For Quick Alerts
ALLOW NOTIFICATIONS  
For Daily Alerts

ಟ್ವಿಟ್ಟರ್ ವರ್ಕ್ ಫೋರ್ಸ್ ಅರ್ಧದಷ್ಟು ಕಡಿತ ಮಾಡ್ತಾರಾ ಮಸ್ಕ್?

|

ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟ್ಟರ್‌ ಅನ್ನು ತನ್ನ ಮಾಲೀಕತ್ವಕ್ಕೆ ತೆಗೆದುಕೊಂಡ ಬಳಿಕ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವ ಬಗ್ಗೆ ಈ ಹಿಂದೆ ಚರ್ಚೆಗಳು ನಡೆದಿದೆ. ಹಾಗೆಯೇ ಪ್ರಸ್ತುತ ಮಸ್ಕ್ ಬದಲಾವಣೆ ಹಾದಿಯನ್ನು ತುಳಿದಿದ್ದಾರೆ. ಈ ಹಿಂದೆ ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿರುವ ಉದ್ಯೋಗಿಗಳನ್ನು ತೆಗೆದುಹಾಕುತ್ತಾರೆ ಎಂಬ ಬಗ್ಗೆ ಚರ್ಚೆಯಾಗಿತ್ತು. ಈಗ ಮಸ್ಕ್ ಟ್ವಿಟ್ಟರ್‌ನ ವರ್ಕ್‌ಫೋರ್ಸ್‌ ಅನ್ನು ಅರ್ಧದಷ್ಟು ಕಡಿತ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಮಸ್ಕ್ ಟ್ವಿಟ್ಟರ್‌ನಲ್ಲಿನ ಶೇಕಡ 75ರಷ್ಟು ಉದ್ಯೋಗಿಗಳನ್ನು ತೆಗೆದುಹಾಕುತ್ತಾರೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಮಸ್ಕ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಈಗ ಮಸ್ಕ್ ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದುಹಾಕುವ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಟ್ವಿಟ್ಟರ್ ಬ್ಲೂ ಟಿಕ್‌ಗೆ 20 ಅಲ್ಲ, 8 ಡಾಲರ್? ಬೆಲೆ ಇಳಿಸುವ ಇರಾದೆಯಲ್ಲಿ ಮಸ್ಕ್ಟ್ವಿಟ್ಟರ್ ಬ್ಲೂ ಟಿಕ್‌ಗೆ 20 ಅಲ್ಲ, 8 ಡಾಲರ್? ಬೆಲೆ ಇಳಿಸುವ ಇರಾದೆಯಲ್ಲಿ ಮಸ್ಕ್

ಸುಮಾರು 3,700 ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಲು ಅಂದರೆ ಸರಿಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದುಹಾಕಲು ವಿಶ್ವದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಂಭ ಹೆಗ್ಗಳಿಕೆಗೆ ಪಾತ್ರವಾಗಿರುವ ಎಲಾನ್ ಮಸ್ಕ್ ನಿರ್ಧಾರ ಮಾಡಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ. ಹಾಗೆಯೇ ಈ ಬಗ್ಗೆ ಟ್ವಿಟ್ಟರ್ ಮಾಲೀಕ ತನ್ನ ಉದ್ಯೋಗಿಗಳಿಗೆ ಶುಕ್ರವಾರದಂದು ಮಾಹಿತಿ ನೀಡಲಿದ್ದಾರೆ ಎಂದು ಬ್ಲ್ಯೂಬರ್ಗ್ ವರದಿ ಮಾಡಿದೆ.

 ಟ್ವಿಟ್ಟರ್ ವರ್ಕ್ ಫೋರ್ಸ್ ಅರ್ಧದಷ್ಟು ಕಡಿತ ಮಾಡ್ತಾರಾ ಮಸ್ಕ್?

ಉದ್ಯೋಗಿಗಳ ನಿಯಮದಲ್ಲಿ ಬದಲಾವಣೆ?

ಇನ್ನು ಎಲಾನ್ ಮಸ್ಕ್‌ ಟ್ವಿಟ್ಟರ್‌ನಲ್ಲಿ ಉದ್ಯೋಗಿಗಳ ನಿಯಮದಲ್ಲಿ ಬದಲಾವಣೆ ಮಾಡಲು ಕೂಡಾ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಮಸ್ಕ್ ಈ ಹಿಂದೆ ಒಂದು ಬಾರಿ ನವೆಂಬರ್ 1ಕ್ಕೂ ಮುನ್ನವೇ ಉದ್ಯೋಗಿಗಳ ಕಡಿತ ಮಾಡುತ್ತಾರೆ ಎಂಬ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ ಉದ್ಯೋಗಿಗಳ ಕಡಿತ ಮಾಡುವುದಿಲ್ಲ ಎಂದು ತಿಳಿಸಿಲ್ಲ.

ಟ್ವಿಟ್ಟರ್ ವರ್ಕ್ ಫೋರ್ಸ್ ಶೇ.75ರಷ್ಟು ಕಡಿತಗೊಳಿಸಲು ಮಸ್ಕ್ ಚಿಂತನೆ!ಟ್ವಿಟ್ಟರ್ ವರ್ಕ್ ಫೋರ್ಸ್ ಶೇ.75ರಷ್ಟು ಕಡಿತಗೊಳಿಸಲು ಮಸ್ಕ್ ಚಿಂತನೆ!

ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೆಡ್‌ಬುಶ್ ವಿಶ್ಲೇಷಕ ಡಾನ್ ಐವ್ಸ್, "ಕಂಪನಿಯಲ್ಲಿ ಶೇಕಡ 75ರಷ್ಟು ಉದ್ಯೋಗಿಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ. ಇದು ಲಾಭದಾಯಕತೆಯನ್ನು ಸೂಚಿಸುತ್ತದೆ. ಒಪ್ಪಂದದಲ್ಲಿ ತೊಡಗಿಸಿಕೊಳ್ಳಲು ಹೂಡಿಕೆದಾರರಿಗೆ ಇದು ಆಕರ್ಷಕ ಡೀಲ್ ಆಗಿದೆ. ನೀವು ಬೆಳವಣಿಗೆಯ ಹಾದಿಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ," ಎಂದು ಅಭಿಪ್ರಾಯಪಟ್ಟಿದ್ದರು.

ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಟ್ಟಿಟ್ಟರ್‌ನ ಉದ್ಯೋಗಿಗಳಲ್ಲಿ ಇಂತಹ ತೀವ್ರ ಕಡಿತದ ಬಗ್ಗೆ ವರ್ಷಗಳ ಹಿಂದೆ ಮಾತುಕತೆ ನಡೆಸಿದ್ದಾರೆ. ಉದ್ಯೋಗಿಗಳಿಂದ ಕಡಿತ ಮಾಡಿದರೆ ಟ್ವಿಟ್ಟರ್ ಮತ್ತು ಅದರ ಬಳಕೆದಾರರಿಗೆ ಹಾನಿಯಾಗಬಹುದು ಎಂದು ಎಚ್ಚರಿಕೆಯನ್ನು ಕೂಡಾ ತಜ್ಞರು ನೀಡಿದ್ದಾರೆ.

English summary

Elon Musk Plans to Cut Half of Twitter Workforce

Elon Musk plans to lay off most of Twitter's workforce if and when he becomes owner of the social media company.
Story first published: Thursday, November 3, 2022, 12:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X