ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ ಕಂಪನಿ ಟ್ವಿಟ್ಟರ್‌ನ ಮಾಲೀಕರಾದರೆ ಟ್ವಿಟ್ಟರ್‌ನ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಗುರುವಾರ ಪ್ರಕಟವಾದ ವರದಿಯ ಪ್ರಕಾರ, ಟೆಸ್ಲಾ ಮುಖ್ಯಸ್ಥ, ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಟ್ವಿಟ್ಟರ್‌ನ ಮಾಲೀಕರಾದ ಬಳಿಕ ಸುಮಾರು ಶೇಕಡ 75ರಷ್ಟು ಉದ್ಯೋಗಿಗಳನ್ನು ಅಥವಾ 7,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧಾರ ಮಾಡಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.
ಇನ್ನು ಪತ್ರಿಕೆಯು ದಾಖಲೆಗಳು ಮತ್ತು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟ್ಟರ್ ಮತ್ತು ಮಸ್ಕ್ ಅಟಾರ್ನಿ ಅಲೆಕ್ಸ್ ಸ್ಪಿರೊ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನು ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡುವ ವಿಚಾರ ಬಂದಾಗಲೇ ಮಸ್ಕ್ ಉದ್ಯೋಗಿಗಳನ್ನು ಕಡಿತ ಮಾಡುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಇಷ್ಟು ಪ್ರಮಾಣದಲ್ಲಿ ಉದ್ಯೋಗಿಗಳ ಕಡಿತದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ಈ ಹಿಂದೆಯೇ ಕಂಪನಿಯ ಉದ್ಯೋಗಿಗಳ ಕಡಿತದ ಸುಳಿವು!
ಎಲಾನ್ ಮಸ್ಕ್ ಈ ಹಿಂದೆ ಕಂಪನಿಯ ಕೆಲವು ಸಿಬ್ಬಂದಿಯನ್ನು ತೆಗೆದುಹಾಕುವುದು ಅಗತ್ಯವಾಗಿದೆ ಎಂದು ಸೂಚಿಸಿದ್ದಾರೆ. ಆದರೆ ನಿರ್ದಿಷ್ಟ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಶೇಕಡ 75ರಷ್ಟು ಉದ್ಯೋಗಿಗಳ ಕಡಿತದ ಬಗ್ಗೆ ಸುದ್ದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೆಡ್‌ಬುಶ್ ವಿಶ್ಲೇಷಕ ಡಾನ್ ಐವ್ಸ್, "ಕಂಪನಿಯಲ್ಲಿ ಶೇಕಡ 75ರಷ್ಟು ಉದ್ಯೋಗಿಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ. ಇದು ಲಾಭದಾಯಕತೆಯನ್ನು ಸೂಚಿಸುತ್ತದೆ. ಒಪ್ಪಂದದಲ್ಲಿ ತೊಡಗಿಸಿಕೊಳ್ಳಲು ಹೂಡಿಕೆದಾರರಿಗೆ ಇದು ಆಕರ್ಷಕ ಡೀಲ್ ಆಗಿದೆ. ನೀವು ಬೆಳವಣಿಗೆಯ ಹಾದಿಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ," ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ಟಿಟ್ಟರ್‌ನ ಉದ್ಯೋಗಿಗಳಲ್ಲಿ ಇಂತಹ ತೀವ್ರ ಕಡಿತದ ಬಗ್ಗೆ ವರ್ಷಗಳ ಹಿಂದೆ ಮಾತುಕತೆ ನಡೆಸಿದ್ದಾರೆ. ಉದ್ಯೋಗಿಗಳಿಂದ ಕಡಿತ ಮಾಡಿದರೆ ಟ್ವಿಟ್ಟರ್ ಮತ್ತು ಅದರ ಬಳಕೆದಾರರಿಗೆ ಹಾನಿಯಾಗಬಹುದು ಎಂದು ಎಚ್ಚರಿಕೆಯನ್ನು ಕೂಡಾ ತಜ್ಞರು ನೀಡಿದ್ದಾರೆ.
ಈ ರೀತಿ ತೀವ್ರ ಉದ್ಯೋಗಿಗಳ ಕಡಿತ ಮಾಡಿ ಪ್ಲಾಟ್‌ಫಾರ್ಮ್‌ನಲ್ಲಿ ಹಾನಿಕಾರಕ ವಿಷಯ ಹಾಗೂ ಸ್ಪ್ಯಾಮ್‌ಗಳು ಅತೀ ಹೆಚ್ಚಾಗುವುದನ್ನು ತಡೆಯುವ ನಿರ್ಧಾರವನ್ನು ಕಂಪನಿಯು ಮಾಡುತ್ತಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications