ಅಮೆರಿಕನ್- ಕೆನಡಿಯನ್ ನಟರಾದ ಡ್ವೇನ್ 'ದ ರಾಕ್' ಜಾನ್ಸನ್ ಸದ್ಯಕ್ಕೆ ಇನ್ ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಹಣ ಪಡೆಯುವ ಸೆಲೆಬ್ರಿಟಿ ಎಂಬ ಕಿರೀಟ ತೊಟ್ಟಿದ್ದಾರೆ. ಸುಂದರಿ ಕೈಲಿ ಜೆನ್ನರ್ ರನ್ನು ಪಕ್ಕಕ್ಕೆ ಸರಿಸಿ, ತಾವು ಆ ಸ್ಥಾನದಲ್ಲಿ ಕೂತಿದ್ದಾರೆ. ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆ ಹಾಪರ್ ಎಚ್ ಕ್ಯು ಪ್ರಕಾರ, 48 ವರ್ಷದ ಡ್ವೇನ್ ಒಂದು ಪ್ರಾಯೋಜಿತ ಪೋಸ್ಟ್ ಗೆ ಅಂದಾಜು ಮೊತ್ತ 10,15,000 USD ಪಡೆಯುತ್ತಾರೆ.
ಭಾರತದ ರುಪಾಯಿ ಲೆಕ್ಕಗಳಲ್ಲಿ 7.65 ಕೋಟಿಗೂ ಹೆಚ್ಚು ಮೊತ್ತ. ಇದು ಒಂದೇ ಒಂದು ಪ್ರಾಯೋಜಿತ ಪೋಸ್ಟ್ ಗೆ ಪಡೆಯುವ ಮೊತ್ತ ಎನ್ನಲಾಗಿದೆ. ಇನ್ ಸ್ಟಾಗ್ರಾಮ್ ನಲ್ಲಿ ಡ್ವೇನ್ ಜಾನ್ಸನ್ ಗೆ 18.9 ಕೋಟಿ ಮಂದಿ ಫಾಲೋವರ್ಸ್ ಇದ್ದಾರೆ. ಆ ನಂತರದ ಸ್ಥಾನದಲ್ಲಿ ಕೈಲಿ ಜೆನ್ನರ್ ಇದ್ದು, 18.4 ಕೋಟಿ ಫಾಲೋವರ್ಸ್ ಇದ್ದಾರೆ.

ವರದಿ ಪ್ರಕಾರ ಎರಡನೇ ಸ್ಥಾನದಲ್ಲಿ ಇರುವ ಕೈಲಿ ಜೆನ್ನರ್ 9,86,000 USD ಪಡೆಯುತ್ತಾರೆ. ಹತ್ತಿರ ಹತ್ತಿರ ಭಾರತದ ರುಪಾಯಿಗಳಲ್ಲಿ 7.5 ಕೋಟಿಯೇ ಆಯಿತು. ಈ ಪಟ್ಟಿಯಲ್ಲಿ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಇದ್ದು, 8,89,000 USD, ಕಿಮ್ ಕರ್ದರ್ಶಿಯನ್ 8,58,000 USD, ಅರಿಯಾನ ಗ್ರಾಂಡೆ 8,53,000 USD ಪಡೆಯುತ್ತಾರಂತೆ.

ಅಂದ ಹಾಗೆ ಫೋರ್ಬ್ಸ್ ಪ್ರಕಾರ, 2019ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಹಾಲಿವುಡ್ ನಟ ಎಂಬ ಕೀರ್ತಿ ಕೂಡ ಡ್ವೇನ್ ಜಾನ್ಸನ್ ಗೆ ಇದೆ.


Click it and Unblock the Notifications