ಅಧಿಕ ಪಿಂಚಣಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿರುವ ಬಗ್ಗೆ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್‌ಒ) ಸಂಸ್ಥೆಯ ಎಲ್ಲ ಸದಸ್ಯರು ಗಮನಿಸಬೇಕು. ಅದರಂತೆ ಅರ್ಹ ಸದಸ್ಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಭವಿಷ್ಯ ನಿಧಿ ಸಂಸ್ಥೆಯ ಎಲ್ಲ ಅರ್ಹ ಸದಸ್ಯರು ಅಧಿಕ ಪಿಂಚಣಿಗಾಗಿ ಈಗ ಉದ್ಯೋಗದಾತರೊಂದಿಗೆ ಜಂಟಿಯಾಗಿ ಆಯ್ಕೆ ಮಾಡಿಕೊಂಡು 2023ರ ಮೇ 3ರವರೆಗೆ ಅರ್ಜಿ ಸಲ್ಲಿಸಬಹುದೆಂದು ಇಪಿಎಫ್‌ಒ ಸೋಮವಾರ ಘೋಷಿಸಿದೆ.
ಈ ಹಿಂದೆ ಅಧಿಕ ಪಿಂಚಣಿಗಾಗಿ 2023ರ ಮಾ.3 ಕೊನೆಯ ದಿನವೆಂದು ಊಹಿಸಲಾಗಿತ್ತು. ಸುಪ್ರೀಂಕೋರ್ಟ್ ಕಳೆದ ನ.4ರಂದು ಅಧಿಕ ಪಿಂಚಣಿಗೆ ಆಯ್ಕೆ ಮಾಡಲು ಎಲ್ಲ ಅರ್ಹ ಸದಸ್ಯರಿಗೆ 4 ತಿಂಗಳ ಕಾಲಾವಕಾಶ ನೀಡುವಂತೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಇಪಿಎಫ್‌ಒನಿಂದ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ವಿಂಡೋವನ್ನು ಮಾ.3ರಂದು ಮುಚ್ಚಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.

ಇಪಿಎಫ್‌ಒ ಪ್ಲಾಟ್‌ಫಾರಂನಲ್ಲಿ ಆಕ್ಟಿವೇಟ್ ಮಾಡಿರುವ ಯುಆರ್‌ಎಲ್ ಪ್ರಕಾರ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಳ್ಳುವ ಗಡುವನ್ನು ಮೇ 2ವರೆಗೆ ವಿಸ್ತರಿಸಲಾಗಿದೆ ಹಾಗೂ ಅದರ ಈ ವಿಂಡೋ ಎರಡು ತಿಂಗಳ ಬಳಿಕ ಮುಚ್ಚಲ್ಪಡುತ್ತದೆ.
ಇಪಿಎಫ್‌ಒ ಅಧಿಕ ಪಿಂಚಣಿ ಯೋಜನೆ: ಅರ್ಹತಾ ಮಾನದಂಡಗಳು
* ರೂ. 5000 ಅಥವಾ 6500 ರೂ. ವೇತನದ ಮಿತಿಯನ್ನು ಮೀರಿದ ಸಂಬಳದ ಮೇಲೆ ಕೊಡುಗೆ ನೀಡಿದ ಉದ್ಯೋಗಿಗಳು ಹಾಗೂ ಉದ್ಯೋಗದಾತರು.
* ಇಪಿಎಸ್ ಸದಸ್ಯರಾಗಿದ್ದಾಗ ಹಿಂದಿನ ವಿಂಡೋದಲ್ಲಿ ಜಂಟಿ ಆಯ್ಕೆಯನ್ನು ತೆಗೆದುಕೊಳ್ಳದ ಉದ್ಯೋಗಿಗಳು ಹಾಗೂ ಉದ್ಯೋಗದಾತರು.
* 2014ರ ಸೆ.1ರ ಮೊದಲು ಸದಸ್ಯರಾಗಿದ್ದ ಮತ್ತು ಆ ದಿನಾಂಕದ ನಂತರವೂ ಸದಸ್ಯರಾಗಿ ಮುಂದುವರಿದಿರುವ ಉದ್ಯೋಗಿಗಳು.
ಈ ಅರ್ಹತಾ ಮಾನದಂಡದಡಿಯಲ್ಲಿ ಬರುವ ಎಲ್ಲರೂ ತಮ್ಮ ಉದ್ಯೋಗದಾತರೊಂದಿಗೆ ಜಂಟಿಯಾಗಿ ಇಪಿಎಫ್‌ಒ ಅಧಿಕ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಹಾಗೂ ಜಂಟಿ ಘೋಷಣೆಯನ್ನು ಸಲ್ಲಿಸಬೇಕು ಎಂಬುದನ್ನು ಗಮನಿಸಬೇಕು. ಇಪಿಎಸ್ ಸದಸ್ಯರು ತಮ್ಮ ಮೂಲ ವೇತನದ ಶೇ8.33ರಷ್ಟರವರೆಗೆ ಕೊಡುಗೆ ನೀಡಲು ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಇಪಿಎಫ್‌ಒ ಹೊರಡಿಸಿರುವ ಅಧಿಸೂಚನೆಯು "ಬಾಕಿಯಿರುವ ಕೊಡುಗೆಯನ್ನು ಪಾವತಿಯ ದಿನಾಂಕದವರೆಗಿನ ಬಡ್ಡಿಯೊಂದಿಗೆ ನಿಗದಿತ ಅವಧಿಯೊಳಗೆ ಠೇವಣಿ ಮಾಡಲಾಗುತ್ತದೆ" ಎಂದು ಹೇಳಿದೆ.


Click it and Unblock the Notifications