ಕೆನಡಾದಲ್ಲಿ ಶೀಘ್ರದಲ್ಲೇ ಆರ್ಥಿಕ ಹಿಂಜರಿತವು ಅಪ್ಪಳಿಸಲಿದೆ. ಈ ಸಂದರ್ಭದಲ್ಲೇ ಕೆನಡಾ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧಗಳು ಸವಾಲುಗಳನ್ನು ಎದುರಿಸುತ್ತಿವೆ. ಇದು ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಅಧಿಕವಾಗಿದೆ. ಅದರಲ್ಲಿ ದೊಡ್ಡ ಪ್ರಶ್ನೆಯೆಂದರೆ ಈ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧದಲ್ಲಿ ತೊಡಕುಂಟಾದರೆ ಅಪಾಯ ಇದೆಯೇ? ಎಂಬುವುದಾಗಿದೆ.
ಕೆನಡಾದ ಆರ್ಥಿಕತೆಯು ಎರಡನೇ ತ್ರೈಮಾಸಿಕದಲ್ಲಿ ಶೇಕಡ 0.2 ರಷ್ಟು ವಾರ್ಷಿಕ ದರಲ್ಲಿದೆ. ಜುಲೈನಲ್ಲಿ ಬೆಳವಣಿಗೆಯು ಹೆಚ್ಚಾಗಿ ಸಮಾನಂತರವಾಗಿದೆ. ಇದು ಮುಂಬರುವ ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತದ ಸಂಭವನೀಯತೆಯನ್ನು ತೋರಿಸುತ್ತದೆ.

"2009 ರಿಂದ ಅತ್ಯಂತ ಬಿಗಿಯಾದ ವಿತ್ತೀಯ ನೀತಿಯೊಂದಿಗೆ ಮತ್ತು G7 ದೇಶಗಳಲ್ಲಿ ಅತ್ಯಂತ ನಿರ್ಬಂಧಿತವಾಗಿರುವುದರ ನಾವು ಮುಂದಿನ ಹನ್ನೆರಡು ತಿಂಗಳುಗಳಲ್ಲಿ ಆರ್ಥಿಕ ಹಿಂಜರಿತವನ್ನು ನಿರೀಕ್ಷಿಸುತ್ತೇವೆ. ನಾವು 2023 ರಲ್ಲಿ ಶೇಕಡ 1.0 ರಷ್ಟು ಮತ್ತು 2024 ರಲ್ಲಿ ಶೇಕಡ 0 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತೇವೆ," ಎಂದು ನ್ಯಾಷನಲ್ ಬ್ಯಾಂಕ್ ಆಫ್ ಕೆನಡಾದ ಉಪ ಮುಖ್ಯ ಅರ್ಥಶಾಸ್ತ್ರಜ್ಞ ಮ್ಯಾಥಿಯು ಆರ್ಸೆನಿಯು ಹೇಳಿದರು.
ಆರ್ಥಿಕ ದೃಷ್ಟಿಕೋನದಿಂದ ನಾವು ನೋಡಿದಾಗ ತಗ್ಗಿದ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಹಣದುಬ್ಬರವು ಕೆನಡಾವನ್ನು ಆರ್ಥಿಕ ಹಿಂಜರಿತದ ಅಂಚಿಗೆ ದೂಡುತ್ತದೆ. ಚುನಾವಣೆ ಸಮೀಪಿಸುತ್ತಿರುವಂತೆ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊಗೆ ಇದು ಅತೀ ದೊಡ್ಡ ಸವಾಲಾಗಬಹುದು.
2025 ರಲ್ಲಿ ಮುಂದಿನ ಚುನಾವಣೆಯ ಹೊತ್ತಿಗೆ, ಟ್ರೂಡೊ 10 ವರ್ಷಗಳ ಕಾಲ ಅಧಿಕಾರ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ಕೆನಡಿಯನ್ನರು ಬದಲಾವಣೆಯ ಮನಸ್ಥಿತಿಯಲ್ಲಿ ಇರುತ್ತಾರೆ. ಟ್ರೂಡೊ ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ. 7-1/2 ವರ್ಷಗಳ ಕಾಲ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.
ಆದರೆ ಅವರ ಪ್ರಮುಖ ಪ್ರತಿಸ್ಪರ್ಧಿ, ಕನ್ಸರ್ವೇಟಿವ್ ನಾಯಕ ಪಿಯರೆ ಪೊಯ್ಲಿವ್ರೆ ಹೆಚ್ಚಿನ ಹಣದುಬ್ಬರ ಮತ್ತು ವಸತಿ ಕೊರತೆಯ ನಡುವೆ ಕಳೆದ ವರ್ಷ ತಮ್ಮ ಪಕ್ಷದ ನಾಯಕರಾದಾಗಿನಿಂದ ಆಗಾಗ್ಗೆ ಅಭಿಪ್ರಾಯ ಸಂಗ್ರಹಣೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.ಜೀವನ ವೆಚ್ಚ ಏರಿಕೆ, ಬಡ್ಡಿದರಗಳಲ್ಲಿ ತೀವ್ರ ಏರಿಕೆ, ದೀರ್ಘಕಾಲದ ವಸತಿ ಕೊರತೆಯು ಟ್ರೂಡೊ ವಿರುದ್ಧ ವಿಪಕ್ಷಗಳಿಗೆ ಒಂದು ಸಾಧನವಾಗಿದೆ. "Justin-flation" ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
2023 ರ ಅಂತ್ಯದ ವೇಳೆಗೆ ವ್ಯಾಪಾರ ಒಪ್ಪಂದವನ್ನು ಮಾಡಲಾಗುತ್ತದೆ ಎಂದು ಈ ವರ್ಷದ ಆರಂಭದಲ್ಲಿ ಹೇಳಿದ್ದ ಭಾರತ ಮತ್ತು ಕೆನಡಾ ಈಗ ಒಪ್ಪಂದದ ಕುರಿತು ಮಾತುಕತೆಗಳನ್ನು ಸ್ಥಗಿತಗೊಳಿಸಿವೆ. ಕೆನಡಾ ಕೆಲವು ವಿವರಗಳನ್ನು ನೀಡಿದರೆ ಭಾರತವು "ಕೆಲವು ರಾಜಕೀಯ ಬೆಳವಣಿಗೆಗಳನ್ನು" ಉಲ್ಲೇಖಿಸಿದೆ.
ಭಾರತವು ಕೆನಡಾದ ಹತ್ತನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ವ್ಯಾಪಾರ ಒಪ್ಪಂದದ ಯೋಜನೆಗಳು ಒಂದು ದಶಕದಿಂದ ಮಾತುಕತೆಯಲ್ಲಿಯೇ ಇದೆ. ಆದರೆ ಯಾವುದೇ ರೀತಿಯ ವ್ಯಾಪಾರ ಮಾತುಕತೆಯನ್ನು ನಿಲ್ಲಿಸಿದರೆ ಉಭಯ ದೇಶಗಳ ನಡುವೆ ಆತಂಕ ಹೆಚ್ಚಾಗಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications