GoAir ವಿಮಾನಯಾನ ಸಂಸ್ಥೆಯಿಂದ ವಿದ್ಯಾರ್ಥಿಗಳಿಗಾಗಿ ರಿಯಾಯಿತಿ ದರವನ್ನು ಘೋಷಣೆ ಮಾಡಲಾಗಿದೆ. ಈ ಆಫರ್ ನಲ್ಲಿ ಮೂಲ ದರದ ಮೇಲೆ 5% ರಿಯಾಯಿತಿ ಹಾಗೂ 25 ಕೇಜಿ ಹೆಚ್ಚುವರಿ ಬ್ಯಾಗೇಜ್ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಲಾಗುತ್ತದೆ. ಈ ಅಫರ್ ಮುಖ್ಯಾಂಶಗಳೇನು ಎಂಬ ವಿವರ ಹೀಗಿದೆ.
* ಗೋಏರ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಬುಕ್ಕಿಂಗ್ ಗೆ ಈ ವಿದ್ಯಾರ್ಥಿ ದರ ದೊರೆಯುತ್ತದೆ. ವೆಬ್ ಸೈಟ್ ನಲ್ಲಿ ಸ್ಟೂಡೆಂಟ್ ಫೇರ್ ಎಂಬುದನ್ನು ಆರಿಸಿಕೊಳ್ಳಬೇಕು.
* 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ನೋಂದಾಯಿತ ಶಾಲೆಗಳು/ವಿಶ್ವವಿದ್ಯಾಲಯಕ್ಕೆ ಸೇರಿದವರಾಗಿದ್ದು, ಐ.ಡಿ. ಕಾರ್ಡ್ (ಗುರುತಿನ ಚೀಟಿ) ಹೊಂದಿರಬೇಕು.
* ಗೋಏರ್ 'ಸ್ಮಾರ್ಟ್ ಸ್ಟೂಡೆಂಟ್ ಫೇರ್' ಯೋಜನೆ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಅವರ ಕುಟುಂಬ ಸದಸ್ಯರಿಗೆ ಅಲ್ಲ.

* ಗೋಏರ್ ನ ಎಲ್ಲ ದೇಶೀಯ ವಿಮಾನ ಯಾನಕ್ಕೆ ವಿದ್ಯಾರ್ಥಿ ರಿಯಾಯಿತಿ ಅನ್ವಯ ಆಗುತ್ತದೆ.
* ವಿದ್ಯಾರ್ಥಿ ರಿಯಾಯಿತಿಯು ಒನ್ ವೇ ಮತ್ತು ರೌಂಡ್ ಟ್ರಿಪ್ ಬುಕ್ಕಿಂಗ್ ಗೆ ಅನ್ವಯಿಸುತ್ತದೆ.
* ವಿದ್ಯಾರ್ಥಿ ರಿಯಾಯಿತಿ ಯೋಜನೆ ಅಡಿಯಲ್ಲಿ ಬುಕ್ ಮಾಡಿದ ಟಿಕೆಟ್ ಬದಲಿಸಬಹುದು ಅಥವಾ ರದ್ದು ಮಾಡಬಹುದು. ರದ್ದು ಮತ್ತು ಬದಲಾವಣೆಯ ಶುಲ್ಕಗಳು ಅನ್ವಯಿಸುತ್ತವೆ.
* ಈ ಯೋಜನೆ ಅಡಿಯಲ್ಲಿ ಬುಕ್ ಆದ ಟಿಕೆಟ್ ಬೇರೆಯವರಿಗೆ ವರ್ಗಾವಣೆ ಆಗಲ್ಲ ಮತ್ತು ಹೆಸರು ಬದಲಾವಣೆಗೆ ಅವಕಾಶ ಇಲ್ಲ.
* ಈ ಯೋಜನೆ ಅಡಿಯಲ್ಲಿ ಸೀಮಿತ ಟಿಕೆಟ್ ಲಭ್ಯ ಇದ್ದು, ಸೀಟುಗಳು ಲಭ್ಯತೆಯ ಆಧಾರದಲ್ಲಿ ದೊರೆಯುತ್ತವೆ.
* ಈ ಯೋಜನೆಯು ಬೇರೆ ಆಫರ್/ರಿಯಾಯಿತಿಗಳು/ಪ್ರಮೋಷನ್ ಗಳ ಜತೆ ಸೇರಿಕೊಳ್ಳುವುದಿಲ್ಲ.
* ರದ್ದು ಮಾಡುವ ಶುಲ್ಕಗಳನ್ನು ಕಳೆದು, ಬುಕ್ಕಿಂಗ್ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.
* ಹೆಚ್ಚುವರಿ ಬ್ಯಾಗೇಜ್ 25 kg (ಸ್ಟ್ಯಾಂಡರ್ಡ್ 15+10) ಅವಕಾಶ ಇದೆ. ವಿದ್ಯಾರ್ಥಿಗಳ ಐಡಿ ಕಾರ್ಡ್ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಫೋಟೋ ಐಡಿ ಇರಬೇಕು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications