ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಡೀಸೆಲ್ ಮಾರಾಟದಲ್ಲಿ ಹೆಚ್ಚಳ

ಈ ವರ್ಷದ ಫೆಬ್ರವರಿಯಿಂದ ಈಚೆಗೆ ಇದೇ ಮೊದಲ ಬಾರಿಗೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಡೀಸೆಲ್ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ತೈಲವಾದ ಡೀಸೆಲ್ ಗೆ ಹಬ್ಬದ ಸೀಸನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಭಾರತದ ಟಾಪ್ ಮೂರು ತೈಲ ರೀಟೇಲರ್ ಗಳ ಬಳಿ ಕಳೆದ ವರ್ಷದ ಅಕ್ಟೋಬರ್ ಗೆ ಹೋಲಿಸಿದಲ್ಲಿ 6.1% ಮಾರಾಟ ಹೆಚ್ಚಳವಾಗಿ, ಅಕ್ಟೋಬರ್ ನಲ್ಲಿ 5.76 ಮಿಲಿಯನ್ ಟನ್ ಮುಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ತೈಲ ಸಂಸ್ಕರಣಾ ಘಟಕಗಳ ಪಾಲಿಗೆ ಡೀಸೆಲ್ ಬೇಡಿಕೆ ಕುದುರಿಕೊಳ್ಳುವುದು ಬಹಳ ಮುಖ್ಯವಾದ ಸಂಗತಿ. ಈ ವರ್ಷದ ಮಾರ್ಚ್ ನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೇರಿದ್ದ ನಿರ್ಬಂಧದಿಂದಾಗಿ ತೈಲ ಬೇಡಿಕೆ ಕುಸಿದುಹೋಗಿತ್ತು. ಭಾರತದ ಅತಿ ದೊಡ್ಡ ತೈಲ ಸಂಸ್ಕರಣಾ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಒಟ್ಟು ಸಾಮರ್ಥ್ಯದ 93ರಷ್ಟು ಉತ್ಪಾದಿಸುತ್ತಿದೆ. ಶೀಘ್ರವೇ ಶೇ 100ರಷ್ಟು ಉತ್ಪಾದನೆ ಸಾಧಿಸುತ್ತದೆ ಎಂದು ಅ. 30ರಂದು ಕಂಪೆನಿ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಹೇಳಿದ್ದಾರೆ.

ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಡೀಸೆಲ್ ಮಾರಾಟದಲ್ಲಿ ಹೆಚ್ಚಳ

ದಸರಾ ಹಾಗೂ ದೀಪಾವಳಿ ದೇಶದ ಅತಿ ಮುಖ್ಯವಾದ ಎರಡು ಹಬ್ಬ. ಅಕ್ಟೋಬರ್ ಮಧ್ಯ ಭಾಗದಿಂದ ಶುರುವಾಗಿ ಒಂದು ತಿಂಗಳಿಗೂ ಹೆಚ್ಚು ಸಮಯ ಇದು ಮುಂದುವರಿಯುತ್ತದೆ. ಈ ಸಮಯದಲ್ಲಿ ಟ್ರಕ್ ಗಳ ಮೂಲಕವಾಗಿ ಬಟ್ಟೆಯಿಂದ ರೆಫ್ರಿಜರೇಟರ್ ತನಕ ಸಾಗಿಸಲಾಗುತ್ತದೆ. ಆದ್ದರಿಂದ ಡೀಸೆಲ್ ಬೇಡಿಕೆ ಗರಿಷ್ಠ ಮಟ್ಟದಲ್ಲಿ ಇರುತ್ತದೆ. ಇದರ ಜತೆಗೆ ಕೊಯ್ಲಿನ ಚಟುವಟಿಕೆಗಳಿಂದಾಗಿ ಕೈಗಾರಿಕೆಗೆ ಬಳಸುವ ತೈಲದ ಬೇಡಿಕೆ ಕೂಡ ಹೆಚ್ಚು.

ಅಂದಹಾಗೆ, ಮೂಲಗಳು ತಿಳಿಸುವ ಪ್ರಕಾರ ಇತರ ತೈಲ ಉತ್ಪನ್ನಗಳಿಗೂ ಬೇಡಿಕೆ ಹೆಚ್ಚಾಗಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿ ಭಾರತದ ಒಟ್ಟು ತೈಲ ಮಾರಾಟದ ಶೇಕಡಾ ತೊಬತ್ತರಷ್ಟಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+