ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಭಾನುವಾರ(ಫೆ.14) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತ ಆರನೇ ದಿನವು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 29 ಪೈಸೆ ಏರಿಕೆಗೊಂಡು 88.73 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 32 ಪೈಸೆ ಹೆಚ್ಚಾಗಿ 79.06 ರೂಪಾಯಿಗೆ ಮುಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಬೆಲೆ
ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 14: 91.76 (36 ಪೈಸೆ ಏರಿಕೆ)
ಫೆಬ್ರವರಿ 13: 91.40
ಫೆಬ್ರವರಿ 12: 91.09
ಫೆಬ್ರವರಿ 11: 90.78
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 14: 83.87 (40 ಪೈಸೆ ಏರಿಕೆ)
ಫೆಬ್ರವರಿ 13: 83.47
ಫೆಬ್ರವರಿ 12: 83.09
ಫೆಬ್ರವರಿ 11: 82.72
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಬೆಲೆ
ಇಂಧನ ದರ ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 14: 88.73 (29 ಪೈಸೆ ಏರಿಕೆ)
ಫೆಬ್ರವರಿ 13: 88.44
ಫೆಬ್ರವರಿ 12: 88.14
ಫೆಬ್ರವರಿ 11: 87.85
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 14: 79.06 (32 ಪೈಸೆ ಏರಿಕೆ)
ಫೆಬ್ರವರಿ 13: 78.74
ಫೆಬ್ರವರಿ 12: 77.73
ಫೆಬ್ರವರಿ 11: 78.03
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 14: 95.21 (28 ಪೈಸೆ ಏರಿಕೆ)
ಫೆಬ್ರವರಿ 13: 94.93
ಫೆಬ್ರವರಿ 12: 94.64
ಫೆಬ್ರವರಿ 11: 94.36
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 14: 86.04 (34 ಪೈಸೆ ಏರಿಕೆ)
ಫೆಬ್ರವರಿ 13: 85.70
ಫೆಬ್ರವರಿ 12: 85.32
ಫೆಬ್ರವರಿ 11: 84.94
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 14: 90.96 (26 ಪೈಸೆ ಏರಿಕೆ)
ಫೆಬ್ರವರಿ 13: 90.70
ಫೆಬ್ರವರಿ 12: 90.44
ಫೆಬ್ರವರಿ 11: 90.18
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 14: 84.16 (30 ಪೈಸೆ ಏರಿಕೆ)
ಫೆಬ್ರವರಿ 13: 83.86
ಫೆಬ್ರವರಿ 12: 83.52
ಫೆಬ್ರವರಿ 11: 83.18


Click it and Unblock the Notifications