ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಆಗಸ್ಟ್ 07ರ ತನಕ) ಬಜಾಜ್ ಫೈನಾನ್ಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅತಿ ಹೆಚ್ಚು ಗಳಿಕೆ ಕಂಡಿವೆ. ಒಟ್ಟಾರೆ 8 ಕಂಪನಿಗಳ ಮಾರುಕಟ್ಟೆ ಮೌಲ್ಯ ಚೇತರಿಕೆ ಕಂಡಿದೆ.
ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ 8 ಕಂಪನಿಗಳಿಂದ ಒಟ್ಟಾರೆ, 98,234.82 ಕೋಟಿ ರು ಮೌಲ್ಯ ಹೆಚ್ಚಳವಾಗಿದೆ. ದೇಶದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಇನ್ಫೋಸಿಸ್ ಅತಿ ಹೆಚ್ಚು ಲಾಭ ಗಳಿಸಿವೆ.
ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ ಕುರಿತ, ಆಮದು -ರಫ್ತು ನಿರ್ಬಂಧ, ಜಿಎಸ್ಟಿ ಸಭೆ, ಸಮ್ಮೇಳನ ನಂತರ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸವಾಗಿದೆ.
ಕಳೆದ ವಾರದಲ್ಲಿ 30 ಷೇರುಗಳ ಬಾಂಬೆ ಮಾರುಕಟ್ಟೆ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ 817.68 ಅಂಕ ಅಥವಾ ಶೇಕಡ 1.42ರಷ್ಟು ಏರಿಕೆಯನ್ನು ಕಂಡಿದೆ. ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..
ಇನ್ಫೋಸಿಸ್ ಕಂಪನಿ
ದೇಶದ ಎರಡನೇ ಅತಿದೊಡ್ದ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮಾರುಕಟ್ಟೆ ಮೌಲ್ಯ ರೂಪಾಯಿ 28,170.02 ಕೋಟಿಗೆ ರೂಪಾಯಿ ಹೆಚ್ಚಳ ಕಂಡು 6,80,182.93 ಕೋಟಿ ರುಗೆರಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯವು ರೂಪಾಯಿ 23,582.58 ಕೋಟಿಯಿಂದ ರು ನಿಂದ 12,31,362.26 ಕೋಟಿ ರು ಗೆ ಏರಿಕೆಯಾಗಿದೆ.
ಭಾರತೀಯ ಜೀವ ವಿಮಾ ನಿಗಮ
ಈ ನಡುವೆ ಸತತವಾಗಿ ಕುಸಿತ ಕಾಣುತ್ತಿದ್ದ ಭಾರತದ ಅತೀ ದೊಡ್ಡ ಜೀವ ವಿಮಾ ಸಂಸ್ಥೆ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರುಕಟ್ಟೆ ಮೌಲ್ಯವು ಹೆಚ್ಚಳವಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು ಸುಮಾರು 6,008.75 ಕೋಟಿ ರು ಹೆಚ್ಚಳ ಕಂಡು 4,34,748.72 ಕೋಟಿ ರೂಪಾಯಿಗೆ ತಲುಪಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯವು ಅಧಿಕ ಹೆಚ್ಚಳವಾಗಿದೆ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯವು ರೂಪಾಯಿ 5,709.2 ಕೋಟಿ ರೂಪಾಯಿ ಇಂದ 4,42,157.08 ಕೋಟಿ ರುಗೆ ಏರಿಕೆಯಾಗಿದೆ. ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರುಕಟ್ಟೆ ಮೌಲ್ಯವು ಕೂಡಾ ಹೆಚ್ಚಳವಾಗಿದೆ. ಎಸ್‌ಬಿಐ ಮಾರುಕಟ್ಟೆ ಮೌಲ್ಯ 2,186.53 ಕೋಟಿ ರೂಪಾಯಿ ಇಂದ 4,73,584.52 ಕೋಟಿ ರೂಪಾಯಿಗೆ ತಲುಪಿದೆ.
ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ
ಇನ್ನು ಹಿಂದೂಸ್ತಾನ್ ಯೂನಿಲಿವರ್ ಮಾರುಕಟ್ಟೆ ಮೌಲ್ಯ ಮತ್ತೆ ಈ ವಾರವು ಕುಸಿದಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು 1,668.21 ಕೋಟಿ ರೂಪಾಯಿ ಇಂದ 6,21,220.18 ಕೋಟಿ ರು ಗೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಹಿಂದಿನ ಮಾರುಕಟ್ಟೆ ಮೌಲ್ಯ 4,390.73 ಕೋಟಿ ರೂಪಾಯಿ ಕಳೆದುಕೊಂಡು 7,92,860.45 ಕೋಟಿ ರೂಪಾಯಿ ತಲುಪಿದೆ. ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ 4,599.68 ಕೋಟಿ ರೂಪಾಯಿ ಇಳಿಕೆಯಾಗಿ 4,27,079.97 ಕೋಟಿ ರು ಗೆ ತಲುಪಿದೆ.
ಟಾಪ್ 10 ಕಂಪನಿಗಳು
ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿಕೊಂಡಿದೆ. ಅದರ ಬಳಿಕ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಎಲ್‌ಐಸಿ ಹಾಗೂ ಎಚ್‌ಡಿಎಫ್‌ಸಿ ಪ್ರಮುಖ ಟಾಪ್ 10 ಕಂಪನಿಗಳು ಆಗಿದೆ.


Click it and Unblock the Notifications