ಬೆಂಗಳೂರಿಗರೇ...ಇನ್ಮುಂದೆ ಈ ರಸ್ತೆ ಬಂದ್‌! 30 ದಿನ ಈ ಕಡೆ ಹೋಗಬೇಡಿ..ಬದಲಿ ಮಾರ್ಗ ಯಾವುದು?

ಬೆಂಗಳೂರಿಗರೇ.. ಇನ್ಮುಂದೆ ಈ ರಸ್ತೆ ಬಂದ್! 30 ದಿನ ಈ ಕಡೆ ಹೋಗಬೇಡಿ. ಹೌದು, ಕಬ್ಬನ್ ರಸ್ತೆಯ ಮುಖ್ಯ ಗಾರ್ಡ್ ಕ್ರಾಸ್ ರಸ್ತೆಯಿಂದ ಡಿಸ್ಪೆನ್ಸರಿ ರಸ್ತೆಗೆ ವಾಹನ ಸಂಚಾರವನ್ನು ಒಂದು ತಿಂಗಳ ಕಾಲ ಮುಚ್ಚಲಾಗುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಶನಿವಾರ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

ಈ ನಿಯಮಗಳು ಫೆಬ್ರವರಿ 2 ರಿಂದ ಜಾರಿಯಲ್ಲಿ ಇರುತ್ತವೆ. ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೈಟ್ ಟಾಪಿಂಗ್ ಕೆಲಸಕ್ಕೆ ಅನುಕೂಲವಾಗುವಂತೆ ಬೆಂಗಳೂರು ಸಂಚಾರ ಪೊಲೀಸ್‌ರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.

ಬೆಂಗಳೂರಿಗರೇ.. 30 ದಿನ ಈ ಕಡೆ ಹೋಗಬೇಡಿ!

ಕಾಮಗಾರಿ ನಡೆಯುತ್ತಿರುವುದು ಎಲ್ಲಿ?

ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಗಮನದಲ್ಲಿಟ್ಟುಕೊಂಡು,ಕಬ್ಬನ್ ರಸ್ತೆಯ ಮೇನ್ ಗಾರ್ಡ್ ಕ್ರಾಸ್ ರಸ್ತೆಯಿಂದ ಡಿಸ್ಪೆನ್ಸರಿ ರಸ್ತೆಯವರೆಗೆ 02ನೇ ತಾರೀಕ್‌ನಿಂದ ಶುರುವಾಗುವ 30 ದಿನಗಳವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ.

ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.ಅವುಗಳು ಯಾವುವುವೆಂದರೆ,

ನಿರ್ಬಂಧಿತ ರಸ್ತೆಗಳು ಯಾವುವು?

ಸಫಿನಾ ಪ್ಲಾಜಾ ಜಂಕ್ಷನ್‌ನಿಂದ ಇನ್‌ಫೆಂಟ್ರಿ ರಸ್ತೆ ಮೂಲಕ ಕಮರ್ಷಿಯಲ್ ಸ್ಟ್ರೀಟ್‌ಗೆ ವಾಹನಗಳನ್ನು ನಿರ್ಬಂಧ.
ಸಫಿನಾ ಪ್ಲಾಜಾ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಮೂಲಕ ಮೇನ್ ಗಾರ್ಡ್ ಕ್ರಾಸ್ ರಸ್ತೆಗೆ ಕಮರ್ಷಿಯಲ್ ಸ್ಟ್ರೀಟ್‌ಗೆ ವಾಹನಗಳನ್ನು ನಿರ್ಬಂಧಿಸಲಾಗಿದೆ.

ಸಂಚಾರ ಬದಲಾವಣೆಯ ಪರ್ಯಾಯ ಮಾರ್ಗಗಳು ಯಾವುವು?

ಇನ್ಫೆಂಟ್ರಿ ರಸ್ತೆ ಸಫಿನಾ ಪ್ಲಾಜಾದಿಂದ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಇನ್ಫೆಂಟ್ರಿ ರಸ್ತೆ ಮತ್ತು ಲೇಡಿ ಕರ್ಜನ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ಲೇಡಿ ಕರ್ಜನ್ ರಸ್ತೆಯಲ್ಲಿ ಎಡ ತಿರುವು ಪಡೆದು, ಕಬ್ಬನ್ ರಸ್ತೆ ಮತ್ತು ಕೆ.ಆರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ನಂತರ ಕಾಮರಾಜ ರಸ್ತೆಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಎಡ ತಿರುವು ಪಡೆದು ಮುಂದುವರಿಯಬಹುದು.

ಕಬ್ಬನ್ ಮೈನ್ ಗಾರ್ಡ್ ಕ್ರಾಸ್ ರಸ್ತೆ ಸಫೀನಾ ಪ್ಲಾಜಾ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಕಬ್ಬನ್ ರಸ್ತೆ ಮೂಲಕ ಮುಂದುವರಿಯಬಹುದು.ಕೆ.ಆರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕಾಮರಾಜ ರಸ್ತೆ ಮೂಲಕ ಕಮರ್ಷಿಯಲ್ ಸ್ಟ್ರೀಟ್‌ಗೆ ಹೋಗಬಹುದು.

15,000 ಕೋಟಿ ಯೋಜನೆ!

ಬಿಬಿಎಂಪಿ ದೊಡ್ಡ ನಿರ್ಧಾರ ಬೆಂಗಳೂರಿಗೆ ದೊಡ್ಡ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಬಿಬಿಎಂಪಿ ದೊಡ್ಡ ನಿರ್ಧಾರವನ್ನು ತಗೆದುಕೊಳ್ಳಲು ಮುಂದಾಗಿದೆ.ಟ್ರಾಫಿಕ್ ಕಿರಿಕಿರಿಯಿಂದ ಬೆಂಗಳೂರಿನ ಜನರರು ಬೇಸತ್ತು ಹೋಗಿದ್ದಾರೆ ಇದಕೆಲ್ಲಾ ಮುಕ್ತಿ ನೀಡಲು ಸುಮಾರು 15,000 ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಲು ಬಿಬಿಎಂಪಿ ಪ್ರಸ್ತಾಪ ಮಾಡಿದೆ.

ಬೆಂಗಳೂರಿನ ಜನರಿಗೆ ಅನುಕೂಲವಾಗಲಿ ಎಂದು ಸುಮಾರು 46 ಕಿ. ಮೀ ಉದ್ದದ ಸುರಂಗ ಮಾರ್ಗ ಯೋಜನೆಯನ್ನು ತಜ್ಞರು ರೂಪಿಸುವಂತೆಯೇ ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕ್ಕರ್, ಅಂಡರ್ ಪಾಸ್ ಒಳಗೊಂಡಂತೆ ಸುಮಾರು 15,000 ಕೋಟಿ ವೆಚ್ಚದ ಒಂದು ಡಜನ್ ಯೋಜನೆಗಳನ್ನು ಬಿಬಿಎಂಪಿ ಪ್ರಸ್ತಾಪ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+