For Quick Alerts
ALLOW NOTIFICATIONS  
For Daily Alerts

2020-21 ಆರ್ಥಿಕ ವರ್ಷಕ್ಕೆ ಜಿಡಿಪಿ 6ರಿಂದ 6.5 ಪರ್ಸೆಂಟ್ ಅಂದಾಜು ನಿರೀಕ್ಷೆ

|

ಮುಂದಿನ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ಆರ್ಥಿಕ ಸಮೀಕ್ಷೆಯಲ್ಲಿ ಭಾರತದ ಪ್ರಗತಿ ದರವನ್ನು 6ರಿಂದ 6.5 ಪರ್ಸೆಂಟ್ ಗೆ ಅಂದಾಜು ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಅಂದ ಹಾಗೆ ಮುಂದಿನ ಆರ್ಥಿಕ ವರ್ಷವು ಏಪ್ರಿಲ್ 1ರಿಂದ ಆರಂಭವಾಗಲಿದೆ. ಬೇಡಿಕೆ ಹೆಚ್ಚಳ ಆಗಲಿ ಎಂಬ ದೃಷ್ಟಿಯಿಂದ ಸರ್ಕಾರವು ಈ ಬಾರಿಯ ಬಜೆಟ್ ನಲ್ಲಿ ಹಲವು ಆರ್ಥಿಕ ಕ್ರಮಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.

ಭಾರತದಲ್ಲಿನ ಬೆಳವಣಿಗೆ ಹಿಂಜರಿತ ತಾತ್ಕಾಲಿಕ: ಐಎಂಎಫ್ ಅಧ್ಯಕ್ಷೆಭಾರತದಲ್ಲಿನ ಬೆಳವಣಿಗೆ ಹಿಂಜರಿತ ತಾತ್ಕಾಲಿಕ: ಐಎಂಎಫ್ ಅಧ್ಯಕ್ಷೆ

ದಶಕದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತವನ್ನು ಭಾರತ ಎದುರಿಸುತ್ತಿದೆ. ಜುಲೈ-ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ಬೆಳವಣಿಗೆ ದರವು (ಜಿಡಿಪಿ) 4.5 ಪರ್ಸೆಂಟ್ ಗೆ ಕುಸಿದಿದೆ. ಆರ್ಥಿಕ ವರ್ಷದ ಕೊನೆ ಮಾರ್ಚ್ 31ಕ್ಕೆ ಜಿಡಿಪಿ 5 ಪರ್ಸೆಂಟ್ ಆಗುವ ಅಂದಾಜಿದೆ. ಜಾಗತಿಕ ಆರ್ಥಿಕ ಕುಸಿತವಾಗಿದ್ದ 2008- 09ರ ನಂತರ ಇದು ಅತ್ಯಂತ ಮಂದಗತಿಯ ಬೆಳವಣಿಗೆ ಆಗಲಿದೆ.

2020-21 ಆರ್ಥಿಕ ವರ್ಷಕ್ಕೆ GDP 6ರಿಂದ 6.5% ಅಂದಾಜು ನಿರೀಕ್ಷೆ

ಈ ಅಂಕಿ- ಅಂಶವನ್ನು ಆರ್ಥಿಕ ಸಮೀಕ್ಷೆಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾದ ಕೃಷ್ಣಮೂರ್ತಿ ಸುಬ್ರಮಣಿಯನ್ ಅಧಿಕೃತವಾಗಿ ಶುಕ್ರವಾರ ಘೋಷಣೆ ಮಾಡಲಿದ್ದಾರೆ. ಆ ನಂತರ ಶನಿವಾರದಂದು ಕೇಂದ್ರ ಬಜೆಟ್ ಮಂಡನೆ ಆಗಲಿದೆ.

English summary

Economic Survey: GDP For FY21 Expected 6 To 6.5 Percent

According to sources, India's economic survey is seen projecting growth of 6 to 6.5 per cent in the next year starting April 1.
Story first published: Friday, January 31, 2020, 11:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X