For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಹಾಟ್ ಸ್ಟಾರ್ ಉಚಿತ ಆಫರ್

|

ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಈಗ 12 ತಿಂಗಳಿಗೆ 399 ರುಪಾಯಿ ಮೌಲ್ಯದ ಡಿಸ್ನಿ+ಹಾಟ್ ಸ್ಟಾರ್ ವಿಐಪಿ ಚಂದಾ (ಸಬ್ ಸ್ಕ್ರಿಪ್ಷನ್) ಉಚಿತವಾಗಿ ದೊರೆಯಲಿದೆ. ಈ ಬಗ್ಗೆ ಶನಿವಾರ ಘೋಷಣೆ ಮಾಡಿದೆ. ಜಿಯೋ ಬಳಕೆದಾರರು ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

 

* ಜಿಯೋ ಬಳಕೆದಾರರು 401 ರುಪಾಯಿ ತಿಂಗಳ ಪ್ಲಾನ್ ರೀಚಾರ್ಜ್ ಮಾಡಿಸಿದರೆ ಈ ಆಫರ್ ದೊರೆಯುತ್ತದೆ. ಈ ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿಗೆ 90 GB ಡೇಟಾ, ಅನಿಯಮಿತವಾದ ಕರೆ ಸೌಲಭ್ಯ ಸಿಗುತ್ತದೆ.

ರಿಲಯನ್ಸ್ ಜಿಯೋದಿಂದ 30, 40, 50 GB ಡೇಟಾ ಸಿಗುವ Add on ಪ್ಯಾಕ್ ಡೀಟೇಲ್ಸ್

* ಇನ್ನು ಬಳಕೆದಾರರು 2599 ರುಪಾಯಿಯ ವಾರ್ಷಿಕ ಪ್ಲಾನ್ ತೆಗೆದುಕೊಳ್ಳುವವರಿಗೂ ಡಿಸ್ನಿ+ಹಾಟ್ ಸ್ಟಾರ್ ವಿಐಪಿ ಚಂದಾ (ಸಬ್ ಸ್ಕ್ರಿಪ್ಷನ್) ಉಚಿತವಾಗಿ ದೊರೆಯಲಿದೆ. ಈ ಪ್ಲಾನ್ ನಲ್ಲಿ 740 GB ಡೇಟಾ ಹಾಗೂ 365 ದಿನಗಳ ವ್ಯಾಲಿಡಿಟಿಯಲ್ಲಿ ಅನಿಯಮಿತವಾದ ವಾಯ್ಸ್ ಕಾಲಿಂಗ್ ಸಿಗಲಿದೆ.

ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಹಾಟ್ ಸ್ಟಾರ್ ಉಚಿತ ಆಫರ್

* ಈ ಮೇಲಿನ ಎರಡು ಪ್ಲಾನ್ ಹೊರತು ಪಡಿಸಿ, ಯಾರಿಗೆ ಹೆಚ್ಚಿನ ಡೇಟಾ ಬೇಕಾಗಿರುತ್ತದೋ ಅಂಥವರು ಡೇಟಾ ಆಡ್ ಆನ್ ಕಾಂಬೋ ಆಫರ್ ಆಯ್ಕೆ ಮಾಡಿಕೊಳ್ಳಬಹುದು. 612 ರುಪಾಯಿಯಿಂದ ಆರಂಭವಾಗುತ್ತದೆ (51 ರುಪಾಯಿಗಳ 12 ವೋಚರ್). ಇದರಿಂದ ಡೇಟಾ ಅನುಕೂಲದ ಜತೆಗೆ 399 ರುಪಾಯಿ ಮೌಲ್ಯದ ಡಿಸ್ನಿ+ಹಾಟ್ ಸ್ಟಾರ್ ವಿಐಪಿ ಚಂದಾ (ಸಬ್ ಸ್ಕ್ರಿಪ್ಷನ್) ಉಚಿತವಾಗಿ ದೊರೆಯಲಿದೆ.

English summary

Disney Hotstar Free Subscription Offer For Jio Prepaid Users

Disney+ Hotstar VIP subscription worth of 399 rupees free for Reliance Jio prepaid users. Here is the offer details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X