ಹೊಸ ಸಂವತ್‌ಗಾಗಿ ದೀಪಾವಳಿ ಮುಹೂರ್ತದ ವ್ಯಾಪಾರವು ನವೆಂಬರ್ 12 ರಂದು ನಡೆಯಲಿದೆ. ಸಂಜೆ 6 ರಿಂದ 7.15 ರವರೆಗೆ ದೀಪಾವಳಿಯ ಈ ಮೂಹೂರ್ತ ಟ್ರೇಡಿಂಗ್ ನಡೆಯಲಿದೆ ಎಂದು ಅಕ್ಟೋಬರ್ 27 ರಂದು ಬಿಎಸ್‌ಇ ಅನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಸೇರಿದಂತೆ ಹೊಸದನ್ನು ಪ್ರಾರಂಭಿಸಲು ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಎಕ್ಸ್‌ಚೇಂಜ್‌ಗಳು ನಡೆಸುವ ವಿಶೇಷ ವಹಿವಾಟು ಮುಹೂರ್ತ ಟ್ರೇಡಿಂಗ್ ಆಗಿದೆ.

ದೀಪಾವಳಿಯ ಸಮಯದಲ್ಲಿ, ವಿನಿಮಯ ಕೇಂದ್ರಗಳು ಒಂದು ಗಂಟೆ ಮಾತ್ರ ತೆರೆದಿರುತ್ತವೆ. ಅಲ್ಲಿ ವ್ಯಾಪಾರಿಗಳು ಹೊಸ ವರ್ಷದ ಆರಂಭವನ್ನು ಗುರುತಿಸಲು ಟೋಕನ್ ವಹಿವಾಟುಗಳನ್ನು ಮಾಡಬಹುದಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಯಾಕಾಗಿ ಈ ದಿನವೇ ವಹಿವಾಟು?
ಹೂಡಿಕೆದಾರರು ಮುಹೂರ್ತ ವಹಿವಾಟಿನ ಸಮಯದಲ್ಲಿ ಷೇರುಗಳನ್ನು ಖರೀದಿಸುತ್ತಾರೆ. ಈ ಸಮಯದಲ್ಲಿ ಅವುಗಳನ್ನು ಖರೀದಿಸುವುದರಿಂದ ವರ್ಷವಿಡೀ ಸಂಪತ್ತು ಮತ್ತು ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ. ದೀಪಾವಳಿಯಂದು, ಷೇರು ವ್ಯಾಪಾರಿಗಳು ಹೊಸ ಖಾತೆಗಳನ್ನು ಪ್ರಾರಂಭಿಸುತ್ತಾರೆ.
ನಿಯಮಿತ ವ್ಯಾಪಾರಕ್ಕಾಗಿ ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದರೂ, ಆ ದಿನ ಆ ಒಂದು ಗಂಟೆಯವರೆಗೆ ಮಾರುಕಟ್ಟೆ ತೆರೆದಿರುತ್ತದೆ. ಇದಲ್ಲದೆ, ವಿಶೇಷ ಸೆಷನ್‌ನಲ್ಲಿ ಮಾಡಲಾದ ವಹಿವಾಟು ಅದೇ ದಿನ ಇತ್ಯರ್ಥವಾಗುತ್ತದೆ. ವಿವರಗಳ ಪ್ರಕಾರ, 15 ನಿಮಿಷಗಳ ಪೂರ್ವ-ಆರಂಭಿಕ ಮತ್ತು ಮುಕ್ತಾಯದ ಅವಧಿಗಳಿವೆ. ಎಲ್ಲಾ ವಹಿವಾಟುಗಳನ್ನು ಆ ದಿನವೇ ಇತ್ಯರ್ಥವಾಗುತ್ತದೆ.
2022 ರಲ್ಲಿ, ಸ್ಟಾಕ್ ಮಾರುಕಟ್ಟೆಗಳು (ಎನ್‌ಎಸ್‌ಇ ಮತ್ತು ಬಿಎಸ್‌ಇ) ದೀಪಾವಳಿ ಮುಹೂರ್ತವನ್ನು ಅಕ್ಟೋಬರ್ 24ರ 2022 ರಂದು ಸಂಜೆ 6.15 ರ ನಡುವೆ ನಡೆಸಿದೆ. 7.15 ಕ್ಕೆ ವಹಿವಾಟು ಕೊನೆಗೊಂಡಿದೆ.
ಮುಹೂರ್ತ ವ್ಯಾಪಾರದ ಮಹತ್ವ
ಹೂಡಿಕೆದಾರರು ತಮ್ಮ ಹೂಡಿಕೆಯ ಪ್ರಯಾಣವನ್ನು ಮಂಗಳಕರವಾದ ದಿನದಂದು ಪ್ರಾರಂಭಿಸಲು ಮತ್ತು ಪೋರ್ಟ್‌ಪೋಲಿಯೋಗಳಿಗೆ ಹೊಸ ಷೇರುಗಳನ್ನು ಸೇರಿಸಲು ಅವಕಾಶವಾಗಿ ನೋಡುವುದರಿಂದ ಮುಹೂರ್ತ ವಹಿವಾಟನ್ನು ಮಹತ್ವದ ವಹಿವಾಟಾಗಿ ಪರಿಗಣಿಸಲಾಗುತ್ತದೆ. ಹಾಗೆಯೇ ತಮ್ಮ ಹೋಲ್ಡಿಂಗ್‌ನಲ್ಲಿ ಷೇರುಗಳನ್ನು ಕೂಡಾ ಹೆಚ್ಚಿಸುತ್ತಾರೆ.
ಕಳೆದ ಎರಡು ಮುಹೂರ್ತ ಅವಧಿಗಳಲ್ಲಿ, ಸ್ಟಾಕ್ ಮಾರುಕಟ್ಟೆ ಗ್ರೀನ್ ಜೋನ್‌ನಲ್ಲಿದೆ. 2022 ರಲ್ಲಿ ಮುಹೂರ್ತ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ ಶೇಕಡ 0.88 ರಷ್ಟು ಲಾಭ ಗಳಿಸಿದೆ. 2021 ರಲ್ಲಿ ಎರಡು ಸೂಚ್ಯಂಕಗಳು ಶೇಕಡ 0.49 ರಷ್ಟು ಏರಿಕೆಯಾಗಿದೆ. ಒಂದು ಗಂಟೆಯ ಮುಹೂರ್ತದ ವಹಿವಾಟಿನ ಅವಧಿಯಲ್ಲಿ, ಮಾರುಕಟ್ಟೆಯ ಚಲನೆ ಅಸ್ಥಿರವಾಗಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications