ಕಬ್ಬನ್ ಪಾರ್ಕ್‌ನಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ. ಪಾರ್ಕ್‌ನಲ್ಲಿ ರೀಲ್ಸ್, ಫೋಟೋಶೂಟ್, ಫಿಲ್ಡ್ ಶೂಟಿಂಗ್, ಊಟ, ತಿಂಡಿ ಸೇವನೆಯನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕರು, ಪ್ರವಾಸಿಗರು ಕ್ಯಾಮರಾಗಳನ್ನು ಬಳಸಬಹುದು. ಆದರೆ ಫೋಟೋಶೂಟ್, ಪ್ರೀ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟ್ಸ್, ವೀಡಿಯೋ, ಕಿರುಚಿತ್ರ, ಚಲನಚಿತ್ರ ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಹಾಗೂ ವಾಯು ವಿಹಾರದ ಸಮಯವನ್ನು ಬೆಳಗ್ಗೆ 5.30ರಿಂದ 9 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6.30 ಗಂಟೆಯವರೆಗೆ ನಿಗದಿಪಡಿಸಲಾಗಿದೆ.
ತೋಟಗಾರಿಕೆ ಇಲಾಖೆಯು ನಗರದಲ್ಲಿ ಒಳ ರಸ್ತೆಗಳಲ್ಲಿ ಟ್ರಾಫಿಕ್ ಸಂಚಾರ ಸುಗಮಗೊಳಿಸುವ ಮತ್ತು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆಳಗಿನ ನಿಯಮಗಳನ್ನು ಜಾರಿಯನ್ನು ಮಾಡಲಾಗಿದೆ.

ಭಾರೀ ವಾಹನಗಳಿಗೆ ನಿರ್ಬಂಧ
ಒಳ ರಸ್ತೆಗಳಲ್ಲಿ ಭಾರೀ ವಾಹನಗಳಾದ ಬಸ್, ಲಾರಿ, ಗೂಡ್ಸ್ ವಾಹನ, ಆಟೋಗೆ ನಿರ್ಬಂಧ ಮಾಡಲಾಗಿದೆ. ಅಲ್ಲದೇ ವಾಯು ವಿಹಾರದ ಸಮಯವನ್ನು ಬೆಳಿಗ್ಗೆ 5:30ರಿಂದ 9:00 ಗಂಟೆಯವರೆಗೆ ಹಾಗೂ ಸಂಜೆ 4:30 ರಿಂದ 6:30 ಗಂಟೆಯವರೆಗೆ ನಿಗದಿಯನ್ನು ಮಾಡಲಾಗಿದೆ.
ಏನೆಲ್ಲ ನಿಷೇಧ?
- ಕಬ್ಬನ್ ಪಾರ್ಕ್ ಬಳಗಡೆ ಪಾರ್ಸೆಲ್ ಊಟ/ ತಿಂಡಿ ಪದಾರ್ಥಗಳನ್ನು ಉದ್ಯಾನವನದ ಒಳಗಡೆ ಸೇವಿಸುವುದನ್ನು ನಿಷೇಧ ಮಾಡಲಾಗಿದೆ.
- ಕಬ್ಬನ್ ಪಾರ್ಕ್ ಉದ್ಯಾನವನದ ನಿಗಧಿತ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಗಡೆಯನ್ನು ಮಾಡಬೇಕು.
- ಉದ್ಯಾನವನದ ರಸ್ತೆಗಳಲ್ಲಿ ವಾಹನಗಳು ಹಾರ್ನ್ ಮಾಡಬಾರದು
- ಕಬ್ಬನ್ ಪಾರ್ಕ್‌ನ ಹುಲ್ಲುಹಾಸುಗಳ ಮೇಲೆ ಆಟ ಆಡಬಾರದು.
- ಕಬ್ಬನ್ ಪಾರ್ಕ್‌ನಲ್ಲಿ ಇರುವ ಮರಗಳನ್ನು ಹತ್ತುವುದು, ಮರದ ರೆಂಬೆ ಹಿಡಿದು ಜೋಕಾಲಿ ಆಡುವುದು, ಮರ/ ಗಿಡಗಳಿಂದ ಎಲೆ/ ಕಾಯಿ/ಹೂಗಳನ್ನು ಕೀಳುವುದನ್ನು ಮರಗಳ ತೊಗಟೆಯ ಮೇಲೆ ಕೆತ್ತನೆ ಮಾಡುವುದನ್ನು ಕೂಡ ನಿಷೇಧವನ್ನು ಮಾಡಿದೆ.
- ಉದ್ಯಾನವನದ ಯಾವುದೇ ಸ್ವತ್ತುಗಳಿಗೆ ಬೆಂಕಿ ಹಚ್ಚುವಂತಿಲ್ಲ. ಬಲೂನು ಹಾಗೂ ಇತರೆ ಆಟದ ಸಾಮಾನುಗಳನ್ನು ಬಳಸುವುದು, ಗಾಳಿಪಟ ಹಾರಿಸುವುದು, ಬ್ರಿಸ್ಟಿ ಆಡುವುದನ್ನು ಹಾಗೂ ಇತರೆ ಆಟಗಳನ್ನು ಆಡುವುದನ್ನು ನಿಷೇಧ ಮಾಡಲಾಗಿದೆ.
- ಕೆರೆ/ ಕಲ್ಯಾಣಿಗೆ ಇಳಿಯಬಾರದು ಹಾಗೂ ಮರದ ಕಲಾಕೃತಿಗಳನ್ನು ಮುಟ್ಟಬಾರದು ಅದು ಕೂಡ ನಿಷೇಧವನ್ನು ಮಾಡಬಾರದು.
- ಉದ್ಯಾನವನದ ಆವರಣದಲ್ಲಿ ಅಸಭ್ಯ ವರ್ತನೆ ಮಾಡುವ ಆಗಿಲ್ಲ.ಉದ್ಯಾನವನದಲ್ಲಿರುವ ಅಲಂಕಾರಿಕ ವಿನ್ಯಾಸ ಮತ್ತು ಪರ್ಗೋಲಗಳ ಮೇಲೆ ಹತ್ತುವುದನ್ನು ನಿಷೇಧವನ್ನು ಮಾಡಲಾಗಿದೆ.
- ಸಾರ್ವಜನಿಕರು/ ಸಂಘಸಂಸ್ಥೆಗಳು ಉದ್ಯಾನವನದ ಒಳಗಡೆ ಯಾವುದೇ ಬ್ಯಾನರ್ /ಪೋಸ್ಟರ್ ಗಳನ್ನು ಕೂಡ ಆಗಬಾರದು.
- ಕಬ್ಬನ್ ಪಾರ್ಕ್ ಒಳಗಡೆ ನಿರ್ದಿಷ್ಟವಾದ / ನಿಗಧಿತ ಶೌಚಾಲಯಗಳನ್ನು ಹೊರತುಪಡಿಸಿ, ಇನ್ನಿತರೆ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜಿಸುವುದು ಹಾಗೂ ಉಗುಳಬಾರದು.
- ಸಭೆ ಸಮಾರಂಭ, ಹುಟ್ಟುಹಬ್ಬ ಹಾಗೂ ಇತರೆ ಯಾವುದೇ ಆಚರಣೆಗಳನ್ನು ಉದ್ಯಾನವನದ ಆವರಣದಲ್ಲಿ ನಿಷೇಧಿಸಿದೆ. (ಕಬ್ಬನ್ ಉದ್ಯಾನವನಕ್ಕೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ಹಬ್ಬಗಳು/ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಉದ್ಯಾನವನದ ಸಸ್ಯ ಪ್ರಾಣಿ ಸಂಕುಲ, ಸಂಕುಲಗಳಿಗೆ ಯಾವುದೇ ತೊಂದರೆಯನ್ನು ಕೊಡುವಂತಹ ಕಾರ್ಯಗಳನ್ನು ಮಾಡಬಾರದು.
ಈ ಮೇಲಿನ ಯಾವುದೇ ನಿಯಮವನ್ನುನ ಉಲ್ಲಂಘನೆ ಮಾಡಿದ್ದರೆ ನೀವು ದಂಡ ಕಟ್ಟಬೇಕಾಗುತ್ತದೆ.
ನಿಯಮ ಉಲ್ಲಂಘನೆ ದಂಡ ಎಷ್ಟು..?
ಕಬ್ಬನ್ ಪಾರ್ಕ್ ನಿಯಮ ಉಲ್ಲಂಘನೆ ಮಾಡಿದ್ದವರಿಗೆ ಪ್ರತಿಯೊಬ್ಬರಿಗೆ ಗರಿಷ್ಠ500 ರೂ.ಗಳವರೆಗೆ ದಂಡ ವಿಧಿಸಲು ಹಾಗೂ ಪದೇ ಪದೇ ಉಲ್ಲಂಘಿಸಿದಲ್ಲಿ ಶಿಕ್ಷೆಯನ್ನು ಕೂಡ ನೀಡಲಾಗಿದೆ. ಕಬ್ಬನ್ ಪಾರ್ಕ್ ನಿಯಮ ಉಲ್ಲಂಘಿಸಿದ ದಂಡದ ಮೊತ್ತ ಹಾಗೂ ಷರತ್ತಿಗೊಳಪಟ್ಟು ಅನುಮತಿಸಲು ವಿಧಿಸಿರುವ ಹಣವನ್ನು ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿಷ್ಠಾನದ ಖಾತೆಗೆ ಜಮಾವನ್ನು ಮಾಡಲಾಗಿದೆ.
ಒಟ್ಟಾರೆ ಕಬ್ಬನ್ ಪಾರ್ಕ್ ಉದ್ಯನವನದ ಸ್ವಚ್ಛತೆ ಹಾಗೂ ಸುರಕ್ಷಿತಗಾಗಿ ಈ ನಿಯಮಗಳನ್ನು ಮಾಡಲಾಗಿದೆ ಎಲ್ಲರೂ ಈ ನಿಯಮಗಳನ್ನು ಪಾಲನೆ ಮಾಡಿದ್ದರೆ ನಮ್ಮ ಕಬ್ಬನ್ ಪಾರ್ಕ್ ಸುಂದರವಾಗಿ ಕಾಂವುದರಲ್ಲಿ ಎರಡು ಮಾತಿಲ್ಲ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Highway: ರಾಜ್ಯದ ಈ ಭಾಗಕ್ಕೆ ಹೈವೇ ಡಿಮ್ಯಾಂಡ್…ಕೇಂದ್ರಕ್ಕೆ ಮನವಿ ಮಾಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್!

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications