"ಚೀನಾ ನಾಗರಿಕರಿಗೆ ದೆಹಲಿಯಲ್ಲಿ ಹೋಟೆಲ್ ರೂಮ್ ಬಾಡಿಗೆಗೆ ನೀಡಲ್ಲ"

ದೆಹಲಿ ಹೋಟೆಲ್ ಅಂಡ್ ರೆಸ್ಟೋರೆಂಟ್ ಓನರ್ಸ್ ಅಸೋಸಿಯೇಷನ್ (DHROA) ಎಂಬ ಸಂಘಟನೆ ದೆಹಲಿಯಲ್ಲಿ ಹತ್ತಿರಹತ್ತಿರ 75,000ದಷ್ಟು ಹೋಟೆಲ್ ರೂಮ್ ಗಳ ನಿರ್ವಹಣೆ ಮಾಡುತ್ತದೆ. ಆ ಅಸೋಸಿಯೇಷನ್ ವ್ಯಾಪ್ತಿಗೆ ಬರುವ ಹೋಟೆಲ್ ಗಳ ರೂಮ್ ಅನ್ನು ಚೀನಾ ನಾಗರಿಕರಿಗೆ ನೀಡದಿರುವುದಕ್ಕೆ ತೀರ್ಮಾನ ಮಾಡಲಾಗಿದೆ.

ಸಂಘಟನೆ ಸದಸ್ಯತ್ವ ಹೊಂದಿರುವ ಹೋಟೆಲ್ ಗಳಲ್ಲಿ ಚೀನಾ ಸರಕು ಮತ್ತು ಉತ್ಪನ್ನಗಳನ್ನು ಬಳಸದಿರಲು ತೆಗೆದುಕೊಂಡ ನಿರ್ಧಾರದ ಜತೆಗೆ ಇದನ್ನೂ ಜಾರಿಗೆ ತರಲಾಗುತ್ತದೆ. ಯುದ್ಧ ಹಾಗೂ ವ್ಯಾಪಾರ ಎರಡನ್ನೂ ಏಕ ಕಾಲಕ್ಕೆ ಮಾಡಲು ಸಾಧ್ಯವಿಲ್ಲ ಎಂದು ಸಂಘಟನೆ ಅಧ್ಯಕ್ಷ ಸಂದೀಪ್ ಖಂಡೇವಾಲ್ ಹೇಳಿದ್ದಾರೆ.

ಖಂಡೇವಾಲ್ ಮಾತನಾಡಿ, ಭಾರತಕ್ಕೆ ಭೇಟಿ ನೀಡುವ ಹತ್ತಿರಹತ್ತಿರ 90 ಪರ್ಸೆಂಟ್ ನಷ್ಟು ಚೀನೀಯರು ವ್ಯಾಪಾರದ ಉದ್ದೇಶಕ್ಕೆ ಬರುತ್ತಾರೆ. ಅದು ಅವರಿಗೆ ಆರ್ಥಿಕ ಅವಕಾಶ ಎಂದು ಹೇಳಿದ್ದಾರೆ. ಈ ಹೋಟೆಲ್ ಸಂಘಟನೆ ಅಡಿಯಲ್ಲಿ ಮುಖ್ಯವಾಗಿ ಬಜೆಟ್ ಹೋಟೆಲ್ ಗಳು, ಅತಿಥಿಗೃಹಗಳು ಹಾಗೂ ಕೆಲವೇ ಕೆಲವು ತ್ರೀಸ್ಟಾರ್ ಹಾಗೂ ಫೋರ್ ಸ್ಟಾರ್ ಹೋಟೆಲ್ ಗಳು ಬರುತ್ತವೆ.

ದೆಹಲಿಯ ಸ್ಟಾರ್ ಹೋಟೆಲ್ ಗಳ ಜತೆಗೂ ಮಾತನಾಡಿ ಈ ಚಳವಳಿಯಲ್ಲಿ ಸೇರಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ಇತರ ರಾಜ್ಯಗಳ ಹೋಟೆಲ್ ಅಸೋಸಿಯೇಷನ್ ಗಳೊಂದಿಗೂ ಮಾತನಾಡಿ, ಈ ನಿರ್ಧಾರವನ್ನು ಅಲ್ಲಿಯೂ ಜಾರಿ ಮಾಡುವಂತೆ ಆಗ್ರಹಿಸುತ್ತೇವೆ ಎಂದು ಖಂಡೇವಾಲ್ ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+