ರಾಜ್ಯದ ಜನತೆಗೆ ಕರೆಂಟ್ ಶಾಕ್! ವರ್ಷದ ಮೊದಲ ತಿಂಗಳಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಲೇ ಇದ್ದು, ಬೆಲೆ ಏರಿಕೆಯ ಬಿಸಿಯನ್ನು ಸರ್ಕಾರ ಜನರ ಮೇಲೆ ಹೊರಿಸುತ್ತಲೇ ಇದೆ. ಹೌದು ಬೆಲೆ ಏರಿಗೆ ಜನಸಾಮಾನ್ಯರನ್ನು ಸುಡುತ್ತಲೇ ಇದೆ. ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಆಯ್ತು..ಇದರ ಬಳಿಕ ಮೆಟ್ರೋ ದರ ದುಪ್ಪಟ್ಟು ಹಣ ಏರಿಕೆ ಆಯ್ತು ಇದು ಮಾತ್ರವಲ್ಲದೇ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಕುರಿತು ಕೂಡ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ವಿದ್ಯುತ್ ದರ ಏರಿಕೆಗೂ ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನುವ ಶಾಕಿಂಗ್ ವಿಷಯ ಹೊರಬಂದಿದೆ.

ಏಪ್ರಿಲ್ 1 ರಿಂದ ವಿದ್ಯುತ್ ಬಿಲ್ ಏರಿಕೆ ಸಾಧ್ಯತೆ
ಏಪ್ರಿಲ್ ನಿಂದಲೇ ರಾಜ್ಯದ ಜನತೆಗೆ ಕರೆಂಟ್ ಬಿಲ್ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.ಈಗಾಗಲೇ ರಾಜ್ಯದ ಐದು ವಿದ್ಯುತ್ ನಿಗಮಗಳಾದ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಸೇರಿದಂತೆ ಐದು ಕಂಪನಿಗಳು ವಿದ್ಯುತ್ ಪ್ರತಿ ಯುನಿಟ್ ದರ ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆನ್ನು ಸಲ್ಲಿಕೆ ಮಾಡಿದ್ದಾರೆ.
ಬೆಲೆ ಏರಿಕೆಯ ನೆಪವನ್ನು ನೀಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ಸಲ್ಲಿಸಿದ ಸುಂಕ ಹೆಚ್ಚಳ ಪ್ರಸ್ತಾವನೆಗೆ ಅನುಮೋದಿಸಿದೆ. ಪರಿಷ್ಕೃತ ದರಗಳು ಎಪ್ರಿಲ್ 1 ರಿಂದ ಜಾರಿಗೆ ಬರಲಿದ್ದು, ಈಗಾಗಲೇ ಹೆಚ್ಚಿದ ಬಸ್ ಮತ್ತು ಮೆಟ್ರೋ ದರಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಾಗಲಿದೆ.
ಪ್ರತೀ ಯುನಿಟ್‌ಗೆ 1 ರಿಂದ 1.50 ರೂಪಾಯಿ ಏರಿಕೆ ಸಾಧ್ಯತೆ
ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಇತರ ವಿದ್ಯುತ್ ವಿತರಣಾ ಕಂಪನಿಗಳ ಅಡಿಯಲ್ಲಿ ದೇಶಗಳಲ್ಲಿ ನಡೆದ ಸಾರ್ವಜನಿಕ ಸಮಾಲೋಚನೆಗಳ ಹೊರತಾಗಿಯೂ ಆಯೋಗವು ಬೆಲೆ ಏರಿಕೆಯ ಹೆಚ್ಚಳವನ್ನು ಮುಂದುವರಿಸಲು ನಿರ್ಧಾರ ಮಾಡಿದೆ. ಈಗಲೇ ವಿದ್ಯತ್‌ಗೆ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳು ಮತ್ತು ಆರ್ಥಿಕ ಸವಾಲುಗಳನ್ನು ಪರಿಗಣಿಸಿ ವಿದ್ಯುತ್ ಕಂಪನಿಗಳು ಪ್ರತಿ ಯೂನಿಟ್‌ಗೆ 1 ರಿಂದ 1.5 ರಷ್ಟು ಹೆಚ್ಚಳ ಮಾಡುವಂತೆ ಕೋರಿಕೆ ನೀಡಿದ್ದಾರೆ. ಇನ್ನೂ ವಿದ್ಯುತ್ ಬೆಲೆಯನ್ನು ಸ್ಥಿರಗೊಳಿಸಲು ESCOM ಗಳು ಮೂರು ವರ್ಷಗಳವರೆಗೆ ಒಂದು ಬಾರಿ ಸುಂಕ ಹೊಂದಾಣಿಕೆಯನ್ನು ಸಹ ಹೇಳಿ ಕೊಂಡಿದ್ದಾರೆ. ಈ ಪ್ರಸ್ತಾವನೆಯನ್ನು ಮೌಲ್ಯಮಾಪನ ಮಾಡಿ ನಂತರ, ಕೆಇಆರ್‌ಸಿ ಅಧಿಕಾರಿಗಳು ಹೆಚ್ಚಳಕ್ಕೆ ನಿರ್ಧಾರವನ್ನು ಮಾಡಿದ್ದಾರೆ. ಆದರೆ ವಿಧಾನಸಭೆ ಅಧಿವೇಶನ ಮುಗಿಯುವವರೆಗೆ ವಿದ್ಯುತ್ ದರ ಘೋಷಣೆ ವಿಳಂಬವಾಗುವ ಸಾಧ್ಯತೆಯಂತೂ ಇದ್ದೇ ಇದೆ..ಬೆಲೆ ಏರಿಕೆ ಈ ವೇಳೆಯಲ್ಲಿ ಮಾಡಿದ್ದರೆ ವಿರೋಧ ಪಕ್ಷಗಳು ಪ್ರತಿಭಟನೆ ಮಾಡಬಹುದು ಎಂದು ವಿದ್ಯುತ್ ಹೆಚ್ಚಳವನ್ನು ಮುಂದೂಡಿಕೆ ಮಾಡಲಾಗಿದೆ.
ಕಳೆದ ವರ್ಷದಲ್ಲಿ ವಿದ್ಯುತ್ ದರ ಏರಿಕೆಯನ್ನು ಕಡಿಮೆ ಮಾಡಲಾಗಿತ್ತು, ಆದರೆ ಈ ಬಾರಿ ಇದಕ್ಕಿಂತ ಹೆಚ್ಚಾಗಿ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಾದ ಉಚಿತ ಗೃಹಜ್ಯೋತಿಯಿಂದ ಖುಷಿಯಲ್ಲಿ ಇದ್ದವರಿಗೂ ಸಹ ಎಪ್ರಿಲ್ 1 ರಿಂದ ಜಾರಿಗೆ ಬರಲಿರುವ ಹೊಸ ದರಗಳ ಅನಗವಯವಾಘುವ ಸಾಧ್ಯತೆಯಂತೂ ಇದೆ.
ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಸಚಿವರ ಬೇಸರ
ಇಂಧನ ಸಚಿವ ಕೆ ಜೆ ಜಾರ್ಜ್, ರಾಜ್ಯದಲ್ಲಿ ಭಾರೀ ಪ್ರಮಾಣದ ವಿದ್ಯುತ್ ಬಿಲ್ ಬಾಕಿಯಿದೆ, ಸರಕಾರಿ ಕಚೇರಿಗಳಲ್ಲೇ ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಸಹ ಇರುವುದರಿಂದ ರಾಜ್ಯದಲ್ಲಿ ಸುಮಾರು 6 ಸಾವಿರ ಕೋಟಿಗಿಂತಲೂ ಹೆಚ್ಚು ಬಿಲ್ ಬಾಕಿಯಿದೆ ಎಂದು ಈ ಹಿಂದೆ ಭರಸವನ್ನು ಸಹ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳು ಸರ್ಕಾರದ ಮೇಲೆ ಹೊರೆ ಆಯ್ತಾ?
ಮಹಿಳೆಯರಿಗೆ ಉಚಿತ ಬಸ್ ಯೋಜನೆ ಸರ್ಕಾರಿ ಇಲಾಖೆಯನ್ನು ಸಾಲದ ಸುಳಿವಿನಲ್ಲಿ ತಳ್ಳಿದ್ದರೆ ಗೃಹಜ್ಯೋತಿ ಸಹ ಸರ್ಕಾರಕ್ಕೆ ಹೊರೆಯಾಗುತ್ತಿದ್ದೀಯಾ...? ಎಂಬ ಅನುಮಾನಗಳು ಕಾಡುತ್ತಿವೆ.


Click it and Unblock the Notifications