For Quick Alerts
ALLOW NOTIFICATIONS  
For Daily Alerts

ಡೈಲಿ ಮನಿ & ಮಾರ್ಕೆಟ್: ಮೊನಾಪಲಿ ವಿರುದ್ಧ ಸಿಡಿದೆದ್ದ ಸೌತ್ ಕೊರಿಯಾ!

By ರಂಗಸ್ವಾಮಿ ಮೂಕನಹಳ್ಳಿ
|

ಆಪಲ್ ಮತ್ತು ಗೂಗಲ್ ಸಂಸ್ಥೆಗಳು ತಮ್ಮ ಆಪ್ ಸ್ಟೋರ್‌ನಲ್ಲಿ ತಮ್ಮದೇ ಅದ ಹಣಪಾವತಿ ಸಿಸ್ಟಮ್ ಬಳಸುವಂತೆ ಬೇರೆ ಎಲ್ಲಾ ಆಪ್ ಡೆವೆಲಪ್ಪರ್‌ಗಳನ್ನು ಒತ್ತಾಯಿಸುವುದು ಇಂದಿಗೆ ಬಹತೇಕ ಎಲ್ಲರಿಗೂ ತಿಳಿದಿರುವ ವಿಷಯ. ತಮ್ಮ ಮೊಬೈಲ್‌ನಲ್ಲಿ ನಿಮ್ಮ ಆಪ್ ಹಾಕಲು ಅನುಮತಿ ಬೇಕೇ? ಹಾಗಿದ್ದರೆ ನೀವು ನಮ್ಮ ಹಣ ಪಾವತಿ ವಿನಿಮಯವನ್ನು ಬಳಸಿರಿ ಎನ್ನುವುದು ತೀರಾ ಸಾಮಾನ್ಯವಾಗಿ ಬಿಟ್ಟಿದೆ.

ಇದು ಭಾರತ ಚೀನಾ, ಅಮೇರಿಕಾ ಎಂದಲ್ಲ ಜಗತ್ತಿನಾದ್ಯಂತ ಈ ವಿಷಯದಲ್ಲಿ ಇವರದು ಕಪಿಮುಷ್ಠಿ. ಇದಿಷ್ಟೇ ಅಲ್ಲದೆ ಹೀಗೆ ಆಪ್‌ಗಳನ್ನು ತಯಾರಿಸಿ ಅದನ್ನು ಈ ದೈತ್ಯ ಸಂಸ್ಥೆಗಳ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಲ್ಲಿ ಹಾಕಲು ಅಥವಾ ಜಾಗ ಪಡೆದುಕೊಳ್ಳಲು ಇವರು ಕೇಳುವುದು ಆದಾಯದ 30 ಪ್ರತಿಶತ ಹಣ! ಅಂದರೆ ಚಿಕ್ಕ ಪುಟ್ಟ ಆಪ್ ಡೆವೆಲಪ್ಪರ್ ನೂರು ರೂಪಾಯಿ ಆದಾಯ ಗಳಿಸಿದರೆ ಅದರಲ್ಲಿ ಮೂವತ್ತು ರೂಪಾಯಿ ಇಂತಹ ದೈತ್ಯ ಸಂಸ್ಥೆಗಳಿಗೆ ಬಿಟ್ಟು ಕೊಡಬೇಕು.

ಇದು ಸದ್ಯದ ಜಾಗತಿಕ ವ್ಯವಸ್ಥೆ. ನಿನ್ನೆ ಅಂದರೆ 31 ಆಗಸ್ಟ್ 2021ರಂದು ಸೌತ್ ಕೊರಿಯಾ ದೇಶದ ಪಾರ್ಲಿಮೆಂಟ್ ಮೆಂಬರ್‌ಗಳು ಇದರ ವಿರುದ್ಧ ಮಸೂದೆಯನ್ನ ಮಂಡಿಸಿ 180 ವೋಟರ್‌ಗಳಿಂದ ಈ ವ್ಯವಸ್ಥೆಗೆ ಇತಿಶ್ರೀ ಹಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಾರ್ಲಿಮೆಂಟ್‌ನ ಒಬ್ಬ ಸದಸ್ಯ ಕೂಡ ಇದರ ವಿರುದ್ಧ ಮತ ಚಲಾವಣೆ ಮಾಡಿಲ್ಲ, ಒಮ್ಮತದಿಂದ ಗೂಗಲ್ ಮತ್ತು ಆಪಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಸೆಡ್ಡು ಹೊಡೆದು ನಿಂತಿದೆ. ಹೀಗಾಗಿ ಇಂತಹ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡ ಜಗತ್ತಿನ ಪ್ರಥಮ ರಾಷ್ಟ್ರ ಎನ್ನುವ ಪಟ್ಟವನ್ನು ಕೂಡ ಸೌತ್ ಕೊರಿಯಾ ಪಡೆದುಕೊಂಡಿದೆ.

ಡೈಲಿ ಮನಿ & ಮಾರ್ಕೆಟ್: ಮೊನಾಪಲಿ ವಿರುದ್ಧ ಸಿಡಿದೆದ್ದ ಸೌತ್ ಕೊರಿಯಾ!

ಅಮೇರಿಕಾ ದೇಶದಲ್ಲಿ ಕಳೆದ ತಿಂಗಳು ಮೂವರು ಸೆನೆಟರ್‌ಗಳು ಈ ಬಗ್ಗೆ ಧ್ವನಿ ಎತ್ತಿದ್ದರು. ಗ್ರಾಹಕನಿಗೆ ಬೇರೆ ಯಾವುದೇ ಆಯ್ಕೆಗಳು ಇಲ್ಲದ ಹಾಗೆ ಮಾಡುವುದು ತರವಲ್ಲ ಎನ್ನುವುದು ಅವರ ಕೂಗು. ಗಮನಿಸಿ ನೋಡಿ ಆಪ್ ಸ್ಟೋರ್‌ನಲ್ಲಿ ಅಥವಾ ಪ್ಲೇ ಸ್ಟೋರ್‌ಗಳಲ್ಲಿ ಹಣ ಸಂದಾಯ ಮಾಡಲು ಬಳಸುವ ಬೇರೆ ಯಾವುದೇ ಆಯ್ಕೆ ಇಲ್ಲದೆ ಕೇವಲ ಗೂಗಲ್ ಪೇ ಮಾತ್ರವಿದ್ದರೆ, ಗ್ರಾಹಕ ಅದನ್ನೇ ಬಳಸುತ್ತಾನೆ. ಹೀಗಾಗಿ ಸಂಸ್ಥೆ ಇನ್ನಷ್ಟು ದೈತ್ಯವಾಗಿ ಬೆಳೆಯುತ್ತ ಹೋಗುತ್ತದೆ. ದೇಶದ ರಾಜಕೀಯ, ಆರ್ಥಿಕ ಮತ್ತಿತರ ಸರಕಾರದ ನಿರ್ಧಾರಗಳನ್ನು ಪ್ರಶ್ನಿಸುವ ಅಥವಾ ತನಗೆ ಬೇಕಾದ ರೀತಿಯಲ್ಲಿ ಬದಲಿಸಿ ಕೊಳ್ಳುವ ಶಕ್ತಿಯ ಪಡೆದುಕೊಳ್ಳುತ್ತದೆ.

ಮೊನಾಪಲಿ ಅಥವಾ ಏಕಸ್ವಾಮ್ಯತೆ ಇಂದಿಗೂ ಸಮಾಜಕ್ಕೆ ಒಳ್ಳೆಯದಲ್ಲ. ತಮ್ಮ ಸಂಸ್ಥೆಯ ವಿನಿಮಯ ಮಾಧ್ಯಮವನ್ನೇ ಬಳಸಬೇಕು ಎನ್ನುವುದು ಕಾನೂನು ಬಾಹಿರ. ಆದರೂ ಜಗತ್ತಿನಾದ್ಯಂತ ಇಲ್ಲಿಯವರೆಗೆ ಇದು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆದು ಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಸೌತ್ ಕೊರಿಯಾ ದೇಶದ ಈ ನಡೆ ಮಹತ್ತರ ಎಂದು ಹೇಳಬಹುದು.

ಇಂತಹ ನಡಾವಳಿಗಳು ಕಾನೂನು ಬಾಹಿರ ಎನ್ನುವುದನ್ನ ಸೌತ್ ಕೊರಿಯಾ ದೊಡ್ಡ ಧ್ವನಿಯಲ್ಲಿ ಹೇಳಿದೆ. ನನ್ನ ನೆಲದಲ್ಲಿ ಇಂತಹ ಆಟಗಳಿಗೆ ಜಾಗವಿಲ್ಲ ಎಂದಿದೆ. ಈ ನಿಲುವು ಇಂದಿನಿಂದ ಆದರೆ ಸೆಪ್ಟೆಂಬರ್ ಒಂದರಿಂದಲೇ ಜಾರಿಗೆ ಬರಲಿದೆ ಎಂದು ಕೂಡ ಹೇಳಿಕೆ ನೀಡಿದೆ.

ನಿಧಾನವಾಗಿ ಅಮೇರಿಕಾ ಮತ್ತು ಯೂರೋಪಿನಲ್ಲಿ ಕೂಡ ದೊಡ್ಡ ಸಂಸ್ಥೆಗಳ ಅಧಿಪತ್ಯದ ವಿರುದ್ಧ ಧ್ವನಿ ಎತ್ತುವುದು ಶುರುವಾಗಿದೆ. ಸೌತ್ ಕೊರಿಯಾದ ಈ ನಡೆ ಜಗತ್ತಿನ ಇತರ ದೇಶಗಳಿಗೆ ಪ್ರೇರಣೆಯಾಗಬಹುದು. ಮೊನಾಪಲಿ ಅಂತ್ಯಕ್ಕೆ ಇದು ದಾರಿಯಾಗಬಹುದು.

English summary

Daily Money and Market Series 1: South Korea 1st country to ban Google, Apple payment monopolies

Daily Money and Market Series by Financial Expert Rangaswamy Mookanahalli: South Korea’s becomes the 1st country to ban Google and Apple from forcing developers to use their in-app payment systems. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X