ಶ್ರೀಮಂತರಾಗುವ 9 ಮ್ಯಾಜಿಕ್ ಸೂತ್ರವನ್ನು ತಿಳಿಯಿರಿ, ಅದರಂತೆ ನಡೆದುಕೊಳ್ಳಿ..!

ಶ್ರೀಮಂತರರಾಗಬೇಕು, ಹಣ ಸಂಪಾದಿಸಬೇಕು ಎನ್ನುವ ಆಸೆ ಸಹಜ. ಆದರೆ ಈ ಆಸೆ ಈಡೇರಿಸಲು ನಮ್ಮ ಶತ ಪ್ರಯತ್ನವೂ ಇರಬೇಕು. ಯಾಕೆಂದರೆ ಸಂಪತ್ತು ಗಳಿಸುವುದು ಅಷ್ಟು ಸುಲಭವಾದ ಕಾರ್ಯವಲ್ಲ ಎಂಬುದು ಬಹುತೇಕರಿಗೆ ತಿಳಿದಿರುವ ಸಂಗತಿ.

ಸಂಪತ್ತು ಗಳಿಸಲು ಸರಿಯಾದ ಆರ್ಥಿಕ ನೀತಿ ಹಾಗೂ ಸರಿಯಾದ ಶಿಸ್ತಿನಿಂದ ಕೂಡಿದ ಯೋಜನೆಗಳಿದ್ದರೆ ಮಾತ್ರ ಇದು ಕೈಗೂಡಬಹುದು. ಶ್ರೀಮಂತರಾಗಲು ಒಂದಷ್ಟು ೯ ಶಕ್ತಿಯುತ ಸೂತ್ರ, ಸರಳ ನಿಯಮಗಳನ್ನು ಅಳವಡಿಸಿಕೊಂಡರೆ ಸಂಪತ್ತು ಸುಲಭವಾಗಿ ಗಳಿಸಬಹುದು.

ಶ್ರೀಮಂತರಾಗುವ  9 ಮ್ಯಾಜಿಕ್ ಸೂತ್ರವನ್ನು ತಿಳಿಯಿರಿ!

1. ನಿಮಗೆ ನೀವೇ ಪಾವತಿಸಿಕೊಳ್ಳಿ

ಸಂಪತ್ತು ಪಡೆಯುವ ಆರಂಭದಲ್ಲಿ ನಾವು ಕೇವಲ ಪಡೆಯುವ ಬಗ್ಗೆಯೇ ಯೋಚಿಸದೆ ಕೂಡಿಡುವ ಬಗ್ಗೆ ಕೂಡ ಯೋಜನೆ ಹಾಕಬೇಕು. ಅಷ್ಟಕ್ಕೂ ನಮಗೆ ನಾವೇ ಪಾವತಿಸಿಕೊಳ್ಳುವುದರಿಂದ ಹಿಡಿದು ಸಂಪತ್ತು ಹೇಗೆ ಪಡೆಯಬಹುದು ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಅದೇ ಹೂಡಿಕೆ ಹಾಗೂ ಉಳಿತಾಯ. ಇದರರ್ಥ ಇತರ ವೆಚ್ಚಗಳಿಗೆ ಖರ್ಚು ಮಾಡುವ ಮೊದಲು ಉಳಿತಾಯ ಮತ್ತು ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವುದು. ತಿಂಗಳ ಕೊನೆಯಲ್ಲಿ ಏನು ಉಳಿದಿದೆ ಎಂದು ನಿರೀಕ್ಷಿಸುವ ಬದಲು, ನಿಮ್ಮ ಆದಾಯದ ಒಂದು ಭಾಗವನ್ನು ನೀವು ಪಡೆದುಕೊಂಡ ಕೂಡಲೇ ಉಳಿತಾಯ ಮತ್ತು ಹೂಡಿಕೆಗಾಗಿ ಮೀಸಲಿಡಬೇಕು. ನಿಮ್ಮ ಉಳಿತಾಯವನ್ನು ತಿಂಗಳು ತಿಂಗಳು ಸ್ವಯಂಚಾಲಿತವಾಗಿ ಕಡಿತಗೊಳಿಸುವುದರಿಂದ ಹೂಡಿಕೆಯ ಅಭ್ಯಾಸವನ್ನು ಸರಿಯಾಗಿ ನಿರ್ವಹಿಸಲು ಸುಲಭ ಸಾಧ್ಯವಾಗುತ್ತದೆ.

2. ಬಜೆಟ್‌ ಮಾಡಿ, ಅದಕ್ಕೆ ಪ್ರಾಮುಖ್ಯತೆ ನೀಡಿ

ಸರಳವಾದ ಭಾಷೆಯಲ್ಲಿ ಹೇಳುವುದಾದರೆ ಸರಿಯಾದ ಹಣಕಾಸಿನ ಖರ್ಚು, ಉತ್ಪಾದನೆ ಹಾಗೂ ನಿರ್ವಹಣೆಯನ್ನೇ ಒಟ್ಟಾರೆಯಾಗಿ ಬಜೆಟ್‌ ಎಂದು ಕರೆಯಬಹುದು. ಬಜೆಟ್ ನಿಮ್ಮ ಆರ್ಥಿಕ ಯಶಸ್ಸಿನ ಮಾರ್ಗಸೂಚಿ ಎಂದರೆ ತಪ್ಪಾಗಲಾರದು. ನಿಮ್ಮ ತಿಂಗಳ ಆದಾಯ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಹೆಚ್ಚಿನ ಗಮನ ನೀಡಿ ಟ್ರ್ಯಾಕ್‌ ಮಾಡಿದರೆ ಈ ಮೂಲಕ ನಿಮ್ಮ ಪ್ರತೀ ತಿಂಗಳ ಹಣ ಯಾವ ಕಡೆಗೆ ಹೋಗುತ್ತದೆ ಎಂದು ಸರಿಯಾದ ಮಾಹಿತಿ ಲಭಿಸುತ್ತದೆ. ಅನಾವಶ್ಯಕ ಖರ್ಚುಗಳಿಗೆ ಬ್ರೇಕ್‌ ಹಾಕಿ ಅಗತ್ಯವಿರುವ ಕಡೆಗಳಲ್ಲಿ ಹಣ ತೊಡಗಿಸಲು ಇದರಿಂದ ಸಾಧ್ಯವಾಗುತ್ತದೆ. ಅಲ್ಲದೆ ಇದರಿಂದ ಉಳಿತಾಯ ಅಥವಾ ಹೂಡಿಕೆಗಳಿಗೆ ಹೆಚ್ಚಿನ ಹಣವನ್ನು ಮೀಸಲಿಡಲು ಇದು ನಿಮಗೆ ಸಹಾಯ ಮಾಡುತ್ತದೆ. ಹಾಗಾಗಿ ಸೂಕ್ತ ರೀತಿಯ ಬಜೆಟ್‌ ನಿರ್ವಹಣೆಯಿಂದ ಅತಿಯಾದ ಖರ್ಚಿಗೆ ಕಡಿವಾಣ ಹಾಕುತ್ತದೆ ಮತ್ತು ಹಾಕಿಕೊಂಡಿರುವ ಹಣಕಾಸಿನ ಗುರಿಗಳ ಕಡೆಗೆ ನಮ್ಮನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ಶ್ರೀಮಂತರಾಗುವ  9 ಮ್ಯಾಜಿಕ್ ಸೂತ್ರವನ್ನು ತಿಳಿಯಿರಿ!

