For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ಇ-ಬಸ್‌ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ

2022ರಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಉದ್ಯಮವು ಎಲ್ಲಾ ವಿಭಾಗಗಳಲ್ಲಿ ದಾಖಲೆಯ ಮಾರಾಟವನ್ನು ಸಾಧಿಸಿದೆ. ಒಟ್ಟು 1,054,938 ವಾಹನಗಳು ಮಾರಾಟವಾಗಿದೆ. ಕರ್ನಾಟಕದಲ್ಲಿ ಮಾರಾಟವಾಗಿದ್ದೆಷ್ಟು? ತಯಾರಕರು ಯಾರು? ಮಾಹಿತಿ ಪಡೆಯಿರಿ

|

ಬೆಂಗಳೂರು, ಫೆಬ್ರವರಿ 02: ದೇಶದಲ್ಲಿ electric vehicle industry ವೇಗವಾಗಿ ಬೆಳೆಯುತ್ತಿದೆ. 2022 ರಲ್ಲಿ Ev ರಿಪೋರ್ಟರ್ ನಡೆಸಿದ ಅಧ್ಯಯನದ ಪ್ರಕಾರ, ಏಷ್ಯನ್ ದೇಶದಲ್ಲಿ electric vehicle ಗಳ ಮಾರಾಟವು ಮೊದಲ ಬಾರಿಗೆ ಒಂದು ಮಿಲಿಯನ್ ಯುನಿಟ್‌ಗಳನ್ನು ಮೀರಿದೆ. ಅಂದರೆ 1,054,938ರಷ್ಟನ್ನು ತಲುಪಿದೆ. 2021 ರಲ್ಲಿ ದಾಖಲಾದ ಮಾರಾಟವನ್ನು ಪರಿಣಾಮಕಾರಿಯಾಗಿ ಮೂರು ಪಟ್ಟು ಹೆಚ್ಚಿಸಿದೆ. ಅಂದರೆ, 3,44,495 ಹೆಚ್ಚಿನ electric vehicle ಗಳು ಮಾರಾಟವಾಗಿದೆ.

Electric Car Vs Petrol Car : ಪೆಟ್ರೋಲ್ ಕಾರಿಗಿಂತ ಎಲೆಕ್ಟ್ರಿಕ್ ಕಾರು ಮಿತವ್ಯಯವಾ? ನೀವೆಷ್ಟು ಹಣ ಉಳಿಸಬಲ್ಲಿರಿ? Electric Car Vs Petrol Car : ಪೆಟ್ರೋಲ್ ಕಾರಿಗಿಂತ ಎಲೆಕ್ಟ್ರಿಕ್ ಕಾರು ಮಿತವ್ಯಯವಾ? ನೀವೆಷ್ಟು ಹಣ ಉಳಿಸಬಲ್ಲಿರಿ?

 ದೇಶದಲ್ಲಿ electric vehicle ಉದ್ಯಮ

ದೇಶದಲ್ಲಿ electric vehicle ಉದ್ಯಮ

ದೇಶದಲ್ಲಿ ಒಟ್ಟು 1,054,938 electric vehicleಗಳು ಮಾರಾಟವಾಗುವುದರೊಂದಿಗೆ, ಭಾರತದ electric vehicle ಉದ್ಯಮವು ಎಲ್ಲಾ ವಿಭಾಗಗಳಲ್ಲಿ ದಾಖಲೆಯ ಮಾರಾಟವನ್ನು ಸಾಧಿಸಿದೆ. ಇದು ಒಟ್ಟು ಆಟೋಮೊಬೈಲ್ ಮಾರಾಟದ 4.7 ಪ್ರತಿಶತವನ್ನು ಹೊಂದಿದೆ. ಹೈ-ಸ್ಪೀಡ್ electric ದ್ವಿಚಕ್ರ ವಾಹನಗಳು ಸಹ 2022 ರಲ್ಲಿ 669,845 ಯುನಿಟ್‌ಗಳ ಮಾರಾಟವನ್ನು ಹೊಂದಿದ್ದವು. 2022 ರಲ್ಲಿ ಒಟ್ಟು 41,675 ಯೂನಿಟ್ electric ನಾಲ್ಕು-ಚಕ್ರ ವಾಹನಗಳು ಮಾರಾಟವಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 178ರಷ್ಟು ಹೆಚ್ಚಾಗಿದೆ.

 ದೇಶದಲ್ಲಿ electric bus ಗಳ ಬೆಳವಣಿಗೆ

ದೇಶದಲ್ಲಿ electric bus ಗಳ ಬೆಳವಣಿಗೆ

ದೇಶದಲ್ಲಿ electric bus ಮಾರಾಟಕ್ಕೆ ಸಂಬಂಧಿಸಿದಂತೆ, 2021ನೇ ವರ್ಷದಲ್ಲಿ 1,171 ಯುನಿಟ್‌ಗಳಿಗೆ ಹೋಲಿಸಿದರೆ 2022 ರಲ್ಲಿ 1,939 ಯುನಿಟ್‌ಗಳು ಮಾರಾಟವಾಗಿವೆ. ಇದು ಭಾರತದಲ್ಲಿ ಮಾರಾಟವಾದ ಒಟ್ಟು electric bus ಶೇಕಡಾ 0.2 ರಷ್ಟಿದೆ. ಎಲ್ಲಾ ಮೂರು ಪ್ರಮುಖ electric vehicles ಮಾರಾಟವಾಗಿರುವ ರಾಜ್ಯಗಳನ್ನು ತೆಗೆದುಕೊಂಡರೆ, ಇತರ ವಾಹನ ವಿಭಾಗಗಳಿಗಿಂತ ಬಸ್ ವಿಭಾಗವು ಗಣನೀಯವಾಗಿ ಏರಿಕೆ ಕಂಡಿದೆ. ಉತ್ತರ ಪ್ರದೇಶದಲ್ಲಿ ಶೇ 15, ಕರ್ನಾಟಕದಲ್ಲಿ ಶೇ 12 ಮತ್ತು ಮಹಾರಾಷ್ಟ್ರದಲ್ಲಿ ಶೇ 8 ರಷ್ಟು ವ್ಯಾಪಿಸಿದೆ.

 ಭಾರತದಲ್ಲಿನ ಪ್ರಮುಖ electric bus ತಯಾರಕರು

ಭಾರತದಲ್ಲಿನ ಪ್ರಮುಖ electric bus ತಯಾರಕರು

1. SkyPark Electric Bus by Deccan Auto Limited
2. Eichers Skyline Pro by Eichers Motor Limited
3. Solaris Urbino 15 LE Electric Bus by Solaris Bus & Coach SA
4. Zhongtong Electric Bus LCK6122EVG by Zhongtong Bus and Holding Company Limited
5. PMI - Photon Regio and Urban Electric Buses
6. OlectraK9 Electric Bus by Olectra Greentech
7. BYD K9 by BYD Company Limited
8. Tata Ultra 9/9 Electric AC Bus by Tata Motors
9. Ashok Leyland Versa EV Electric Bus
10. JBM Ecolife Electric Bus by JBM Motors

 ರಾಜ್ಯದಲ್ಲಿ Electric Bus ಸಂಚಾರ

ರಾಜ್ಯದಲ್ಲಿ Electric Bus ಸಂಚಾರ

ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಈಗಾಗಲೇ Electric Bus ಸಂಚಾರ ನಡೆಸುತ್ತಿವೆ. ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಚಾರ್ಜಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಮತ್ತು ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 75 Electric Bus ಗಳಿಗೆ ಕಳೆದ ವರ್ಷದ ಆಗಷ್ಟ್‌ನಲ್ಲಿ ಚಾಲನೆ ನೀಡಿದರು. ಈ ಬಸ್‌ಗಳು ಕೇಂದ್ರದ FAME-II ಯೋಜನೆಯ ಭಾಗವಾಗಿದ್ದು, ಬೆಂಗಳೂರಿನಲ್ಲಿ ಒಟ್ಟು 300 Electric Busಗಳ ಒಟ್ಟು ವೆಚ್ಚದ ಒಪ್ಪಂದದ ಮಾದರಿಯಲ್ಲಿ ನಿರ್ವಹಿಸಲಾಗುತ್ತದೆ. ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಈ ಬಸ್‌ಗಳನ್ನು ತಯಾರಿಸಿದೆ.

English summary

E-bus market in India has grown 65% in 2022 How much growth in Karnataka?

India's electric vehicle industry achieved record sales across all segments. Total of 1,054,938 vehicles sold
Story first published: Friday, February 3, 2023, 6:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X