ಪ್ರಸಕ್ತ ವರ್ಷದಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಕ್ರಿಪ್ಟೋ ಕರೆನ್ಸಿಯು ಸತತ ಕುಸಿತಕ್ಕೆ ಸಾಕ್ಷಿಯಾಗಿದೆ. ಪ್ರಪಂಚದ ಅನೇಕ ದೇಶಗಳ ಸರ್ಕಾರಗಳ ಕಟ್ಟುನಿಟ್ಟಿನಿಂದಾಗಿ, ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಬೆಲೆಯು ಇಳಿಕೆಗೊಂಡಿವೆ.
ಭಾರತದಲ್ಲೂ ಈ ಡಿಜಿಟಲ್ ರೂಪದ ಕರೆನ್ಸಿಗೆ ನಿಷೇಧವಿದೆ. ಆದರೂ ಹಲವು ರಾಷ್ಟ್ರಗಳಲ್ಲಿ ಕ್ರಿಪ್ಟೋಕರೆನ್ಸಿಗೆ ಸಾಕಷ್ಟು ಬೇಡಿಕೆಯಿದ್ದು, ಕೆಲವು ಕ್ರಿಪ್ಟೋಕರೆನ್ಸಿಗಳು ಕುಸಿಯಲಾರಂಭಿಸಿವೆ.
ಹಾಗಿದ್ದರೆ ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಡಾಗ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಮತ್ತು ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಇತ್ತೀಚಿನ ದರ ಎಷ್ಟಿದೆ ಎಂಬುದರ ಮಾಹಿತಿ ತಿಳಿಯಲು ಈ ಕೆಳಗೆ ಓದಿ.
ಬಿಟ್‌ಕಾಯಿನ್
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ದರವು ಪ್ರಸ್ತುತ 36,829.51 ಡಾರಲ್‌ನಷ್ಟಿದೆ. ಇದು ಪ್ರಸ್ತುತ ಶೇಕಡಾ 5.76 ರಷ್ಟು ಹೆಚ್ಚಾಗಿದೆದ್ದು, ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆ ಕ್ಯಾಪ್ 689.53 ಬಿಲಿಯನ್ ಡಾಲರ್ ತಲುಪಿದೆ.
ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 37,908.96 ಡಾಲರ್ ಮತ್ತು ಕಡಿಮೆ ಬೆಲೆ 34,221.85 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಲ್ಲಿ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಶೇ. 26.71ರಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 64,829.14 ಡಾಲರ್ ಆಗಿದೆ.
ಏನಿದು ಬಿಟ್‌ಕಾಯಿನ್?
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
ಎಥೆರಿಯಮ್
ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯನ್ನು ಪ್ರಸ್ತುತ 2,643.23 ಡಾಲರ್ ಬೆಲೆಯಿದೆ. ಇದು ಪ್ರಸ್ತುತ ಶೇಕಡಾ 13.77 ರಷ್ಟು ಹೆಚ್ಚಾಗಿದ್ದು, ಈ ದರದಲ್ಲಿ ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 306.77 ಬಿಲಿಯನ್ ಡಾಲರ್‌ನಷ್ಟಿದೆ.
ಕಳೆದ 24 ಗಂಟೆಗಳಲ್ಲಿ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 2,741.04 ಡಾಲರ್ ಮತ್ತು ಕಡಿಮೆ ಬೆಲೆ 2,275.66 ಡಾಲರ್ ಆಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿ ಕಳೆದ ಒಂದು ವರ್ಷದಲ್ಲಿ ಶೇಕಡಾ 255.69 ರಷ್ಟು ಆದಾಯವನ್ನು ನೀಡಿದೆ. ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,382.73 ಡಾಲರ್ ಆಗಿದೆ.
ಎಕ್ಸ್‌ಆರ್‌ಪಿ
ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ದರವು ಪ್ರಸ್ತುತ 1.04 ಡಾಲರ್‌ನಷ್ಟಿದೆ. ಇದು ಪ್ರಸ್ತುತ ಶೇಕಡಾ 15.51 ರಷ್ಟು ಹೆಚ್ಚಾಗಿದ್ದು, ಈ ಮೂಲಕ ಎಕ್ಸ್‌ಆರ್‌ಪಿ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 104.34 ಬಿಲಿಯನ್ ಡಾಲರ್ ತಲುಪಿದೆ.
ಕಳೆದ 24 ಗಂಟೆಗಳಲ್ಲಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 1.10 ಡಾಲರ್ ಮತ್ತು ಕಡಿಮೆ ಬೆಲೆ 0.881267 ಡಾಲರ್ ಆಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಎಕ್ಸ್‌ಆರ್‌ಪಿ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ ಶೇಕಡಾ 371.23 ರಷ್ಟು ಲಾಭವನ್ನು ನೀಡಿದೆ. ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.40 ಡಾಲರ್ ಆಗಿದೆ.
ಡಾಗ್‌ಕಾಯಿನ್ ಕ್ರಿಪ್ಟೋ ಕರೆನ್ಸಿ
ಡಾಗ್‌ಕಾಯಿನ್ ಕ್ರಿಪ್ಟೋ ಕರೆನ್ಸಿಯನ್ನು ಪ್ರಸ್ತುತ 0.329062 ಡಾಲರ್ ಬೆಲೆಯಿದೆ. ಇದು ಪ್ರಸ್ತುತ ಶೇಕಡಾ 10.14 ರಷ್ಟು ಏರಿಕೆಯಾಗಿದೆ. ಈ ಮೂಲಕ ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 42.67 ಬಿಲಿಯನ್ ಡಾಲರ್‌ನಷ್ಟಿದೆ.
ಕಳೆದ 24 ಗಂಟೆಗಳಲ್ಲಿ ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 0.346036 ಡಾಲರ್ ಮತ್ತು ಕಡಿಮೆ ಬೆಲೆ 0.294422 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಲ್ಲಿ, ಡಾಗ್‌ಕಾಯಿನ್ ಕ್ರಿಪ್ಟೋ ಕರೆನ್ಸಿ ಶೇ. 6,887.49ರಷ್ಟು ಲಾಭವನ್ನು ನೀಡಿದೆ. ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 0.740796 ಡಾಲರ್ ಆಗಿದೆ.


Click it and Unblock the Notifications