3. ಆರಂಭಿಕ ಮತ್ತು ನಿಯಮಿತವಾಗಿ ಹೂಡಿಕೆ ಮಾಡಿ

ಸೂಕ್ತ ರೀತಿಯಲ್ಲಿ ತಜ್ಞರ ಸಲಹೆ ಪಡೆದು ಹೂಡಿಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ಹಣವು ಹೆಚ್ಚಾಗಲು ನೆರವಾಗುತ್ತದೆ. ಕಾಂಪೌಂಡ್ ಬಡ್ಡಿ ದರವು ನಿಮ್ಮ ಹೂಡಿಕೆಗಳು ಅಸಲು ಮೊತ್ತ ಮತ್ತು ಸಂಚಿತ ಬಡ್ಡಿ ಎರಡರಲ್ಲೂ ಆದಾಯವನ್ನು ಗಳಿಸಲು ಸಹಕಾರಿಯಾಗಿದೆ. ಆರಂಭದಲ್ಲಿ ಅಲ್ಪ ಪ್ರಮಾಣದ ಹೂಡಿಕೆ ಆರಂಭಿಸುವ ಮೂಲಕ, ಮುಂದಿನ ದಿನಗಳಲ್ಲಿ ನಿಯಮಿತ ಹೂಡಿಕೆಗಳಿಂದ ಕಾಲಾನಂತರದಲ್ಲಿ ನಿಮ್ಮ ಸಂಪತ್ತನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಸ್ಟಾಕ್‌ಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ಇತರ ಹೂಡಿಕೆ ಆಯ್ಕೆಗಳೊಂದಿಗೆ ನಿಮ್ಮ ಹಣಕಾಸಿನ ವಿಧಾನಗಳನ್ನು ಮತ್ತಷ್ಟು ವೈವಿಧ್ಯಗೊಳಿಸಬಹುದು.

4. ಕೆಟ್ಟ ರೀತಿಯ ಸಾಲದಿಂದ ತಪ್ಪಿಸಿಕೊಳ್ಳಿ

ಸಾಲ ಪಡೆಯುವುದು ಕೆಟ್ಟದಲ್ಲದಿದ್ದರೂ ಸರಿಯಾದ ರೀತಿಯಲ್ಲಿ ಅದನ್ನು ಹೂಡಿಕೆ ಅಥವಾ ನಿರ್ವಹಣೆ ಮಾಡದಿದ್ದರೆ ಅದರಿಂದ ದೊಡ್ಡ ಆಪತ್ತು ಎದುರಾಗುವ ಸಾಧ್ಯತೆ ಇರುತ್ತದೆ. ಅದರಂತೆ ಎಲ್ಲಾ ಸಾಲಗಳು ಕೆಟ್ಟದ್ದಲ್ಲ, ಆದರೆ ಕ್ರೆಡಿಟ್ ಕಾರ್ಡ್ ಸಾಲದಂತಹ ಹೆಚ್ಚಿನ-ಬಡ್ಡಿದರದ ಗ್ರಾಹಕ ಸಾಲವು ನಿಮ್ಮ ಆದಾಯಕ್ಕೆ ಹೆಚ್ಚಿನ ಹೊರೆ ತರಬಲ್ಲದು. ಹಾಗಾಗಿ ಯಾವುದೇ ಹೆಚ್ಚಿನ-ಬಡ್ಡಿ ಸಾಲಗಳನ್ನು ಸಾಧ್ಯವಾದಷ್ಟು ಬೇಗ ಪಾವತಿಸಲು ಗಮನಹರಿಸಿ ಮತ್ತು ಅನಗತ್ಯ ಸಾಲಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕಿದೆ. ಅಷ್ಟಕ್ಕೂ ನೀವು ಸಾಲ ಪಡೆಯಬೇಕಾದರೆ, ಹೋಮ್ ಲೋನ್ ಅಥವಾ ವಿದ್ಯಾರ್ಥಿ ಸಾಲದಂತಹ ಸಂಪತ್ತು-ನಿರ್ಮಾಣಕ್ಕೆ ಕೊಡುಗೆ ನೀಡುವ ಸಾಲಗಳಿಗೆ ಆದ್ಯತೆ ನೀಡಿಬೇಕು.

5. ಹಾಸಿಗೆ ಇದ್ದಷ್ಟೇ ಕಾಲು ಚಾಚಿ!

