ಗ್ರಾಮೀಣ ಪ್ರದೇಶದಲ್ಲಿ LED ಬಲ್ಬ್ 10 ರು.ಗೆ ಒಂದರಂತೆ ವಿತರಿಸಲು EESL ಯೋಜನೆ

ಭಾರತದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ ನಿಂದ (EESL) ಗ್ರಾಮೀಣ ಪ್ರದೇಶಗಳಿಗೆ ಒಂದು ಎಲ್ ಇಡಿ (ಲೈಟ್-ಎಮಿಟಿಂಗ್ ಡಿಯೋಡ್) ಬಲ್ಬ್ ಗೆ 10 ರುಪಾಯಿಯಂತೆ ನೀಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸರ್ಕಾರದ ಬೆಂಬಲ ಅಥವಾ ಪ್ರೋತ್ಸಾಹಧನ ಏನನ್ನೂ ಪಡೆಯದೆ ಆರು ಕೋಟಿ ಎಲ್ ಇಡಿ ಬಲ್ಬ್ ವಿತರಿಸಲು ಮುಂದಾಗಿದೆ.

ಈ ಕುರಿತು ಸರ್ಕಾರಿ ಸ್ಯಾಮ್ಯದ EESL ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಎಲ್ ಇಡಿ ಬಲ್ಬ್ ಒದಗಿಸಲಿದೆ EESL. ಆ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ UJALA (ಉನ್ನತ್ ಜ್ಯೋತಿ ಬೈ ಅಫೋರ್ಡಬಲ್ ಲೈಟಿಂಗ್ ಫಾರ್ ಆಲ್) ಯೋಜನೆ ಅಡಿಯಲ್ಲಿ ಇದನ್ನು ಪ್ರಸ್ತಾವ ಮಾಡಲಾಗಿದೆ.

EESLನಿಂದ ಸದ್ಯಕ್ಕೆ ವಿಶ್ವದಲ್ಲಿ ಅತಿ ದೊಡ್ಡ ದೇಶೀಯ ವಿದ್ಯುತ್ ಯೋಜನೆ ನಡೆಸುತ್ತಿದೆ. ವಿಶ್ವಸಂಸ್ಥೆಯ ಕ್ಲೀನ್ ಡೆವಲಪ್ ಮೆಂಟ್ ಮೆಕಾನಿಸಂನಲ್ಲಿ (ಸಿಡಿಎಂ) ಅಡಿಯಲ್ಲಿ ಗ್ರಾಮ್ UJALAದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆ ಮೂಲಕ ಕಾರ್ಬನ್ ಕ್ರೆಡಿಟ್ಸ್ ಬರಲಿದೆ. 2014ರಲ್ಲಿ ಒಂದು ಎಲ್ ಇಡಿ ಬಲ್ಬ್ ಗೆ 310 ರುಪಾಯಿಗೆ ಮಾರಲಾಗುತ್ತಿತ್ತು. ಸರ್ಕಾರದ UJALA ಯೋಜನೆ ಅಡಿ 70 ರುಪಾಯಿಗೆ ಕಡಿತ ಮಾಡಲಾಯಿತು.

ಗ್ರಾಮೀಣ ಪ್ರದೇಶದಲ್ಲಿ LED ಬಲ್ಬ್ 10 ರು. ಒಂದರಂತೆ ವಿತರಿಸಲಿದೆ EESL

ಈಗಿನ ಹೊಸ ಯೋಜನೆ ಅಡಿಯಲ್ಲಿ ಕಾರ್ಬನ್ ಕ್ರೆಡಿಟ್ಸ್ ನಿಂದ 60 ರುಪಾಯಿ ಬಂದರೆ, ಬಾಕಿ 10 ರುಪಾಯಿಯನ್ನು ಗ್ರಾಮೀಣ ಭಾಗದ ಗ್ರಾಹಕರು ಪಾವತಿಸುತ್ತಾರೆ. UJALA ಯೋಜನೆ ಅಡಿ ಗ್ರಾಮೀಣ ಭಾಗದಲ್ಲಿ 36 ಕೋಟಿ ಅಂದರೆ 18%ಗಿಂತ ಕಡಿಮೆ ಎಲ್ ಇಡಿ ಬಲ್ಬ್ ವಿತರಣೆ ಮಾಡಲಾಗಿದೆ.

ಮೊದಲ ಹಂತವಾಗಿ 1 ಕೋಟಿ ಎಲ್ ಇಡಿ ಬಲ್ಬ್ ವಿತರಿಸಲಾಗುವುದು. ಒಟ್ಟಾರೆ 4000 ಕೋಟಿ ಹೂಡಿಕೆ ಅಗತ್ಯದಲ್ಲಿ 600 ಕೋಟಿ ರುಪಾಯಿ ಗ್ರಾಮೀಣ ಗ್ರಾಹಕರು ಪಾವತಿಸಿದರೆ, 3400 ಕೋಟಿ ರುಪಾಯಿ ಕಾರ್ಬನ್ ಕ್ರೆಡಿಟ್ ಆದಾಯದ ಮೂಲಕ ಬರುತ್ತದೆ. EESL ಪ್ರಕಾರ, ಮೌಲ್ಯದ ದೃಷ್ಟಿಯಿಂದ ವಿಶ್ವದ ಎರಡನೇ ದೊಡ್ಡ ಮಾರುಕಟ್ಟೆ ಭಾರತ. ವಿದ್ಯುತ್ ಬೇಡಿಕೆ ಉಚ್ಛ್ರಾಯ ಮಟ್ಟದ 9428 ಮೆಗಾವ್ಯಾಟ್ ತಲುಪುವುದನ್ನು UJALA ಯೋಜನೆ ಮೂಲಕ ತಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+