ಫೋನ್ ಮಾಡಿದರೆ ಬೆಂಗಳೂರಲ್ಲಿ ಮನೆ ಬಾಗಿಲಿಗೆ ಬರಲಿವೆ ದಿನಸಿ, ಅಗತ್ಯ ವಸ್ತುಗಳು

ಅಗತ್ಯ ವಸ್ತು ಹಾಗೂ ದಿನಸಿಗಳನ್ನು ಮನೆಗೆ ತಲುಪಿಸುವ ಹೆಲ್ಪ್ ಲೈನ್ ಸೇವೆಯನ್ನು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರಂಭಿಸಿದ್ದಾರೆ. ಕೊರೊನಾ ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿ ಇರಲಿ ಎಂಬ ಕಾರಣಕ್ಕೆ ಈ ಸೇವೆಯನ್ನು ಆರಂಭ ಮಾಡಲಾಗಿದೆ.

ಕರೆ ಮತ್ತು ವಾಟ್ಸಾಪ್ ಮೂಲಕ ಈ ಹೆಲ್ಪ್ ಲೈನ್ ಕಾರ್ಯ ನಿರ್ವಹಿಸಲಿದೆ. ಗ್ರಾಹಕರು ತಮಗೆ ಬೇಕಾದ ದಿನಸಿ ಪಟ್ಟಿಯನ್ನು ಸಂಖ್ಯೆ 08061914960ಗೆ ಕಳುಹಿಸಬೇಕು. ಖಾಸಗಿ ಸಂಸ್ಥೆಗಳಿಂದ 5000 ಡೆಲಿವರಿ ಏಜೆಂಟ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಅವರು ಮನೆ ಮನೆಗೆ ತಲುಪಿಸಲಿದ್ದಾರೆ. "ಈ ಪ್ರಯತ್ನದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಗೆ ಬಾರದಂತೆ ತಡೆಯಲು ಸಾಧ್ಯವಾಗುತ್ತದೆ. ರಸ್ತೆಗೆ ಬಾರದೆ ಜನರು ಮನೆಯಲ್ಲೇ ಇರಬೇಕು" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಸೇವೆಯನ್ನು ಆರಂಭಿಸಿದೆ. ಆರ್ಡರ್ ಮಾಡಲು ಬಯಸುವವರು ಈ ಹಂತಗಗಳನ್ನು ಅನುಸರಿಸಬೇಕು.

* 08061914960 ಸಂಖ್ಯೆಯನ್ನು ಮೊದಲಿಗೆ ಸೇವ್ ಮಾಡಿಕೊಳ್ಳಬೇಕು

* Hi ಎಂಬ ಮೆಸೇಜ್ ಈ ಸಂಖ್ಯೆಗೆ ಕಳಿಸಬೇಕು

* ನೀವಿರುವ ಸ್ಥಳ/ವಿಳಾಸ ಹಂಚಿಕೊಳ್ಳಬೇಕು

* ಸೂಚನೆ ಅನುಸರಿಸಲು ತಿಳಿಸಲಾಗುತ್ತದೆ: A ಟೈಪ್ ಮಾಡಿದರೆ ದಿನಸಿ ಅಥವಾ ತರಕಾರಿ ಅಥವಾ B ಟೈಪ್ ಮಾಡಿದರೆ ಔಷಧ ಬೇಕು ಎಂಬ ಮನವಿ ಆಗಿರುತ್ತದೆ.

* ನಿಮಗೆ ಬೇಕಾದ ಪದಾರ್ಥಗಳ ಟೈಪ್ ಮಾಡಬಹುದು ಅಥವಾ ಬೇಕಾದ ದಿನಸಿಗಳ ಪಟ್ಟಿಯ ಪಿಕ್ಚರ್ ಕಳುಹಿಸಬೇಕು.

ಫೋನ್ ಮಾಡಿದರೆ ಬೆಂಗಳೂರಲ್ಲಿ ಮನೆ ಬಾಗಿಲಿಗೆ ದಿನಸಿ, ಅಗತ್ಯ ವಸ್ತುಗಳು

* ಪಟ್ಟಿ ಕಳುಹಿಸಿದ ಮೇಲೆ ಆರ್ಡರ್ ತೆಗೆದುಕೊಳ್ಳಲಾಗುತ್ತದೆ.

* ವ್ಯವಹಾರದ ಐಡಿ ಜತೆಗೆ ಆರ್ಡರ್ ಪಡೆದಿರುವುದಕ್ಕೆ ಖಾತ್ರಿ ಎಸ್ಸೆಮ್ಮೆಸ್ ಕಳುಹಿಸಲಾಗುತ್ತದೆ.

* ನಿರ್ದಿಷ್ಟ ಅವಧಿಯಲ್ಲಿ ಡೆಲಿವರಿ ಪಾರ್ಟ್ನರ್ ಮನೆಗೆ ತಲುಪಿಸಲಾಗುತ್ತದೆ.

* ಆರ್ಡರ್ ಮಾಡಿದ ವಸ್ತುಗಳ ಬೆಲೆ ಜತೆಗೆ ಹೆಚ್ಚುವರಿ 10 ರುಪಾಯಿ ಡೆಲಿವರಿ ಫೀ ಪಾವತಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+