ಹಿಂದಿನ ಕಾಲದಲ್ಲಿ ಹಿರಿಯರು ಹೇಳಿದ ಮಾತುಗಳು ಇಂದಿಗೂ ಎಷ್ಟು ಪ್ರಸ್ತುತ ಎಂಬದಕ್ಕೆ ಹಲವು ನಿದರ್ಶನಗಳು ನಮಗೆ ಲಭಿಸುತ್ತದೆ. ಅದರಲ್ಲಿ ಈ ಗಾದೆ ಮಾತು ಕೂಡ ಒಂದಾಗಿದೆ. ಬೇಕಾಬಿಟ್ಟಿ ಖರ್ಚು ಮಾಡಿದರೆ ಮುಂದೆ ಯಾವ ಹಣಕಾಸಿನ ಅಪಾಯ ತರುತ್ತದೆ ಎಂಬುದರ ಬಗ್ಗೆ ಈ ಗಾದೆ ಮಾತು ಹೇಳುತ್ತದೆ. ಹೆಚ್ಚು ಉಳಿಸಲು ಮತ್ತು ಹಣಕಾಸಿನ ಒತ್ತಡದ ಅಪಾಯ ಕಡಿಮೆ ಮಾಡಲು ನಿಮ್ಮ ಆದಾಯಕ್ಕಿಂತ ಕಡಿಮೆ ಜೀವನ ನಿರ್ವಹಣೆ ಅತ್ಯಗತ್ಯ. ಐಷಾರಾಮಿ ಖರೀದಿಗಳನ್ನು ಬಿಟ್ಟು ಅಥವಾ ಅನಿವಾರ್ಯವಲ್ಲದ ವೆಚ್ಚಗಳನ್ನು ಕಡಿತಗೊಳಿಸುವುದು ಮುಖ್ಯ. ಗಳಿಕೆಯನ್ನು ಮೀರಿ ಖರ್ಚು ಮಾಡುವ ಪ್ರಲೋಭನೆ ತಪ್ಪಿಸಿ. ಅಲ್ಪಾವಧಿಯ ತೃಪ್ತಿಗಿಂತ ದೀರ್ಘಾವಧಿಯ ಸಂಪತ್ತಿಗೆ ಆದ್ಯತೆ ನೀಡುವ ಜೀವನಶೈಲಿಯನ್ನು ನಿರ್ಮಿಸುವತ್ತ ಗಮನಹರಿಸಿ.

6. ಆಪತ್ಕಾಲಿಕವಾದ (ತುರ್ತು) ನಿಧಿಯನ್ನು ನಿರ್ಮಿಸಿ

ಕಷ್ಟಗಳು ಯಾವಾಗ ಬಿರುಗಾಳಿಯಂತೆ ಎದುರಾಗುತ್ತದೆ. ಕಷ್ಟಗಳ ಯಾವ ರೂಪದಲ್ಲಿ ಬರಬಹುದು ಎಂದು ಊಹಿಸುವುದು ಕೂಡ ಕಷ್ಟ. ಹಾಗಾಗಿ ಈ ರೀತಿಯ ಆರ್ಥಿಕ ಸಂಕಷ್ಟಗಳು ಎದುರಾಗುವ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಮುಂಚೆಯೇ ನಾವು ತುರ್ತು ನಿಧಿಯನ್ನು ಸ್ಥಾಪಿಸಿಕೊಂಡಿದ್ದರೆ ಕಷ್ಟದ ಕಾಲದಲ್ಲಿ ನೆರವು ನೀಡುತ್ತದೆ. ತುರ್ತು ನಿಧಿಯು ಹಣಕಾಸಿನ ಸುರಕ್ಷತಾ ನಿವ್ವಳವಾಗಿದ್ದು ಅದು ವೈದ್ಯಕೀಯ ಖರ್ಚುಗಳು, ಉದ್ಯೋಗ ನಷ್ಟ ಅಥವಾ ವಾಹನ ರಿಪೇರಿಗಳಂತಹ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಕಷ್ಟದ ಸಮಯದಲ್ಲಿ ನೀವು ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳ ಅವಲಂಬನೆ ತಪ್ಪಿಸಬೇಕು. ಈ ವಿಚಾರದಲ್ಲಿ ಕಷ್ಟದ ಸಮಯದಲ್ಲಿ ಉಪಯೋಗಕ್ಕೆ ಬರುವ ಹೂಡಿಕೆಯನ್ನು ಮಾಡಿಟ್ಟುಕೊಳ್ಳಬೇಕಿದೆ.

