Cybercrimes in Bengaluru: ಬೆಂಗಳೂರಿಗರೇ ಎಚ್ಚರ, ನಗರದಲ್ಲಿ ಸೈಬರ್ ಕ್ರೈಮ್ ಶೇ. 50ರಷ್ಟು ಜಿಗಿತ, ಕಂಡಲ್ಲಿ ಬಲೆ ಬೀಸ್ತಾರೆ!

ತಂತ್ರಜ್ಞಾನ ಎಷ್ಟು ಬೆಳವಣಿಗೆಯಾಗುತ್ತಿದೆ ಎಂದರೆ ಎಲ್ಲವೂ ನಮ್ಮ ಬೆರಳ ಒಂದು ಕ್ಲಿಕ್‌ನಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲೇ ತಂತ್ರಜ್ಞಾನವನ್ನು ಬಳಸಿಕೊಂಡು ನಡೆಸುತ್ತಿರುವ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023 ರಲ್ಲಿ ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳ ಪ್ರಮಾಣ ದ್ವಿಗುಣಗೊಂಡಿದೆ ಎಂದು ಸಿಟಿ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅಂಕಿಅಂಶಗಳು ತೋರಿಸುತ್ತವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

2023 ರಲ್ಲಿ, ಬೆಂಗಳೂರು ನಗರ ಪೊಲೀಸರು 17,623 ಸೈಬರ್ ಕ್ರೈಮ್ ಪ್ರಕರಣಗಳನ್ನು ವರದಿ ಮಾಡಿಕೊಂಡಿದ್ದರೆ, 2022 ರಲ್ಲಿ 9,940 ಸೈಬರ್ ಕ್ರೈಮ್ ಪ್ರಕರಣಗಳು ವರದಿಯಾಗಿದ್ದವು. 2021 ರಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆ 6,422 ರಷ್ಟಿತ್ತು. ಆದರೆ ಇದರಲ್ಲಿ ಪರಿಹರಿಸಲಾಗದ ಪ್ರಕರಣಗಳು ಅದೆಷ್ಟೋ ಇದೆ.

ಬೆಂಗಳೂರಿಗರೇ ಎಚ್ಚರ, ನಗರದಲ್ಲಿ ಸೈಬರ್ ಕ್ರೈಮ್ ಶೇಕಡ 50ರಷ್ಟು ಜಿಗಿತ!

ಬಾಕಿ ಉಳಿದಿದೆ ಸಾವಿರಾರು ಪ್ರಕರಣಗಳು

ಪತ್ತೆಯಾದ ಅಥವಾ ಪರಿಹರಿಸಲಾದ ಪ್ರಕರಣಗಳು 2023 ರಲ್ಲಿ 1,271 ಆಗಿದ್ದು ನಾವು 2022ರ ಅಂಕಿ ಅಂಶಕ್ಕೆ ಹೋಲಿಸಿದಾಗ ಇದು ಕಡಿಮೆಯಾಗಿದೆ. 2022 ರಲ್ಲಿ 2,431 ಮತ್ತು 2021 ರಲ್ಲಿ 2,257 ಪ್ರಕರಣಗಳನ್ನು ಪರಿಹರಿಸಲಾಗಿದೆ. ಇದಕ್ಕೆ ಹೋಲಿಸಿದಾಗ 2023ರಲ್ಲಿ ಹಲವಾರು ಪ್ರಕರಣಗಳು ಬಾಕಿ ಉಳಿದಿದೆ ಎಂಬುವುದು ಸ್ಪಷ್ಟ. ಹಾಗೆಯೇ ಆನ್‌ಲೈನ್ ಪ್ರಕರಣಗಳು ಹೊಸ ಆಯಾಮದಲ್ಲೇ ನಡೆಯುತ್ತಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ.

