ವರ್ಕರ್ಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್‌ನ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸೆಂಟ್ರಲ್ ಬೋರ್ಡ್ ಟ್ರಸ್ಟಿಗಳ ಸಭೆಯು ಮಾರ್ಚ್ 25, ಮಾರ್ಚ್ 26ರಂದು ನಡೆಯಲಿದೆ. ಈ ಸಭೆಯಲ್ಲಿ 2022-2023 ವರ್ಷದ ಪಿಎಫ್ ಡೆಪಾಸಿಟ್‌ನ ಬಡ್ಡಿದರವನ್ನು ನಿರ್ಧಾರ ಮಾಡಲಿದೆ. ಪ್ರಸ್ತುತ ಹಣಕಾಸು ವರ್ಷದ ಬಡ್ಡಿದರವನ್ನು ಇಪಿಎಫ್‌ಒ ನಿರ್ಧಾರ ಮಾಡಿದಂತೆ ಇರಲಿದೆ. ಗಳಿಕೆಯನ್ನು ಇದುವೇ ನಿರ್ಧಾರ ಮಾಡಲಿದೆ. ಈ ಬಡ್ಡಿದರವು ಶೇಕಡ 8ರಷ್ಟು ಆಗಿರಲಿದೆ.
ಸಂಶೋಧನೆಯ ಪ್ರಕಾರ ನಿವೃತ್ತಿ ಸಂಸ್ಥೆಯು ಹೂಡಿಕೆಗೆ ರಿಟರ್ನ್ ಅನ್ನು ನೀಡುತ್ತದೆ. ಅಧ್ಯಯನದ ಪ್ರಕಾರ, ಕೋವಿಡ್‌ನಿಂದಾಗಿ ಇಪಿಎಫ್ ಮೊತ್ತದ ವಿತ್‌ಡ್ರಾ ಪ್ರಮಾಣವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ನಿವೃತ್ತಿ ಸಂಸ್ಥೆಯ ಹೂಡಿಕೆ ಆದಾಯವು ಈ ವರ್ಷ ಪ್ರಬಲವಾಗಿದೆ. ವರದಿಯಲ್ಲಿ ಉಲ್ಲೇಖ ಮಾಡಿರುವಂತೆ ಇಕ್ವಿಟಿ ಹೂಡಿಕೆಗಳ ಮೇಲಿನ ಆಧಾರದ ಮೇಲೆ ಇಪಿಎಫ್‌ಒ ಅಸ್ತಿತ್ವದಲ್ಲಿರುವ ಬಡ್ಡಿದರವನ್ನು ಶೇಕಡ 8.1ಕ್ಕೆ ನಿಗದಿಪಡಿಸಬಹುದು ಅಥವಾ ಶೇಕಡ 8ಕ್ಕೆ ಇಳಿಸಬಹುದು.

ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ
ಈ ವರ್ಷ ಪ್ರಮುಖ ರಾಜ್ಯ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗಳು ನಡೆಯಲಿದೆ. ಇದರಿಂದಾಗಿ ಕೇಂದ್ರ ಸರ್ಕಾರವು ಇಪಿಎಫ್‌ಒ ಬಡ್ಡಿದರಗಳಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 2021-22ರ ಬಡ್ಡಿದರವು, ಇಪಿಎಫ್‌ಒ 8.1 ಪ್ರತಿಶತಕ್ಕೆ ನಿಗದಿಪಡಿಸಲಾಗಿದೆ. ಇದು ನಾಲ್ಕು ದಶಕಗಳಲ್ಲಿ ತೀರಾ ಕಡಿಮೆಯಾಗಿದೆ.
ಇಪಿಎಫ್‌ಒ 2015-16 ರಲ್ಲಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದೆ. ಮೊದಲ ವರ್ಷದಲ್ಲಿ ಅದರ ಹೆಚ್ಚುವರಿ ಕಾರ್ಪಸ್‌ನ ಶೇಕಡ 5ರಷ್ಟು, ಎರಡನೇ ವರ್ಷದಲ್ಲಿ ಶೇಕಡ 10ರಷ್ಟಿದೆ. ನಂತರದ ವರ್ಷಗಳಲ್ಲಿ ಶೇಕಡ 15ರಷ್ಟು ನಿಗದಿಪಡಿಸಿತ್ತು. ಸರ್ಕಾರಿ ದಾಖಲೆಗಳ ಪ್ರಕಾರ, ಇಪಿಎಫ್‌ಒ ಒಟ್ಟು 1.7 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದೆ, ಈ ಪೈಕಿ ಮಾರ್ಚ್ 31, 2022 ರ ಪ್ರಕಾರವಾಗಿ 22,000 ಕೋಟಿ ರೂಪಾಯಿಯನ್ನು ರಿಡೀಮ್ ಮಾಡಲಾಗಿದೆ.
ಇನ್ನು ಮುಖ್ಯವಾಗಿ ಇಪಿಎಫ್‌ಒ ನಿಫ್ಟಿ ಮತ್ತು ಸೆನ್ಸೆಕ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳನ್ನು (ಇಟಿಎಫ್‌ಗಳು) ಈಕ್ವಿಟಿಯಲ್ಲಿ ತನ್ನ ಹೆಚ್ಚುವರಿ ಕಾರ್ಪಸ್ 1.5 ಲಕ್ಷ ಕೋಟಿ ಹೂಡಿಕೆ ಮಾಡಲು ಬಳಸುತ್ತದೆ.
ಈ ಹಿಂದೆ ಬಡ್ಡಿದರ ಇಳಿಸಿದ್ದ ಇಪಿಎಫ್‌ಒ
ಇಪಿಎಫ್‌ಒ 2021-22ರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಸುಮಾರು ಐದು ಕೋಟಿ ಚಂದಾದಾರರಿಗೆ ಸುಮಾರು ನಾಲ್ಕು ದಶಕಗಳ ಕನಿಷ್ಠ ಶೇಕಡ 8.1 ಕ್ಕೆ ಇಳಿಸಲು ಇಪಿಎಫ್‌ಒ ನಿರ್ಧಾರ ಮಾಡಿದೆ. ಮೂಲಗಳ ಪ್ರಕಾರ ಇದು ನಾಲ್ಕು ದಶಕಗಳ ಬಳಿಕ ತೀರಾ ಕಡಿಮೆಯಾದ ಬಡ್ಡಿದರವಾಗಿದೆ. ಈ ಬಡ್ಡಿದರ 1977-78 ರ ನಂತರದ ಅತ್ಯಂತ ಕಡಿಮೆ ದರವಾಗಿದೆ. ಆಗ ಇಪಿಎಫ್ ಬಡ್ಡಿದರವು 8 ಶೇಕಡ ಆಗಿತ್ತು.


Click it and Unblock the Notifications