7. ತೆರಿಗೆ ದಕ್ಷತೆಯನ್ನು ಹೆಚ್ಚಿಸಿ

ತೆರಿಗೆ ಉಳಿಸುವ ತಂತ್ರಗಳ ಬಗ್ಗೆ ತಿಳಿದುಕೊಳ್ಳುವುದು ಕಾಲಾನಂತರದಲ್ಲಿ ನಿಮ್ಮ ಸಂಪತ್ತನ್ನು ಗಣನೀಯವಾಗಿ ಹೆಚ್ಚಿಸಲು ನೆರವು ನೀಡುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಮತ್ತು ತೆರಿಗೆ ಉಳಿಸುವ ಮ್ಯೂಚುಯಲ್ ಫಂಡ್‌ಗಳಂಥ ತೆರಿಗೆ ಕಡಿತಗಳು, ವಿನಾಯಿತಿಗಳು ಮತ್ತು ಹೂಡಿಕೆ ಸಾಧನಗಳ ಲಾಭವನ್ನು ಪಡೆದುಕೊಳ್ಳಬೇಕಿದೆ. ತೆರಿಗೆ ಹೊಣೆಯನ್ನು ಸರಿಯಾಗಿ ನಿರ್ವಹಿಸಿದರೆ ಹೆಚ್ಚು ಉಳಿಸಲು ಮತ್ತು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.

8. ಚೌಕಾಸಿ ಮಾಡಲು ಕಲಿಯಿರಿ!

ಸಂಬಳ, ಬೀದಿ ಬದಿ ವ್ಯಾಪಾರ ಯಾವುದೇ ಉತ್ಪನ್ನಗಳ ಕೊಳ್ಳುವ ವಿಚಾರದಲ್ಲಿ ನಾವು ಚೌಕಾಸಿ ಮಾಡುವ ಮರೆಯಬಾರದು. ಇದರಿಂದ ಹೆಚ್ಚಿನ ಹಣವನ್ನು ನಾವು ಉಳಿಸಲು ಸಹಕಾರಿಯಾಗಿದೆ. ಈ ರೀತಿ ಪ್ರತಿಯೊಂದರಲ್ಲೂ ಉಳಿತಾಯ ಮಾಡುವುದರಿಂದ ಮುಂದೊಂದು ದಿನ ಅದು ಬಹುದೊಡ್ಡ ರೀತಿಯಲ್ಲಿ ನೆರವಾಗುವ ಎಲ್ಲಾ ಸಾಧ್ಯತೆಗಳಿವೆ.

9. ನಿರಂತರ ಜ್ಞಾನ ಸಂಪಾದಿಸಿಕೊಳ್ಳಿ

ಹಣಕಾಸಿನ ಸಂಗತಿಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಆದ್ದರಿಂದ ಮಾಹಿತಿ ಪಡೆಯುವುದು ಮುಖ್ಯವಾಗಿದೆ. ವೈಯಕ್ತಿಕ ಹಣಕಾಸು, ಹೂಡಿಕೆಗಳು ಮತ್ತು ಮಾರುಕಟ್ಟೆ ಪ್ರವೃತ್ತಿಗಳ ಬಗ್ಗೆ ಕಲಿಯುವುದನ್ನು ಎಂದಿಗೂ ಬಿಡದಿರಿ. ಹಣಕಾಸು ಸಾಕ್ಷರತಾ ಕಾರ್ಯಾಗಾರಗಳಿಗೆ ಹಾಜರಾಗಿ, ಪುಸ್ತಕಗಳನ್ನು ಓದಿ ಮತ್ತು ಪರಿಣಿತರನ್ನು ಅನುಸರಿಸಿ ನವೀಕರಿಸಬೇಕಿದೆ. ಇದರಿಂದ ನಿಮ್ಮ ಸಂಪತ್ತಿನ ವಿಚಾರದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ನಮಗೆ ಸಹಕಾರಿಯಾಗುತ್ತದೆ.

ಶ್ರೀಮಂತರಾಗುವುದು ಅಷ್ಟು ಸುಲಭದ ಮಾತಲ್ಲ. ನಿರಂತರ ಶ್ರಮ ಹಾಗೂ ಹಣಕಾಸಿನ ಸೂಕ್ತ ನಿರ್ವಹಣೆಯಿಂದ ಇದು ಸಾಧ್ಯವಾಗುತ್ತದೆ. ಹಾಗಾಗಿ ಎಂದಿಗೂ ಈ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಕೂಡ ಅತೀ ಮುಖ್ಯವಾಗಿದೆ. ಈ ಒಂಬತ್ತು ಸುವರ್ಣ ನಿಯಮ ಅಳವಡಿಸಿಕೊಳ್ಳುವುದರಿಂದ ನಾವು ಸದೃಢವಾದ ಆರ್ಥಿಕ ಅಡಿಪಾಯ ನಿರ್ಮಾಣ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+