ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಸಲಿದೆ ಡೊಮಿನೋಸ್

ಐಟಿಸಿ ಫುಡ್ಸ್ ಸಹಯೋಗದಲ್ಲಿ ಡೊಮಿನೋಸ್ ಪಿಜ್ಜಾದಿಂದ ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸೇವೆಯನ್ನು ಗುರುವಾರ ಆರಂಭಿಸಲಾಗಿದೆ.

ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಡೊಮಿನೋಸ್ ನ ಡೆಲಿವರಿ ಮೂಲಸೌಕರ್ಯ ಬಳಸಿಕೊಂಡು ಜನರ ನಿತ್ಯದ ಅಗತ್ಯಗಳನ್ನು ಪೂರೈಸಲಾಗುವುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಶೀರ್ವಾದ್ ಗೋಧಿ ಹಿಟ್ಟು, ಜತೆಗೆ ಸಂಬಾರ ಪದಾರ್ಥಗಳು ಅಂದರೆ, ಮೆಣಸಿನಕಾಯಿ, ನಿಂಬೆ, ಶುಂಠಿ ಪುಡಿ ಇತ್ಯಾದಿ ಡೊಮಿನೋಸ್ ಆಪ್ ನಲ್ಲಿ ಗುರುವಾರದಿಂದ ದೊರೆಯಲಿವೆ. ಈ ಸೇವೆಯು ಮೊದಲಿಗೆ ಬೆಂಗಳೂರಿನಲ್ಲಿ ದೊರೆಯಲಿದೆ. ಆ ನಂತರ ನೋಯ್ಡಾ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಸಿಗಲಿದೆ.

ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಸಲಿದೆ ಡೊಮಿನೋಸ್

ಈ ಸೇವೆ ಅಗತ್ಯ ಇರುವ ಗ್ರಾಹಕರು ಡೊಮಿನೋಸ್ ಅಪ್ಲಿಕೇಷನ್ ನ ಹೊಸ ವರ್ಷನ್ ಡೌನ್ ಲೋಡ್ ಬಳಕೆ ಮಾಡುತ್ತಿರಬೇಕು. ಡೊಮಿನೋಸ್ ಎಸೆನ್ಷಿಯಲ್ ವಿಭಾಗವನ್ನು ಕ್ಲಿಕ್ ಮಾಡಬೇಕು. ಅಲ್ಲಿ ಕಾಂಬೋ ಪ್ಯಾಕ್ ಆಯ್ಕೆ ಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ಇದ್ದು, ಡಿಜಿಟಲ್ ಪಾವತಿ ಮಾಡಬಹುದು.

ಸೇಫ್ ಡೆಲಿವರಿ ಎಕ್ಸ್ ಪರ್ಟ್ ನ ಸಂಪರ್ಕಕ್ಕೆ ಬಾರದಂತೆ ಗ್ರಾಹಕರು ಈ ಸೇವೆಯನ್ನು ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+