ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ

ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಸಂಸ್ಥಾಪಕ ರಾಧಾಕಿಶನ್ ದಮಾನಿ ಶುಕ್ರವಾರ ಭಾರತದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ದಮಾನಿ, ವಿಶ್ವ ಖ್ಯಾತಿಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್‌ರನ್ನೇ ಹಿಂದಿಕ್ಕಿದ್ದಾರೆ.

ಫೆಬ್ರವರಿ 11ರಂದು ಸೋಮವಾರ ಅವೆನ್ಯೂ ಸೂಪರ್‌ಮಾರ್ಟ್ಸ್‌ ಲಿಮಿಟೆಡ್ ಷೇರುಗಳು ಸಾರ್ವಕಾಲಿಕ ಗರಿಷ್ಠ ಮುಟ್ಟಿದ ಪರಿಣಾಮ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರಿಕೆಯಾಗಿದ್ದರು. ಆದರೆ ಇದೀಗ 13.30 ಬಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ 95,130 ಕೋಟಿ) ನಿವ್ವಳ ಮೌಲ್ಯದೊಂದಿಗೆ ಭಾರತದ ಐದನೇ ಶ್ರೀಮಂತರಾಗಿದ್ದಾರೆ.

ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳ ಲಾಭ

ಅವೆನ್ಯೂ ಸೂಪರ್‌ಮಾರ್ಟ್ಸ್ ಷೇರುಗಳ ಲಾಭ

ಡಿ-ಮಾರ್ಟ್‌ನ ಪ್ರವರ್ತಕ ಸಂಸ್ಥೆಯ ಷೇರುಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ದಮಾನಿಯವರ ನಿವ್ವಳ ಮೌಲ್ಯದಲ್ಲೂ ಏರಿಕೆಯಾಗಿದೆ. ಹೀಗಾಗಿಯೇ ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಫೆಬ್ರವರಿ 14 ರಂದು (ಶುಕ್ರವಾರ), ದಮಾನಿಯ ಒಟ್ಟು ಆಸ್ತಿ 13.30 ಬಿಲಿಯನ್ ಡಾಲರ್ (95,130 ಕೋಟಿ) ಆಗಿದ್ದು, ಮಿತ್ತಲ್ ಅವರ ಆಸ್ತಿ 13.10 ಬಿಲಿಯನ್ ಡಾಲರ್ (93,700 ಕೋಟಿ), ಗೌತಮ್ ಅದಾನಿಯ ನಿವ್ವಳ ಆಸ್ತಿಯು 10.9 ಬಿಲಿಯನ್ ಡಾಲರ್ (77,964 ಕೋಟಿ) ಮತ್ತು ಸುನಿಲ್ ಮಿತ್ತಲ್ ಅವರ ನಿವ್ವಳ ಆಸ್ತಿ 9.62 ಬಿಲಿಯನ್ ಡಾಲರ್ (68,808 ಕೋಟಿ) ನಷ್ಟಿದೆ.

 

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದ ಕಂಪನಿ ಷೇರುಗಳು

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದ ಕಂಪನಿ ಷೇರುಗಳು

ಫೆಬ್ರವರಿ 5 ರಂದು ಸಾಂಸ್ಥಿಕ ಹೂಡಿಕೆದಾರರಿಗೆ ಷೇರು ಮಾರಾಟವನ್ನು ಕಂಪನಿ ಘೋಷಿಸಿದ ನಂತರ ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಷೇರುಗಳು ಗುರುವಾರ (ಫೆಬ್ರವರಿ 13) ಸಾರ್ವಕಾಲಿಕ ಗರಿಷ್ಠ 2,559 ರುಪಾಯಿಗಳವರೆಗೆ ಏರಿಕೆಯಾಗಿತ್ತು. ಆದರೆ ಶುಕ್ರವಾರ ಫೆಬ್ರವರಿ 14ರಂದು 6 ಪರ್ಸೆಂಟ್ ಕುಸಿತ ಕಂಡು ಪ್ರತಿ ಷೇರಿನ ಬೆಲೆ 2,380.20 ರುಪಾಯಿಗೆ ತಲುಪಿದೆ.

ವಿಶ್ವದಲ್ಲಿ 110ನೇ ಶ್ರೀಮಂತ ದಮಾನಿ

ವಿಶ್ವದಲ್ಲಿ 110ನೇ ಶ್ರೀಮಂತ ದಮಾನಿ

ಭಾರತದಲ್ಲಿ ಐದನೇ ಅತಿದೊಡ್ಡ ಶ್ರೀಮಂತ ಎಂದು ಖ್ಯಾತಿಗೆ ಒಳಗಾಗಿರುವ ದಮಾನಿ ಇದೀಗ ವಿಶ್ವದ 110 ನೇ ಶ್ರೀಮಂತ ವ್ಯಕ್ತಿ. ದಮಾನಿಯ ನಿವ್ವಳ ಮೌಲ್ಯವು ಭಾರತದ ಜಿಡಿಪಿಯ 0.5 ಪರ್ಸೆಂಟ್‌ ಗೆ ಸಮನಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.

 

ಏಷ್ಯಾದಲ್ಲೇ ನಂಬರ್ 1 ಸ್ಥಾನದಲ್ಲಿರುವ ಮುಕೇಶ್ ಅಂಬಾನಿ

ಏಷ್ಯಾದಲ್ಲೇ ನಂಬರ್ 1 ಸ್ಥಾನದಲ್ಲಿರುವ ಮುಕೇಶ್ ಅಂಬಾನಿ

ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ರಾಧಾಕಿಶನ್ ದಮಾನಿ ಐದನೇ ಸ್ಥಾನದಲ್ಲಿದ್ದರೆ , ಮುಖೇಶ್ ಅಂಬಾನಿ ಭಾರತಕ್ಕಷ್ಟೇ ಅಲ್ಲದೆ ಏಷ್ಯಾಕ್ಕೆ ನಂಬರ್ 1 ಶ್ರೀಮಂತ ವ್ಯಕ್ತಿಯಾಗಿದ್ದಾರೆ. 62 ವಯಸ್ಸಿನ ಮುಕೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 56.6 ಬಿಲಿಯನ್ ಅಮೆರಿಕನ್ ಡಾಲರ್‌ ನಷ್ಟಿದೆ. ವಿಶ್ವದಲ್ಲೇ 13ನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+