ಅಪ್ಪ ಶೋರೂಮಲ್ಲಿ ಕೆಲಸ.. ತಾಯಿ ಮನೆಗೇ ಸೀಮಿತ.. ಅಕ್ಕನೇ ಈತನಿಗೆ ಎಲ್ಲಾ.. ಇವರೆಲ್ಲರ ಶ್ರಮಕ್ಕೆ ಸಿಕ್ಕ ಫಲವೇ 625ಕ್ಕೆ 625 ಅಂಕ. ಹೌದು, ಇದು ಮೈಸೂರಿನ ಸಾಧಕ ಧನುಷ್ ಸಕ್ಸಸ್ ಸ್ಟೋರಿ! ಅಚ್ಚರಿ ಎಂದರೆ, ಕನ್ನಡ ವಿಜ್ಞಾನ ಪರೀಕ್ಷೆಯ ದಿನ ಧನುಷ್ ಆರೋಗ್ಯ ಸರಿ ಇರಲಿಲ್ಲ. ಈಗ ರಾಜ್ಯಕ್ಕೆ ಟಾಪರ್ ಆಗಿದ್ದಾನೆ.
ಅರಮನೆ ನಗರಿ ಮೈಸೂರಿನ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜ್ವರ, ಹೊಟ್ಟೆ ನೋವು, ಹಣಕಾಸಿನ ತೊಂದರೆ ಎಲ್ಲದರ ಮಧ್ಯೆಯೂ ದೃಢವಾಗಿ ಓದಿ ಎಸ್ಸೆಎಸ್ಸೆಲ್ಸಿ ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೈಸೂರಿನ ಧನುಷ್ ಅವರ ಸಾಧನೆ ಎಲ್ಲರಿಗೂ ಪ್ರೇರಣೆ.

ಆತ್ಮವಿಶ್ವಾಸದ ನಿಜವಾದ ಉದಾಹರಣೆ ಧನುಷ್ ಎಸ್ ಅವರ ಈ ಸಾಧನೆ ಇತರರಿಗೆ ಮಾದರಿಯಾಗಿದೆ.ಅನಾರೋಗ್ಯದ ನಡುವೆಯೂ ಅವರು ಪೇಯ್ನ್‌ಕಿಲ್ಲರ್ ಇಂಜೆಕ್ಷನ್ ತೆಗೆದುಕೊಂಡು ಪರೀಕ್ಷೆ ಬರೆಯುವುದು ಅವರ ಗುರಿಯನ್ನು ಮುಟ್ಟಿದ್ದಾರೆ.
ತಂದೆ ಶಿವಕುಮಾರ್ ಅವರ ಸಾಧನೆಯ ಕುರಿತು ಮಾತನಾಡಿ, ನಮ್ಮ ಮಗ ಆರ್ಥಿಕ ಅಡಚಣೆಗಳ ನಡುವೆಯೂ ತಮ್ಮ ಮಗ ಯಶಸ್ಸು ಸಾಧಿಸುತ್ತಾನೆ ಎಂಬ ವಿಶ್ವಾಸ ಇತ್ತು.ನಾವು ಕಷ್ಟಕ್ಕೆ ಅಂಜದೇ ಮಗ ಸಾಧನೆ ಮಾಡುತ್ತಾನೆ ಎಂಬ ನಂಬಿಕೆಯಿದ ಪೋತ್ಸಾಹ ನೀಡಿದ್ಧೇವು ಎಂದು ಸಂತಸವನ್ನು ವ್ಯಕ್ತಪಡಿಸಿದ್ದರು.
625ಕ್ಕೆ 625 ಅಂಕ ಬಂದಿರುವುದು ತುಂಬಾ ಖುಷಿ ಇದೆ
ಧನುಷ್ ಮಾತನಾಡಿ ನನಗೆ ಎಸ್‌ಎಸ್ಎಲ್‌ಸಿಯಲ್ಲಿ 625ಕ್ಕೆ 625 ಅಂಕ ಬಂದಿರುವುದು ತುಂಬಾ ಖುಷಿ ಇದೆ. ನನ್ನ ಎಲ್ಲಾ ಶಿಕ್ಷಕರು, ಮರಿಮಲ್ಲಪ್ಪ ಶಾಲೆಯ ಸಿಬ್ಬಂದಿ ವರ್ಗ ಎಲ್ಲರೂ ನನಗೆ ಸಹಾಯವನ್ನು ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಏನೆಲ್ಲಾ ಓದಬೇಕು ಎಂದು ಗೈಡ್ ಮಾಡಿದ್ದಾರೆ. ನನ್ನ ಹೆತ್ತವರು, ಹಾಗೂ ನನ್ನ ಅಕ್ಕ ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಇಷ್ಟು ಅಂಕಗಳನ್ನು ಗಳಿಸಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾನೇನು ಜಾಸ್ತಿ ಓದುತ್ತಿರಲಿಲ್ಲ
SSLCಯಲ್ಲಿ ನಾನು ಮಧ್ಯವಾರ್ಷಿಕ ಪರೀಕ್ಷೆ ಬಳಿಕ ಪ್ರತಿದಿನ ಎರಡು ಗಂಟೆಗಳ ಕಾಲ ಓದುತ್ತಿದ್ದೆ. ಆಮೇಲೆ ಪೂರ್ವಭಾವಿ ಪರೀಕ್ಷೆಗಳು ಆರಂಭವಾಗಿದ್ದವು. ಎಲ್ಲಾ ವಿಷಯದ ಕುರಿತು ನಾನು ವೇಳಾಪಟ್ಟಿ ರೆಡಿ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದೆ.ಯಾವುದೇ ಯಾವುದೇ ಟ್ಯೂಷನ್ಗೆ ಹೋಗುತ್ತಿರಲಿಲ್ಲ. ಪ್ರತಿನಿತ್ಯ ಶಿಕ್ಷಕರು ಹೇಳಿದ ಹಾಗೆ ಓದುತ್ತಿದ್ದೆ ಫಲಿತಾಂಶ ನೋಡಿ ಅಚ್ಚರಿ ಆಗಿದೆ ಎಂದರು.
