2024-25ನೇ ಸಾಲಿನ ಹಣಕಾಸು ವರ್ಷ ಮುಗಿಯುವ ಹಂತದಲ್ಲಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಎಷ್ಟರ ಮಟ್ಟಿಗೆ ತೆರಿಗೆ ವಸೂಲಿ ಮಾಡಿದೆ ಎಂಬುದರ ಮಾಹಿತಿ ಹೊರ ಬಿದ್ದಿದೆ. ಅದರೆ ಈ ಹಣಕಾಸು ವರ್ಷದಲ್ಲಿ, ತೆರಿಗೆ ವಸೂಲಿ ಮಾಡಲು ಕರ್ನಾಟಕ ಸರ್ಕಾರ ಪಾಡು ಪಟ್ಟಿದೆ ಎನ್ನಲಾಗುತ್ತಿದೆ. ಅಂದರೆ ತನ್ನ ಆದಾಯ ಸಂಗ್ರಹ ಗುರಿಗಳನ್ನು ಪೂರೈಸುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಈ ಬಾರಿ ಕಲ್ಯಾಣ ಯೋಜನೆಗಳ ಕಾರ್ಯಗತಗೋಲನದ ಒತ್ತಡ ಹೆಚ್ಚಿರುವುದರಿಂದ, ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹ ನಡೆಯದಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಅನೇಕ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಸರ್ಕಾರವು ನಿರೀಕ್ಷಿಸಿದ್ದಷ್ಟು ತೆರಿಗೆ ಸಂಗ್ರಹಿಸದಿದ್ದರೆ, ಭವಿಷ್ಯದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಂಭವವಿದೆ.

ಅಂದಹಾಗೆ ಈ ವರ್ಷದ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ತನ್ನ ಸ್ವಂತ ಆದಾಯ ತೆರಿಗೆ ಸಂಗ್ರಹದ ಗುರಿಯನ್ನು ತುಂಬಾ ಮಹತ್ವಾಕಾಂಕ್ಷೆಯಿಂದ ನಿಗದಿಪಡಿಸಿತ್ತು. 2023-24ನೇ ಸಾಲಿನ ಬಜೆಟ್‌ನಲ್ಲಿ 2024-25ನೇ ಸಾಲಿಗೆ ₹1,89,893 ಕೋಟಿ ತೆರಿಗೆ ಸಂಗ್ರಹ ಗುರಿ ಇಡಲಾಗಿತ್ತು. . ಈ ಪ್ರಮಾಣವನ್ನು ತಿಂಗಳ ಗುರಿಯಾಗಿ ಒಡೆದರೆ, ಸರ್ಕಾರವು ಪ್ರತಿ ತಿಂಗಳು ಸರಾಸರಿ ₹15,824 ಕೋಟಿ ಸಂಗ್ರಹಿಸಬೇಕಾಗಿತ್ತು. ಆದರೆ, ಫೆಬ್ರವರಿ 2025ರ ವರೆಗೆ ಕೇವಲ ₹1,57,108 ಕೋಟಿ ತೆರಿಗೆ ಸಂಗ್ರಹವಾಗಿದೆ. ಇದರ ಅರ್ಥ, ನಿಗದಿತ ಗುರಿಯ ವಿರುದ್ಧ ₹16,956 ಕೋಟಿ ಕೊರತೆ ಉಂಟಾಗಿದೆ ಎಂಬುದನ್ನು ತಿಳಿಯಬಹುದಾಗಿದೆ.
ಅಂದರೆ ನಿಗದಿತ ಗುರಿಯ ವಿರುದ್ಧವಾಗಿ ವಸೂಲಿಯಾದ ತೆರಿಗೆ ಕೊರತೆ ಎದುರಿಸಿದೆ. ಇದು ಪ್ರತಿ ವರ್ಷ ಪ್ರತಿ ತಿಂಗಳು ₹1,500 ಕೋಟಿ ತೆರಿಗೆ ಕೊರತೆ ಉಂಟಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಅಂದಹಾಗೆ ಇದನ್ನು ಹಿಂದಿನ ವರ್ಷಗಳ ಹಿನ್ನಲೆಯಲ್ಲಿ ನೋಡಿದರೆ ಹೊಸ ವಿಷಯವೇನಲ್ಲ. ಆದರೆ 2023-24ನೇ ಸಾಲಿನ ಬಜೆಟ್ ಗುರಿಯಲ್ಲೂ ಇದೇ ರೀತಿಯ ತೆರಿಗೆ ಸಂಗ್ರಹದಲ್ಲಿ ಕೊರತೆಯುಂಟಾಗಿತ್ತು..ಇದು ಮರುಕಳಿಸಿರುವುದು ಭೀತಿಯ ಸಂಗತಿಯಾಗಿದೆ. ಹೀಗಾಗಿ ನಿರೀಕ್ಷೆಗಳಿಗೆ ತಕ್ಕಂತೆ ನಿಜವಾದ ಸಂಗ್ರಹ ನಡೆಯದೆ ಇರುವುದರಿಂದ, ವರ್ಷಾಂತ್ಯದಲ್ಲಿ ಬಜೆಟ್ ಕೊರತೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನು ಕಾರಣ ಏನೆಂದು ತಿಳಿಯಲು ಹೋದರೆ, ಕೆಲವು ತೆರಿಗೆ ವಿಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದ ಸಂಗ್ರಹವಾಗಿಲ್ಲ.. ಹಾಗೆಯೇ ವಾಣಿಜ್ಯ ತೆರಿಗೆ ವಿಭಾಗದಲ್ಲಿ ₹1,10,000 ಕೋಟಿ ಸಂಗ್ರಹಿಸುವ ಗುರಿ ಇತ್ತು. ಅಲ್ಲಿಯೂ ಕೂಡ ₹92,934 ಕೋಟಿ ಮಾತ್ರ ಸಂಗ್ರಹವಾಗಿದೆ. ಇದರಿಂದ ₹7,903 ಕೋಟಿ ಕೊರತೆ ಉಂಟಾಗಿದೆ. ಅದೇ ರೀತಿ, ಅಬಕಾರಿ ತೆರಿಗೆ (Excise Duty) ವಿಭಾಗದಲ್ಲಿ ₹38,525 ಕೋಟಿ ಸಂಗ್ರಹ ಗುರಿ ಇಡಲಾಗಿತ್ತು, ಆದರೆ ₹32,381 ಕೋಟಿ ಮಾತ್ರ ಸಂಗ್ರಹವಾಗಿದ್ದು, ₹2,933 ಕೋಟಿ ಕೊರತೆ ಉಂಟಾಗಿದೆ.
ಇನ್ನು ತೆರಿಗೆ ಸಂಗ್ರಹದಲ್ಲಿ ನಿರೀಕ್ಷೆಗೂ ನಿಜವಾದ ಸಂಗ್ರಹಕ್ಕೂ ಹೆಚ್ಚಿನ ವ್ಯತ್ಯಾಸ ಇರುವುದರಿಂದ, ಸರ್ಕಾರವು ಕೆಲವು ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಣಿಜ್ಯ ತೆರಿಗೆ ಕಚೇರಿಗಳು ವಾರಾಂತ್ಯದಲ್ಲೂ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ, ಮಾರ್ಚ್ 30 ಮತ್ತು 31ರಂದು ತೆರಿಗೆ ಕಚೇರಿಗಳು ತೆರೆದಿರಲಿವೆ. ಇದರಿಂದಾಗಿ, ಕೊನೆಯ ಕ್ಷಣದ ತೆರಿಗೆ ಪಾವತಿಗಳನ್ನು ಉತ್ತೇಜಿಸಲು ಸಾಧ್ಯವಾಗಬಹುದು. ಇಂಧನ, ಮದ್ಯ ಮತ್ತು ರಿಯಲ್ ಎಸ್ಟೇಟ್ ವಲಯಗಳಲ್ಲಿ ಹೊಸ ತೆರಿಗೆ ವೃದ್ಧಿ ಮಾಡುವ ಯೋಜನೆಗಳು ಚಿಂತನೆಯಲ್ಲಿವೆ. ಮೂರು ತಿಂಗಳ ಅವಧಿಯಲ್ಲಿ ತೆರಿಗೆ ಸಂಗ್ರಹದ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ಹೊಸ ನೀತಿಯ ಅನುಷ್ಠಾನ ಮಾಡುವ ಸಾಧ್ಯತೆಯೂ ಇದೆ.
ಮಾರ್ಚ್ ತಿಂಗಳಲ್ಲಿ ರಾಜ್ಯ ಸರ್ಕಾರವು ₹32,785 ಕೋಟಿ ತೆರಿಗೆ ಸಂಗ್ರಹಿಸಬೇಕು ಎಂಬ ಗುರಿ ಹೊಂದಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಈ ಗುರಿಯನ್ನು ಸಾಧಿಸುವುದು ತುಂಬಾ ಕಠಿಣವಾಗಿದೆ. ಹಿಂದಿನ ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಸರಾಸರಿ ₹14,300 ಕೋಟಿ ಮಾತ್ರ ಸಂಗ್ರಹವಾಗಿದ್ದುದರಿಂದ, ಈ ಬಾರಿ ₹32,785 ಕೋಟಿ ತೆರಿಗೆ ಸಂಗ್ರಹಿಸುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಈ ಗುರಿಯನ್ನು ತಲುಪಲು, ಸರ್ಕಾರ ಹೊಸ ಆದಾಯದ ಮೂಲಗಳನ್ನು ಹುಡುಕುವುದು ಅಗತ್ಯವಾಗಿದೆ.
More From GoodReturns

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್‌ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications