For Quick Alerts
ALLOW NOTIFICATIONS  
For Daily Alerts

1 ಲಕ್ಷ ಅಸ್ತಿತ್ವದಲ್ಲಿಲ್ಲದ ಖಾತೆ ಮೂಲಕ DHFLನಿಂದ 12,773 ಕೋಟಿ ವರ್ಗಾವಣೆ

|

ಒಂದು ಲಕ್ಷ ಮಂದಿ ಅಸ್ತಿತ್ವದಲ್ಲಿ ಇಲ್ಲದ ರೀಟೇಲ್ ಗ್ರಾಹಕರಿಗೆ 2011ರಿಂದ 2016ನೇ ಇಸವಿ ಮಧ್ಯೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಿಂದ (ಡಿಎಚ್ ಎಫ್ ಎಲ್) 12,773 ಕೋಟಿ ರುಪಾಯಿ ಸಾಲ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು ಕಂಡುಹಿಡಿದಿದೆ ಎಂಬ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆದರೆ, ವಾಸ್ತವದಲ್ಲಿ ಡಿಎಚ್ ಎಫ್ ಎಲ್ ಪ್ರವರ್ತಕರಿಗೇ ಸಂಬಂಧಿಸಿದ 79 ಕಂಪೆನಿಗಳಿಗೆ ಈ ಮೊತ್ತ ನೀಡಲಾಗಿದೆ ಎಂಬ ಆರೋಪ ಮಾಡಲಾಗಿದೆ. ಮೂಲಗಳ ಪ್ರಕಾರ, ಅಸ್ತಿತ್ವದಲ್ಲಿ ಇಲ್ಲದ ಖಾತೆಗಳು ಮತ್ತು ಕಂಪೆನಿಗಳ ಖಾತೆಗಳ ಬಗ್ಗೆ ಜಾರಿ ನಿರ್ದೇಶನಾಲಯ ತಲೆ ಕೆಡಿಸಿಕೊಂಡಿದ್ದಾಗ 2,186 ಕೋಟಿ ಸಾಲವನ್ನು ಐದು ಕಂಪೆನಿಗಳಿಗೆ ನೀಡಿದ್ದು ಕಂಡುಬಂದಿತ್ತು.

225 ಕೋಟಿ ರುಪಾಯಿಗೆ ಆಸ್ತಿ ಖರೀದಿ
 

225 ಕೋಟಿ ರುಪಾಯಿಗೆ ಆಸ್ತಿ ಖರೀದಿ

ಫೇತ್ ರಿಯಾಲ್ಟರ್ಸ್, ಮಾರ್ವೆಲ್ ಟೌನ್ ಶಿಪ್, ಏಬಲ್ ರಿಯಾಲ್ಟಿ, ಪೊಸೈಡನ್ ರಿಯಾಲ್ಟಿ ಮತ್ತು ರಾಂಡಮ್ ರಿಯಾಲ್ಟರ್ಸ್ ಗೆ ನೀಡಲಾಗಿತ್ತು. ಈ ಕಂಪೆನಿಗಳು ಆ ನಂತರ ಸನ್ ಬ್ಲಿಂಕ್ ರಿಯಲ್ ಎಸ್ಟೇಟ್ ಜತೆ ಸೇರಿಕೊಂಡಿದ್ದವು. ಆದರೆ ಈ ಸನ್ ಬ್ಲಿಂಕ್ ರಿಯಲ್ ಎಸ್ಟೇಟ್ ಕಂಪೆನಿಯು ಹತ್ಯೆಯಾದ ಇಕ್ಬಾಲ್ ಮಿರ್ಚಿಗೆ ಸೇರಿದ್ದು ಎನ್ನಲಾದ ವೊರ್ಲಿ ಮೂಲದ ಆಸ್ತಿಯನ್ನು 225 ಕೋಟಿ ರುಪಾಯಿಗೆ ಖರೀದಿ ಮಾಡಿರುವುದು ಕಂಡುಬಂತೋ ಆಗ ಜಾರಿ ನಿರ್ದೇಶನಾಲಯದ ಕಣ್ಣು ಬಿತ್ತು. ಇದೀಗ ಇ.ಡಿ. ಬಯಲು ಮಾಡಿರುವ ಸಂಗತಿ ಬಗ್ಗೆ ಕಂಪೆನಿ ಏನು ಪ್ರತಿಕ್ರಿಯೆ ನೀಡಬಹುದು ಎಂಬ ಬಗ್ಗೆ ನಿರೀಕ್ಷಿಸಲಾಗುತ್ತಿದೆ. ಈಗಾಗಲೇ ಇ.ಡಿ.ಯಿಂದ ಡಿಎಚ್ ಎಫ್ ಎಲ್ ಪ್ರವರ್ತಕ ಕಪಿಲ್ ವಾಧ್ವಾನ್ ಬಂಧಿಸಲಾಗಿದೆ. ಮಿರ್ಚಿಗೆ ಸಂಬಂಧಿಸಿದ ಆಸ್ತಿ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಅವರ ಮೇಲೆ ಮಾಡಲಾಗಿದೆ.

ಸನ್ ಬ್ಲಿಂಕ್ ಕಂಪೆನಿ ಮೂಲಕ ವ್ಯವಹಾರ

ಸನ್ ಬ್ಲಿಂಕ್ ಕಂಪೆನಿ ಮೂಲಕ ವ್ಯವಹಾರ

ಕಳೆದ ವರ್ಷ ದಾಖಲಾದ ಪ್ರಕರಣದಲ್ಲಿ ವಾಧ್ವಾನ್ ಐದನೇ ಆರೋಪಿ. ಡಿಎಚ್ ಎಫ್ ಎಲ್ ನಿಂದ ಶೆಲ್ ಕಂಪೆನಿಗಳಿಗೆ ಹಣ ವರ್ಗಾವಣೆ ಮಾಡಿರುವುದರಲ್ಲಿ ವಾಧ್ವಾನ್ ದೇ 'ಪ್ರಮುಖ ಪಾತ್ರ' ಎನ್ನಲಾಗಿದೆ. ಮಿರ್ಚಿಯಿಂದ ಆಸ್ತಿ ಖರೀದಿ ಮಾಡುವ ಸಲುವಾಗಿಯೇ ಸನ್ ಬ್ಲಿಂಕ್ ಸೃಷ್ಟಿಸಲಾಗಿದೆ ಎಂಬುದು ಆರೋಪ. ಇ.ಡಿ. ಪ್ರಕಾರ: ವೊರ್ಲಿ - ರಬಿಯಾ ಮ್ಯಾನ್ಷನ್, ಸೀ ವ್ಯೂ ಮತ್ತು ಮರಿಯಂ ಲಾಡ್ಜ್ ಮಿರ್ಚಿಗೆ ಸೇರಿದ್ದು. ಈತ ಹಲವು ಅಪರಾಧ ಪ್ರಕರಣದಲ್ಲಿ ಪಾಲ್ಗೊಂಡು ತಲೆ ತಪ್ಪಿಸಿಕೊಂಡಿದ್ದ. ಡಿಎಚ್ ಎಫ್ ಎಲ್ ನ ಮತ್ತೊಬ್ಬ ಪ್ರವರ್ತಕರಾದ ಧೀರಜ್ ವಾಧ್ವಾನ್ ಮಿರ್ಚಿ ಜತೆ ಮಾತನಾಡಿ, ಸನ್ ಬ್ಲಿಂಕ್ ಕಂಪೆನಿ ಮೂಲಕ ಆಸ್ತಿ ಖರೀದಿಸಲು ನಿರ್ಧರಿಸಲಾಗುತ್ತದೆ.

ಎನ್ ಬಿಎಫ್ ಸಿ ನಿಯಮ ಪಾಲನೆ ಮಾಡಿಲ್ಲ

ಎನ್ ಬಿಎಫ್ ಸಿ ನಿಯಮ ಪಾಲನೆ ಮಾಡಿಲ್ಲ

ನೂರಾ ಹನ್ನೊಂದು ಕೋಟಿ ರುಪಾಯಿಯನ್ನು ಈ ವ್ಯವಹಾರಕ್ಕಾಗಿ ಪಾವತಿಸಲಾಗುತ್ತದೆ. ಆ ಮೊತ್ತವನ್ನು ಸನ್ ಬ್ಲಿಂಕ್ ಗೆ ಡಿಎಚ್ ಎಫ್ ಎಲ್ ನಿಂದ ಸಾಲ ನೀಡಲಾಗುತ್ತದೆ. ಆ ನಂತರ ಆರ್ ಕೆಡಬ್ಲ್ಯು ಡೆವಲಪರ್ಸ್ ನಿಂದ ಸಾಲ ಪಡೆದು ಮರು ಪಾವತಿ ಮಾಡಲಾಗಿದೆ ಎಂದು ತೋರಿಸಲಾಗಿದೆ. ಐದು ಕಂಪೆನಿಗೆ ನೀಡಿರುವ ಸಾಲದಲ್ಲಿ ಅವ್ಯವಹಾರ ಆಗಿದೆ ಎಂದು ಇ.ಡಿ. ಆರೋಪಿಸುತ್ತಿದೆ. ಇವುಗಳಿಗೆ ಸಾಲ ನೀಡುವಾಗ ಡಿಎಚ್ ಎಫ್ ಎಲ್ ನಿಂದ ಎನ್ ಬಿಎಫ್ ಸಿಯ (ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿ) ಯಾವ ನಿಯಮವೂ ಪಾಲನೆ ಆಗಿಲ್ಲ ಎನ್ನುತ್ತಿದೆ.

ಆರ್ ಬಿಐನಿಂದ ಡಿಎಚ್ ಎಫ್ ಎಲ್ ಆಡಳಿತ ಮಂಡಳಿ ಸೂಪರ್ ಸೀಡ್
 

ಆರ್ ಬಿಐನಿಂದ ಡಿಎಚ್ ಎಫ್ ಎಲ್ ಆಡಳಿತ ಮಂಡಳಿ ಸೂಪರ್ ಸೀಡ್

ಅಂದ ಹಾಗೆ ಡಿಎಚ್ ಎಫ್ ಎಲ್ ನಿಂದ ಬ್ಯಾಂಕ್ ಗಳು, ಮ್ಯೂಚುವಲ್ ಫಂಡ್ ಗಳು ಮತ್ತು ಹೂಡಿಕೆದಾರರಿಗೂ ಸೇರಿ 83,873 ಕೋಟಿ ಬಾಕಿ ಪಾವತಿಸಬೇಕಿದೆ. ದಿವಾಳಿ ಕೋರ್ಟ್ ಮೂಲಕ ಇತ್ಯರ್ಥಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೊದಲು ಸೂಚಿಸಿದ ಎನ್ ಬಿಎಫ್ ಸಿ ದಿವಾನ್ ಹೌಸಿಂಗ್ ಫೈನಾನ್ಸ್. 2019ರ ನವೆಂಬರ್ ನಲ್ಲಿ ಆರ್ ಬಿಐ ಈ ಹೆಜ್ಜೆಗಳನ್ನು ಇಟ್ಟಿತು. ಡಿಎಚ್ ಎಫ್ ಎಲ್ ನ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ, ಮೂವರು ಸದಸ್ಯರ ಸಲಹಾ ಸಮಿತಿ ರಚಿಸಿ, ಆರ್ ಬಿಐನಿಂದ ನೇಮಿಸಿದ ಕಂಪೆನಿಯ ಆಡಳಿತಗಾರರಿಗೆ ಸಲಹೆ ನೀಡುವಂತೆ ತಿಳಿಸಿತು.

English summary

DHFL Diverted 12,773 Crore To 79 Companies Through Fictitious Retail Customers

ED has found that between 2011 and 2016, DHFL in its books has recorded loans of about Rs 12,773 crore allegedly to about 1 lakh fictitious retail customers.
Story first published: Wednesday, January 29, 2020, 18:35 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more