ಪಾಲ್ ಆದವರು ಚಿಂತೆ ಮಾಡುವ ಅಗತ್ಯವಿಲ್ಲ
ಜೀವನದಲ್ಲಿ ಸೋಲು-ಗೆಲವು ಎರಡು ಇರಬೇಕು..ಪರೀಕ್ಷೆ ಇಂದೇ ಎಲ್ಲದಕ್ಕೂ ಉತ್ತರವಲ್ಲ ಪಾಲ್ ಆದವರು ಚಿಂತೆ ಮಾಡುವ ಅಗತ್ಯವಿಲ್ಲ ಇನ್ನೂ ಎರಡು ಅವಕಾಶಗಳಿವೆ. ಅವುಗಳಲ್ಲಿ ಚೆನ್ನಾಗಿ ಓದಿ, ಬರೆದರೆ, ಪಾಸ್ ಆಗಬಹುದು ಎಂದು ಪಾಲ್ ಆದ ವಿದ್ಯಾರ್ಥಿಗಳಿಗೆ ಭರವಸೆಯ ಕಿವಿ ಮಾತುಗಳನ್ನು ಹೇಳಿದ್ದರು.
625 ಅಂಕಗಳಿಗೆ 625 ಅಂಕಗಳಿಸಿದ ವಿದ್ಯಾರ್ಥಿಗಳ ವಿವರ
ಅಖೀಲ್ ಅಹ್ಮದ್ ನದಾಫ್: ವಿಜಯಪುರ ಜಿಲ್ಲೆ
ದೇವನಹಳ್ಳಿ: ಸಿ. ಭಾವನಾ
ಮೈಸೂರು ಜಿಲ್ಲೆ: ಎಸ್.ಧನುಷ್
ಮಂಡ್ಯ ಜಿಲ್ಲೆ: ಜೆ.ಧೃತಿ
ಬೆಂಗಳೂರು ದಕ್ಷಿಣ: ಎಸ್.ಎನ್.ಜಾಹ್ನವಿ
ಬೆಂಗಳೂರು ಉತ್ತರ: ಮಧುಸೂಧನ್ ರಾಜ್
ತುಮಕೂರು ಜಿಲ್ಲೆ: ಮೊಹಮ್ಮದ್ ಮಸ್ತೂರ್
ಚಿತ್ರದುರ್ಗ ಜಿಲ್ಲೆ: ಮೌಲ್ಯ ಡಿ. ರಾಜ್
ಶಿವಮೊಗ್ಗ ಜಿಲ್ಲೆ: ಕೆ.ನಮನ
ಬೆಂಗಳೂರು ದಕ್ಷಿಣ ಜಿಲ್ಲೆ: ನಮಿತಾ:
ಚಿತ್ರದುರ್ಗ ಜಿಲ್ಲೆ: ನಂದನ್
ಶಿವಮೊಗ್ಗ: ನಿತ್ಯ ಎಂ.ಕುಲಕರ್ಣಿ,ರಂಜಿತಾ
ಬೆಂಗಳೂರು ಗ್ರಾಮಾಂತರ: ರೂಪಾ
ಬೆಳಗಾವಿ ಜಿಲ್ಲೆ: ಚೆನ್ನಗೌಡ ಪಾಟೀಲ್
ಶಿವಮೊಗ್ಗ ಜಿಲ್ಲೆ: ಶಗುಫ್ತಾ ಅಂಜುಮ್
ಉಡುಪಿ ಜಿಲ್ಲೆ: ಶಿರಸಿ ಸ್ವಸ್ತಿ ಕಾಮತ್:
ಮೈಸೂರು ಜಿಲ್ಲೆ:ಆರ್.ಎನ್.ತಾನ್ಯಾ
ಹಾಸನ ಜಿಲ್ಲೆ: ಉತ್ಸವ್ ಪಾಟೀಲ್
ಮಧುಗಿರಿ: ಎಂ.ಧನಲಕ್ಷ್ಮೀ
ಫೇಲ್ ಆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ಕಡಿಮೆ ಅಂಕ ಗಳಿಸಿ ಅನುತ್ತೀರ್ಣರಾದವರಿಗೆ ಮತ್ತೆರಡು ಬಾರಿ ಅವಕಾಶವನ್ನು ನೀಡಲಾಗಿದೆ. ಈ ಬಾರಿ ನೀವು ಎಕ್ಸಾಮ್ ಶುಲ್ಕ ಇಲ್ಲದೆಯೇ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಿದೆ.ಫೇಲ್ ಆದ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ಮಾಡಲು ಶಾಲೆಗಳಿಗೆ ಸೂಚನೆಯನ್ನು ನೀಡಲಾಗಿದೆ.


Click it and Unblock the Notifications