ಬೆಂಗಳೂರು, ಏಪ್ರಿಲ್ 17: ಕರ್ನಾಟಕದಾದ್ಯಂತ ಅಧಿಕ ತಾಪಮಾನದ ನಡುವೆ ಬಿಯರ್ ಮಾರಾಟವು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಗಮನಾರ್ಹವಾಗಿ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ವರದಿಯ ಪ್ರಕಾರ, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕರ್ನಾಟಕದಲ್ಲಿ ಹೆಚ್ಚುತ್ತಿರುವ ತಾಪಮಾನ ಮದ್ಯ ಮಾರಾಟದ ಏರಿಕೆಗೆ ಕಾರಣ. ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ 23.5 ಲಕ್ಷ ಕಾರ್ಟನ್ ಬಾಕ್ಸ್ ಬಿಯರ್ ಮಾರಾಟವಾಗಿದೆ ಎಂದು ಹೇಳಿದೆ.

ಈ ತಿಂಗಳ ಮೊದಲ ವಾರದಲ್ಲಿ ಭಾರತೀಯ ಹವಾಮಾನ ಇಲಾಖೆಯು ಈ ಬೇಸಿಗೆಯಲ್ಲಿ ಮಧ್ಯ, ಉತ್ತರ ಬಯಲು ಪ್ರದೇಶಗಳು ಮತ್ತು ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಖದ ಅಲೆಗಳ ದಿನಗಳು ಮುಂದುವರೆಯುತ್ತದೆ ಎಂದು ಮುನ್ಸೂಚನೆ ನೀಡಿದೆ. ಅಬಕಾರಿ ಇಲಾಖೆಯಿಂದ ಪಡೆದ ಅಂಕಿಅಂಶದ ಪ್ರಕಾರ ಏಪ್ರಿಲ್ 2023 ರ ಸಂಪೂರ್ಣ ತಿಂಗಳಿಗೆ ದಾಖಲಾದ ಒಟ್ಟು ಮಾರಾಟದಲ್ಲಿ ಕರ್ನಾಟಕವು ಈಗಾಗಲೇ 61% ಅನ್ನು ಸಾಧಿಸಿದೆ ಎಂದು ತಿಳಿಸಿದೆ.
ಕಳೆದ ಏಪ್ರಿಲ್‌ನಲ್ಲಿ 38.6 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಈ ವರ್ಷ ತಿಂಗಳ ಮೊದಲ ಎರಡು ವಾರಗಳಲ್ಲಿ 23.5 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಡೇಟಾವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ 2024 ರ ಆರಂಭದಿಂದಲೂ ಬಿಯರ್ ಮಾರಾಟವು ಗಗನಕ್ಕೇರುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿದು ಬಂದಿದೆ.
ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಮಾರಾಟವು ಹಿಂದಿನ ವರ್ಷದ ದಾಖಲೆಗಳನ್ನು ಮೀರಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬೇಸಿಗೆಯಲ್ಲಿ ಅಬಕಾರಿ ಇಲಾಖೆಯು ಮಾರಾಟದಲ್ಲಿ 30% ಹೆಚ್ಚಳ ಕಂಡು ಬಂದಿದೆ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ದಾಸ್ತಾನು ಹೊಂದಿದೆ ಎಂದು ಅಬಕಾರಿ ಇಲಾಖೆ ದೃಢಪಡಿಸಿದೆ.
ಲೋಕಸಭೆ ಚುನಾವಣೆ ಪರಿಣಾಮ
ಬೇಸಿಗೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಿಯರ್ ಅನೇಕರಿಗೆ ಆಯ್ಕೆಯ ಪಾನೀಯವಾಗಿದೆ. ತಾಪಮಾನ ಹೆಚ್ಚಾದಂತೆ ಬಿಯರ್ ಸೇವನೆಯೂ ಹೆಚ್ಚಾಗುತ್ತದೆ. ಇದಲ್ಲದೆ ಲೋಕಸಭಾ ಚುನಾವಣೆಯ ಪರಿಣಾಮ ಬಿಯರ್ ಮಾರಾಟವನ್ನು ಮತ್ತಷ್ಟು ಹೆಚ್ಚಿಸಿವೆ. ಚಿಲ್ಡ್ ಬಿಯರ್ ಆದ್ಯತೆಯ ಆಯ್ಕೆಯಾಗಿದೆ. ಇದು ಏರುವ ಶಾಖದಿಂದ ಪಾರಾಗಲು ಸಹಕಾರಿ ಎಂದು ಜನ ನಂಬುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications