ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಜುಲೈ 10 ತನಕ) ಎರಡು ಕಂಪನಿಗಳ ಮೌಲ್ಯ ಕುಸಿತವಾಗಿದೆ, ಒಟ್ಟಾರೆ ಮಾರುಕಟ್ಟೆ ಚೇತರಿಕೆ ಕಂಡಿದೆ.
ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ 8 ಕಂಪನಿಗಳಿಂದ ಒಟ್ಟಾರೆ 1,81,209.89 ಕೋಟಿ ರು ಮೌಲ್ಯ ಹಚ್ಚಳವಾಗಿದೆ. ದೇಶದ ಅತಿ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಷ್ಟ ಅನುಭವಿಸಿವೆ. ಹಿಂದೂಸ್ತಾನ್ ಯೂನಿಲಿವರ್ ಹೆಚ್ಚು ಲಾಭ ಮಾಡಿದೆ.
ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ ಕುರಿತ, ಆಮದು -ರಫ್ತು ನಿರ್ಬಂಧ, ಜಿಎಸ್ಟಿ ಸಭೆ, ಸಮ್ಮೇಳನ ನಂತರ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ಎರಡು ವಾರಗಳಿಂದ ರಿಲಯನ್ಸ್ ಸಂಸ್ಥೆ ಭಾರಿ ನಷ್ಟ ಮುಂದುವರೆದಿದೆ.
ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್1,573.91ಪಾಯಿಂಟ್‌ಗಳು ಅಥವಾ ಶೇಕಡಾ 2.97ಏರಿಕೆ ಕಂಡಿತ್ತು. ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..
ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ
ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 50,058.05 ಕೋಟಿ ರು ಹೆಚ್ಚಳ ಕಂಡು 5,86,422.74 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕು 35,956.8 ಕೋಟಿ ರು ಏರಿಕೆ ಕಂಡು 5,25,656.96 ಕೋಟಿ ರುಗೆ ಮೌಲ್ಯಕ್ಕೇರಿದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯ 23,940.12 ಕೋಟಿ ರು ಹಿಗ್ಗಿ 7,75,832.15 ಕೋಟಿ ರು ಆಗಿದೆ. ಇದೇ ವೇಳೆ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ದ ಮೌಲ್ಯ 19,797.24 ಕೋಟಿ ರು ಏರಿಕೆಯಾಗಿ 4,47,841.46 ಕೋಟಿ ರು ತಲುಪಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 19,232.55 ಕೋಟಿ ರು ವ್ಯತ್ಯಾಸ ಕಂಡು 4,35,922.66 ಕೋಟಿ ರುಗೇರಿದೆ. ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ ಇನ್ಫೋಸಿಸ್ ಸಂಸ್ಥೆ 15,126.4 ಕೋಟಿ ರು ಹೆಚ್ಚಳ ಕಂಡು 6,37,033.78 ಕೋಟಿ ರು ಮೌಲ್ಯಕ್ಕೇರಿದೆ.
ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ 12,000.08 ಕೋಟಿ ರು ಹೆಚ್ಚಳ ಕಂಡು 3,81,833.20 ಕೋಟಿ ರು ಆಗಿದೆ. ಖಾಸಗಿ ವಲಯದ ಪ್ರಮುಖ ಹಣಕಾಸು ಸಂಸ್ಥೆ ಎಚ್ ಡಿ ಎಫ್ ಸಿ 5,098.65 ಕೋಟಿ ರು ಏರಿಕೆ ಕಂಡು 4,06,213.61 ಕೋಟಿ ರು ತಲುಪಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್
ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್18,770.93 ಕೋಟಿ ರು ಏರಿಕೆ ಕಂಡು 11,94,625.39 ಕೋಟಿ ರು ಮೌಲ್ಯಕ್ಕೇರಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 11,805.14 ಕೋಟಿ ರು ಇಳಿಕೆ ಕಂಡು 16,17,879.36 ಕೋಟಿ ರು ತಲುಪಿದೆ.
ಟಾಪ್ 10 ಕಂಪನಿಗಳು ಕಂಪನಿಗಳು
ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಎಲ್ ಐ ಸಿ, ಎಸ್ ಬಿಐ, ಎಚ್ ಡಿ ಎಫ್ ಸಿ ಹಾಗೂ ಭಾರ್ತಿ ಏರ್ ಟೆಲ್.


Click it and Unblock the Notifications