XLM ಕರೆನ್ಸಿ ದರ ಪ್ರಸ್ತುತ 0.3918 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 2.13ರಷ್ಟು ಏರಿಕೆಯಾಗಿದ್ದು, ಈ ಮೂಲಕ ಸ್ಟೆಲ್ಲರ್ XLM ಮಾರುಕಟ್ಟೆ ಕ್ಯಾಪ್ 9,443,794,000 ಯುಎಸ್ ಡಾಲರ್‌ನಷ್ಟು ಆಗಿದೆ. ಕಳೆದ 24 ಗಂಟೆಗಳಲ್ಲಿ, ಸ್ಟೆಲ್ಲರ್ XLM ಗರಿಷ್ಠ ಬೆಲೆ 0.4403 ಡಾಲರ್ ಆಗಿದ್ದು, ಕಡಿಮೆ ಬೆಲೆ 0.3674 ಡಾಲರ್ ಆಗಿದೆ. ಕಳೆದೊಂದು ವಾರದಲ್ಲಿ ಶೇ.3.47ರಷ್ಟು ಏರಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ ಸ್ಟೆಲ್ಲರ್ XLM ಕಳೆದ ಒಂದು ವರ್ಷದಲ್ಲಿ ಶೇಕಡಾ 201.58ರಷ್ಟು ರಿಟರ್ನ್ ನೀಡಿದ್ದು, ಇದರ ಸಾರ್ವಕಾಲಿಕ ಹೆಚ್ಚಿನ ಬೆಲೆ 0.797482 ಆಗಿದೆ
ಲೈಟ್‌ಕಾಯಿನ್ LTC
ಲೈಟ್‌ಕಾಯಿನ್ LTC ಕರೆನ್ಸಿ ಕಾಯಿನ್ ಪ್ರಸ್ತುತ 269.51 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 0.89ರಷ್ಟು ಇಳಿಕೆಗೊಂಡಿದ್ದು, ಈ ಮೂಲಕ ಲೈಟ್‌ಕಾಯಿನ್ LTC ಮಾರುಕಟ್ಟೆ ಕ್ಯಾಪ್ 18,290,863,440 ಯುಎಸ್ ಡಾಲರ್‌ನಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಲೈಟ್‌ಕಾಯಿನ್ LTC ಗರಿಷ್ಠ ಬೆಲೆ 294.56 ಡಾಲರ್ ಮತ್ತು ಕಡಿಮೆ ಬೆಲೆ 251.61 ಡಾಲರ್ ಆಗಿದೆ. ಕಳೆದ ವಾರ ಶೇ 32.92ರಷ್ಟು ಏರಿಕೆ ಕಂಡಿದೆ. ಆದಾಯಕ್ಕೆ ಸಂಬಂಧಿಸಿದಂತೆ ಲೈಟ್‌ಕಾಯಿನ್ ಕಳೆದ ಒಂದು ವರ್ಷದಲ್ಲಿ ಶೇಕಡಾ 109.59ರಷ್ಟು ರಿಟರ್ನ್ ನೀಡಿದ್ದು, ಇದರ ಸಾರ್ವಕಾಲಿಕ ಹೆಚ್ಚಿನ ಬೆಲೆ 413.47 ಡಾಲರ್ ಆಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications