eBikeGo ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪೆನಿಯು ಮೂರನೇ ಅವಧಿಯ ಲಾಕ್ ಡೌನ್ ಗೆ ಕಾರ್ಯ ನಿರ್ವಹಣೆಗೆ ನಿರ್ಧರಿಸಿದೆ. ಇತ್ತ ಸರ್ಕಾರ ಕೂಡ ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್ ಗಳ ಮಾಡಿ, ಹಲವು ವಿನಾಯಿತಿಗಳನ್ನು ಘೋಷಣೆ ಮಾಡಿದೆ. ಇಂಥ ಸಮಯದಲ್ಲಿ eBikeGo ತಿಂಗಳ ಆಧಾರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಾಡಿಗೆಗೆ ಪಡೆಯಲು ಅವಕಾಶ ನೀಡುತ್ತಿದೆ.
33 ಪರ್ಸೆಂಟ್ ಉದ್ಯೋಗಿಗಳ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಸರ್ಕಾರ ಅನುಮತಿ ನೀಡಿದ್ದು, ಕೆಲವು ಸಿಬ್ಬಂದಿ ಬಳಿ ಸ್ವಂತ ವಾಹನ ಇರಲ್ಲ. ಇನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪುನರಾರಂಭ ಆಗಿಲ್ಲ. ಆದ್ದರಿಂದ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಿಂಗಳ ಆಧಾರದಲ್ಲಿ ಬಾಡಿಗೆಗೆ ಪಡೆಯಬಹುದು ಎಂದು ತಿಳಿಸಲಾಗಿದೆ.
ತಿಂಗಳಿಗೆ 3600 ರುಪಾಯಿ ಬಾಡಿಗೆ
ಹೇಗೆ ಮನೆಯ ಕೇಬಲ್ ಟೀವಿಗೆ ತಿಂಗಳಿಗೆ ಇಷ್ಟು ಎಂದು ಪಾವತಿ ಮಾಡುತ್ತೀರೋ ಅದೇ ಥರ ಎಲೆಕ್ಟ್ರಿಕ್ ಸ್ಕೂಟರ್ ಗೆ ತಿಂಗಳಿಗೆ 3600 ರುಪಾಯಿ ಪಾವತಿಸಬೇಕಾಗುತ್ತದೆ. ತನ್ನ ಸಿಬ್ಬಂದಿ ಪರವಾಗಿ ಕಂಪೆನಿಯೇ ಸ್ಕೂಟರ್ ಗಳನ್ನು ಬಾಡಿಗೆಗೆ ಪಡೆಯಬಹುದು ಅಥವಾ ನೇರವಾಗಿ ಉದ್ಯೋಗಿಗಳೇ ತಮ್ಮ ಕಚೇರಿ ಓಡಾಟ ಅಥವಾ ಮತ್ಯಾವುದೇ ಉದ್ದೇಶಕ್ಕೆ ಸ್ಕೂಟರ್ ಅನ್ನು ಬಾಡಿಗೆಗೆ ಪಡೆಯಬಹುದು.
ಈಗಾಗಲೇ eBikeGo ವಿವಿಧ ಕಂಪೆನಿಗೆ ಸೇವೆ ಒದಗಿಸುತ್ತಿದೆ
ಹಲವು ಕಂಪೆನಿಗಳು ತಮ್ಮ ಸಿಬ್ಬಂದಿಗೆ ಈ ವ್ಯವಸ್ಥೆ ಮಾಡಿಕೊಡಲು ಈಗಾಗಲೇ ಸಂಪರ್ಕಿಸಲು ಆರಂಭಿಸಿವೆ. ಆ ಮೂಲಕ ತಮ್ಮ ಆಸಕ್ತಿ ತೋರಿಸಿವೆ ಎಂದು eBikeGo ತಿಳಿಸಿದೆ. ಸದ್ಯಕ್ಕೆ ಝೊಮ್ಯಾಟೋ, ಬಿಗ್ ಬ್ಯಾಸ್ಕೆಟ್ ಡೆಲಿವರಿ, ರೆಬೆಲ್ ಫುಡ್ಸ್, ಸ್ವಿಗ್ಗಿ, ಗುಡ್ ಬಾಕ್ಸ್ ಮುಂತಾದವಕ್ಕೆ eBikeGo ಸೇವೆಯನ್ನು ಒದಗಿಸುತ್ತಿದೆ.
2019ರ ಜನವರಿಯಲ್ಲಿ ಆರಂಭ
ನವದೆಹಲಿ ಮೂಲದ eBikeGo, ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ನೀಡುವ ಸೇವೆ ನೀಡಲು ಆರಂಭಿಸಿದ್ದು ದೆಹಲಿಯಲ್ಲಿ, 2019ರ ಜನವರಿಯಲ್ಲಿ. ಕಳೆದ ವರ್ಷ ಜುಲೈನಲ್ಲಿ ತೈವಾನ್ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಕಂಪೆನಿ UrDa ಜತೆ ಕೈ ಜೋಡಿಸಿತು. ಆ ಮೂಲಕ eBikeGo ಕಂಪೆನಿಗೆ ತನ್ನ ನೆಟ್ ವರ್ಕ್ ವಿಸ್ತರಣೆಗೆ ಸಹಾಯ ಆಯಿತು.


Click it and Unblock the Notifications