ವಂಚಕರು ಜನರನ್ನು ವಂಚಿಸಲು ಹೊಸ ವಿಧಾನಗಳನ್ನು ಕಂಡುಹಿಡಿಯುತ್ತಿದ್ದಾರೆ. ಇದರಿಂದಾಗಿ ಸೈಬರ್ ಅಪರಾಧಗಳು ವೇಗವಾಗಿ ಬದಲಾಗುತ್ತಾ ಸಾಗುತ್ತಿದೆ ಎಂದು ಪೊಲೀಸರು ಡೆಕ್ಕನ್ ಹೆರಾಲ್ಡ್‌ಗೆ ಹೇಳಿದ್ದಾರೆ. 2023 ರಲ್ಲಿ, ಬಹಳಷ್ಟು ಸೈಬರ್ ಅಪರಾಧಗಳು ಹೊಸ ವಿಧಾನಗಳನ್ನು ಹೊಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ತಂತ್ರಜ್ಞಾನದ ಅಭಿವೃದ್ಧಿಯು ಸೈಬರ್ ವಂಚನೆಗಳನ್ನು ಮಾತ್ರ ಹೆಚ್ಚಿಸಿದೆ. ಜನರನ್ನು ವಂಚಿಸಲು ವಂಚಕರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ," ಎಂದು ಅಧಿಕಾರಿ ಹೇಳಿದರು. ಆದರೆ, ಬದಲಾದ ಕಾಲಕ್ಕೆ ತಕ್ಕಂತೆ ಬೆಂಗಳೂರು ಪೊಲೀಸರು ಹೊಂದಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

"ನಮ್ಮ ನಗರದಲ್ಲಿ ನಾವು ಪ್ರತಿ ಪೊಲೀಸ್ ವಿಭಾಗದಲ್ಲಿ ಸೈಬರ್ ಕ್ರೈಮ್ ಠಾಣೆಗಳನ್ನು ಮೀಸಲಿಟ್ಟಿದ್ದೇವೆ. ವಂಚನೆಯ ಇಮೇಲ್‌ಗಳ ಪ್ರಕರಣಗಳನ್ನು ಒಳಗೊಂಡಂತೆ ನಾವು ಚಿಕ್ಕ ಸೈಬರ್ ವಂಚನೆಯನ್ನೂ ಸಹ ನೋಂದಾಯಿಸುತ್ತೇವೆ. ಆದರೆ ಅನೇಕ ರಾಜ್ಯಗಳಲ್ಲಿನ ಪೊಲೀಸರು ಸೈಬರ್ ಅಪರಾಧ ಪ್ರಕರಣಗಳನ್ನು ತೆಗೆದುಕೊಳ್ಳಲು ಇನ್ನೂ ಹಿಂಜರಿಯುತ್ತಿದ್ದಾರೆ," ಎಂದು ತಿಳಿಸಿದರು.

ಸೈಬರ್ ಅಪರಾಧಗಳನ್ನು ಪರಿಹರಿಸಿ ಪರಿಣತಿ ಹೊಂದಿರುವ ಇನ್ನೊಬ್ಬ ಹಿರಿಯ ಪೊಲೀಸ್ ಅಧಿಕಾರಿ, ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು ಮೀಸಲಾದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿಯೂ ದಾಖಲಾಗಿವೆ.

"ಬದಲಾದ ಸೈಬರ್ ಅಪರಾಧ ಸ್ವರೂಪ ಕಳೆದ ವರ್ಷ ಪರಿಹರಿಸುವಲ್ಲಿ ನಮಗೆ ದೊಡ್ಡ ಸವಾಲಾಗಿದೆ. ಕೆಲವು ಸೈಬರ್ ಅಪರಾಧಗಳನ್ನು ಅರ್ಥಮಾಡಿಕೊಳ್ಳುವುದು ನಮಗೆ ತುಂಬಾ ಕಷ್ಟಕರವಾಗಿದೆ," ಎಂದು ಹೇಳಿದರು. ಸೈಬರ್ ಅಪರಾಧಗಳ ಹೆಚ್ಚಳಕ್ಕೆ ಇತರ ಕಾರಣಗಳೆಂದರೆ ಸೈಬರ್ ಟಿಪ್‌ಲೈನ್ ಅಭಿವೃದ್ಧಿ ಮತ್ತು ಪೊಲೀಸ್ ಸಹಾಯವಾಣಿ ಮೂಲಕ ಪ್ರಕರಣಗಳನ್ನು ದಾಖಲಿಸುವುದು ಆಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+