ಬುಲೆಟ್ ಬಿದ್ರೂ ಏನಾಗಲ್ಲಾ, ಬಾಂಬ್ ಬಿದ್ರೂ ಮಿಸುಕಾಡಲ್ಲ! ಇದು ಟ್ರಂಪ್ 'ದಿ ಬೀಸ್ಟ್‌'

ಅಮೆರಿಕಾ ಅಧ್ಯಕ್ಷ ಅಂದಕೂಡಲೇ ಅದರ ಗತ್ತು ಬೇರೆ ರೀತಿಯಲ್ಲೇ ಇರುತ್ತದೆ. ವಿಶ್ವದ ಯಾವೊಬ್ಬ ಪ್ರಧಾನಿಗೂ ಇರದ ಸೆಕ್ಯುರಿಟಿ ಅವರಿಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್ ಫೆಬ್ರವರಿ 24, 25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಅವರ ಭದ್ರತೆಗಾಗಿಯೇ ಭಾರತ ಸರ್ಕಾರವು ಭಾರೀ ಮುತುವರ್ಜಿ ವಹಿಸುತ್ತಿದ್ದು, ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದೆ.

ಅಮೆರಿಕಾ ಅಧ್ಯಕ್ಷ ಎಲ್ಲಿಗೇ ಹೋದರು ಅವರು ಸ್ವಂತ ವಿಮಾನದಲ್ಲೇ ತೆರಳಲಿದ್ದಾರೆ. ವಿಮಾನದ ಜೊತೆಗೆ ಅವರ ಪ್ರಯಾಣಿಸುವ ಕಾರನ್ನು ಕೂಡ ತೆಗೆದುಕೊಂಡು ಹೋಗಲಾಗುತ್ತದೆ. ಈ ಬಾರಿ ಭಾರತಕ್ಕೂ ಅಧ್ಯಕ್ಷರ ಜೊತೆಗೆ ಅತ್ಯಾಧುನಿಕ ಸೌಲಭ್ಯವುಳ್ಳ, ಅತ್ಯಂತ ಸುರಕ್ಷಿತ ಕಾರು 'ಬೀಸ್ಟ್‌' ಬರಲಿದೆ.

ದೆಹಲಿ ಹೊರತುಪಡಿಸಿ, ಗುಜರಾತ್‌ನ ಅಹಮದಾಬಾದ್‌ಗೆ ಟ್ರಂಪ್ ಭೇಟಿ ನೀಡಲಿದ್ದು ರಸ್ತೆ ಮಾರ್ಗವಾಗಿ ಎಲ್ಲೆಲ್ಲಿ ಸಾಗುತ್ತಾರೋ ಅಲ್ಲೆಲ್ಲಾ ಅವರದ್ದೇ ಕಾರಿನಲ್ಲಿ ತೆರಳಲಿದ್ದಾರೆ. ಯಾವುದೇ ಉಗ್ರರ ದಾಳಿಗೆ ಜಗ್ಗದ, ಬಾಂಬ್‌ ದಾಳಿಗೆ ನಲುಕದ ಅಮೆರಿಕಾ ಅಧ್ಯಕ್ಷರ ಕಾರಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಆಸಕ್ತಿದಾಯಕವಾಗಿದೆ. ಹಾಗಿದ್ದರೆ ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷರ ಕಾರು ಏನೆಲ್ಲಾ ಸೌಕರ್ಯ ಒಳಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ ಓದಿ.

ಟ್ರಂಪ್ ಕಾರು 'ದಿ ಬೀಸ್ಟ್'

ಟ್ರಂಪ್ ಕಾರು 'ದಿ ಬೀಸ್ಟ್'

ಅಮೆರಿಕಾ ಅಧ್ಯಕ್ಷರಿಗೆಂದೇ ಅಧಿಕೃತವಾಗಿ ವಿನ್ಯಾಸಗೊಳಿಸಿದ ಕಾರನ್ನು 'ದಿ ಬೀಸ್ಟ್‌' ಎಂದು ಕರೆಯಲಾಗುತ್ತದೆ. ಫೆಬ್ರವರಿ 24 ರಂದು ಗುಜರಾತ್‌ಗೆ ಬರಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ 'ದಿ ಬೀಸ್ಟ್' ನಲ್ಲಿ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದತ್ತ ಸಾಗಲಿದ್ದಾರೆ. ಲಿಮೋಸಿನ್‌ನ(ದಿ ಬೀಸ್ಟ್‌) ಪ್ರಸ್ತುತ ಮಾದರಿಯ ಬಗ್ಗೆ ಮಾಹಿತಿ ಇಲ್ಲಿದೆ:

ಕಾರಿನ ಕಂಪನಿ - ಕ್ಯಾಡಿಲಾಕ್
ವರ್ಗ - ಶಸ್ತ್ರಸಜ್ಜಿತ ಲಿಮೋಸಿನ್
ಆರಂಭ - ಸೆಪ್ಟೆಂಬರ್ 24, 2018
ಬದಲಾವಣೆ: ಕ್ಯಾಡಿಲಾಕ್ ಒನ್', ಹಿಂದಿನ ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅವರ ಅಧಿಕೃತ ಲಿಮೋಸಿನ್

 

ಕಾರಿನ ವಿಂಡೋಸ್

ಕಾರಿನ ವಿಂಡೋಸ್

ಕಾರಿನ ಕಿಟಕಿಗಳು ಐದು ಪದರಗಳ ಗಾಜು ಮತ್ತು ಪಾಲಿಕಾರ್ಬೊನೇಟ್‌ನಿಂದ ಮಾಡಲ್ಪಟ್ಟಿದೆ. ಯಾವುದೇ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ, ರಕ್ಷಾಕವಚ ಗುಂಡುಗಳನ್ನು ತಡೆದುಕೊಳ್ಳಬಲ್ಲವು. ಈ ಕಾರಿನಲ್ಲಿ ಚಾಲಕನ ವಿಂಡೋ ಮಾತ್ರ ತೆರೆಯಬಹುದು ಅದು ಕೂಡ ಕೇವಲ 3 ಇಂಚುಗಳವರೆಗೆ ಮಾತ್ರ.

ಕಾರಿನಲ್ಲಿರುವ ರಕ್ಷಣಾ ವ್ಯವಸ್ಥೆ

ಕಾರಿನಲ್ಲಿರುವ ರಕ್ಷಣಾ ವ್ಯವಸ್ಥೆ

'ದಿ ಬೀಸ್ಟ್' ಕಾರು ಸಂಪೂರ್ಣ ರಕ್ಷಣೆಯ ಉದ್ದೇಶದಿಂದಲೇ ತಯಾರಿಸಲಾಗಿದೆ. ಕಾರಿನ ಒಳಗಿನಿಂದಲೇ ಸಿಡಿಸಬಹುದಾದ ಶಾಟ್‌ಗನ್‌ಗಳು, ಅಶ್ರುವಾಯು ಫಿರಂಗಿಗಳು , ಟಿಯರ್ ಗ್ಯಾಸ್, ಬೆಂಕಿ ಹೊತ್ತಿಕೊಂಡರೆ, ಅಗ್ನಿಶಾಮಕ ವ್ಯವಸ್ಥೆ, ಹೊಗೆ ಪರದೆ ವಿತರಕಗಳಿವೆ. ಜೊತೆಗೆ ಅಮೆರಿಕಾ ಅಧ್ಯಕ್ಷರ ಬಳಿಯಲ್ಲೇ ಸ್ಯಾಟಲೈಟ್ ಫೋನ್‌ ಇದ್ದು ಸೀದಾ ಪೆಂಟಗಾನ್ ಇಲ್ಲವೇ ಉಪಾಧ್ಯಕ್ಷರಿಗೆ ಕರೆ ಮಾಡಬಹುದಾಗಿದೆ.

 

ಕಾಲಿಡುವ ಜಾಗದ ಬಳಿಕ ಅಗ್ನಿಶಾಮಕ ವ್ಯವಸ್ಥೆ, ರಾಸಾಯನಿಕ ದಾಳಿಯ ಸಂದರ್ಭದಲ್ಲಿ ಆಮ್ಲಜನಕ ವ್ಯವಸ್ಥೆ, ಅಶ್ರುವಾಯು ಮತ್ತು ಹೊಗೆ-ಪರದೆ ವಿತರಕಗಳು ಮತ್ತು ತುರ್ತು ವರ್ಗಾವಣೆಯ ಸಂದರ್ಭದಲ್ಲಿ ಅಧ್ಯಕ್ಷರಿಗೆ ಹೊಂದುವ ರಕ್ತದ ಚೀಲಗಳನ್ನು ಕೂಡ ಇಡಲಾಗಿದೆ.

ಡ್ರೈವರ್ ಕ್ಯಾಬಿನ್

ಡ್ರೈವರ್ ಕ್ಯಾಬಿನ್

ಅಮೆರಿಕಾ ಅಧ್ಯಕ್ಷರ ಕಾರನ್ನು ಚಲಾಯಿಸುವವನು ಯುಎಸ್ ಸೀಕ್ರೆಟ್ ಸೇವೆಯಿಂದ ತರಬೇತಿ ಪಡೆದ ಚಾಲಕನಾಗಿರುತ್ತಾನೆ. ಯಾವುದೇ ಸವಾಲಿನ ಸಂದರ್ಭದಲ್ಲೂ ಕಾರನ್ನು ಚಾಲಿಸುವ, ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಚಾಲಕನ ಕ್ಯಾಬಿನ್ ಸರಿಯಾದ ಸಂವಹನ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿದೆ.

ತುರ್ತು ಪಾರಾಗಬೇಕಾದ ವೇಳೆ 180 ಡಿಗ್ರಿಯಲ್ಲಿ ತಿರುವುಗಳನ್ನು ಮಾಡಲು ಅವರಿಗೆ ತರಬೇತಿ ನೀಡಲಾಗುತ್ತದೆ.

 

ಕಾರಿನ ಬಾಡಿ ಮತ್ತು ಟೈಯರ್ಸ್

ಕಾರಿನ ಬಾಡಿ ಮತ್ತು ಟೈಯರ್ಸ್

'ದಿ ಬೀಸ್ಟ್‌' ಕಾರು ಅತ್ಯಂತ ಬಲಿಷ್ಟವಾದ ಉಕ್ಕಿನಿಂದ ಮಾಡಲ್ಪಟ್ಟಿದೆ. ಸ್ಟೀಲ್, ಟೈಟಾನಿಯಂ, ಅಲ್ಯೂಮಿನಿಯಂ ಮತ್ತು ಸೆರಾಮಿಕ್ಸ್‌ನಂತಹ ಸಂಯೋಜನಾ ವಸ್ತುಗಳಿಂದ ತಯಾರಿಸಿದ ಐದು ಇಂಚು ದಪ್ಪದ ಮಿಲಿಟರಿ ದರ್ಜೆಯ ರಕ್ಷಾಕವಚ ಈ ಕಾರಿಗಿದೆ.

ವಾಹನದ ಮುಂಭಾಗದಲ್ಲಿ ಅಶ್ರುವಾಯು, ಗ್ರೆನೇಡ್ ಲಾಂಚರ್‌ಗಳು ಮತ್ತು ರಾತ್ರಿಹೊತ್ತು ಸಂಚರಿಸಬಹುದಾದ ಕ್ಯಾಮೆರಾಗಳಿವೆ. ಕಾರಿನ ಕೆಳಭಾಗದಲ್ಲಿ ಉಕ್ಕಿನ ಫಲಕಗಳನ್ನು ಬಲಪಡಿಸಿದೆ ಅದು ಬಾಂಬುಗಳು, ಸ್ಪೋಟಕಗಳಿಂದ ಕಾರನ್ನು ರಕ್ಷಿಸುತ್ತದೆ.

ಇನ್ನು ಕಾರಿನ ಟೈರ್‌ಗಳು ಕೂಡ ಅತ್ಯಂತ ಸ್ಟ್ರಾಂಗ್ ಆಗಿದ್ದು ಪಂಕ್ಚರ್ ನಿರೋಧಕಗಳಾಗಿವೆ. ಒಂದು ವೇಳೆ ಟೈರ್ ಸ್ಫೋಟಗೋಂಡ್ರೂ ವೀಲ್‌ಗಳಂತೆ ತೆರಳಿ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಕೂಡ ನೀಡಲಾಗಿದೆ.

 

ಕಾರಿನ ತೂಕ ಬರೋಬ್ಬರಿ 6.4 ಟನ್

ಕಾರಿನ ತೂಕ ಬರೋಬ್ಬರಿ 6.4 ಟನ್

ಅಮೆರಿಕಾ ಅಧ್ಯಕ್ಷರು ಬಳಸುವ 'ದಿ ಬೀಸ್ಟ್‌' ತೂಕವು ಬರೋಬ್ಬರಿ 6.4 ಟನ್‌ಗಳಷ್ಟಿದೆ. ಅಂದರೆ 6,400 ಕೆಜಿಗಳಷ್ಟು ತೂಕವನ್ನು ಹೊಂದಿದ್ದು, ಯಾವುದೇ ಸಾಮಾನ್ಯ ಕಾರು ಕೂಡ ಇಷ್ಟು ತೂಕ ಹೊಂದಿಲ್ಲ.

ಕಾರಿನ ಹಿಂದಿನ ಸೀಟ್‌ಗಳು

ಕಾರಿನ ಹಿಂದಿನ ಸೀಟ್‌ಗಳು


ಈ ಕಾರಿನಲ್ಲಿ ಯುಎಸ್ ಅಧ್ಯಕ್ಷರನ್ನು ಹೊರತುಪಡಿಸಿ ನಾಲ್ಕು ಜನರು ಕೂರಬಹುದು. ಕಾರಿನ ಒಳಾಂಗಣವನ್ನು ಗಾಜಿನಿಂದ ವಿಭಜಿಸಲಾಗಿದೆ, ಅದನ್ನು ಅಧ್ಯಕ್ಷರು ಮಾತ್ರ ಬಟನ್ ಒತ್ತಿ ತೆರೆಯಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಸ್ವತಂತ್ರ ಆಮ್ಲಜನಕ ಪೂರೈಕೆ ಕೂಡ ಇದೆ.

ಕಾರಿನ ಡೋರ್ ಮತ್ತು ಇಂಧನ ಟ್ಯಾಂಕ್

ಕಾರಿನ ಡೋರ್ ಮತ್ತು ಇಂಧನ ಟ್ಯಾಂಕ್

ದಿ ಬೀಸ್ಟ್ ಕಾರಿನ ಡೋರ್‌ಗಳು 8 ಇಂಚ್ ದಪ್ಪವಿರುವ ರಕ್ಷಣಾ ಕವಚವಾಗಿದೆ. ಇದು ಬೋಯಿಂಗ್ 757 ವಿಮಾನದ ಕ್ಯಾಬಿನ್ ಡೋರ್‌ ತೂಕಕ್ಕೆ ಸಮವಾಗಿದೆ.ಕಾರಿನ ಬಾಗಿಲು ಪೂರ್ಣ ಪ್ರಮಾಣದಲ್ಲಿ ಲಾಕ್ ಆಗಿದ್ದರೆ, ರಾಸಾಯನಿಕ ಶಸ್ತ್ರಾಸ್ತ್ರಗಳಿಂದ ರಕ್ಷಿಸಲ್ಪಡುತ್ತದೆ.

ಇನ್ನು ಇಂಧನ ಟ್ಯಾಂಕ್ ಯಾವುದೇ ದಾಳಿ ಸಂದರ್ಭದಲ್ಲಿ ಸ್ಪೋಟಗೊಳ್ಳದಂತೆ ತಡೆಗಟ್ಟಲು ಫೋಮ್‌ನಿಂದ ತುಂಬಿದ ರಕ್ಷಣಾ ಕವಚವನ್ನು ಹೊಂದಿದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+