ಪ್ರತೀ ಹಬ್ಬದ ವೇಳೆ, ಲಾಂಗ್ ವೀಕೆಂಡ್ ಸಮಯದಲ್ಲಿ ಪ್ರಯಾಣಿಕರನ್ನು ಕಾಡುವ ದೊಡ್ಡ ಚಿಂತೆ, ತಮ್ಮತಮ್ಮ ಊರಿಗೆ ಹೋಗಲು ಬಸ್ ದರ ಎರಡು ಪಟ್ಟೋ, ಮೂರು ಪಟ್ಟೋ ಹೆಚ್ಚು ಕೊಟ್ಟು ಪ್ರಯಾಣಿಸಬೇಕಾದಂತಹ ಪರಿಸ್ಥಿತಿ. ಅಷ್ಟು ಕೊಟ್ಟರೂ, ಟಿಕೆಟ್ ಸಿಗುತ್ತೆ ಎನ್ನುವ ಖಾತ್ರಿ ಇರುವುದಿಲ್ಲ.
ಖಾಸಗಿ ಬಸ್ಸುಗಳಿಂದ ಆರಂಭವಾದ ಈ ಹಗಲು ದರೋಡೆ, ಈಗ ರಾಜ್ಯ ಸಾರಿಗೆ ಸಂಸ್ಥೆಯ ವಿಶೇಷ ಬಸ್ಸುಗಳಲ್ಲೂ ಇದೇ ಪರಿಸ್ಥಿತಿ. ಈಗಂತೂ, ಶಕ್ತಿ ಯೋಜನೆಯಿಂದ ಸಿಕ್ಕಾಪಟ್ಟೆ ಲಾಸ್ ಆಗಿದೆ ಎಂದು ಖಾಸಗಿ ಬಸ್ ಮಾಲೀಕರು ಫಿಕ್ಸ್ ಮಾಡಿದ್ದೇ ರೇಟು. RTO ಅಧಿಕಾರಿಗಳು ಕಾಟಾಚಾರಕ್ಕೆ ವಾರ್ನಿಂಗ್ ಕೊಟ್ಟು ಸುಮ್ಮನಾಗಿದ್ದಾರೆ.

ಹಬ್ಬಗಳು ಬಂತು ಅಂದರೆ ಸಾಕು ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳೋಕೆ ಕಾತುರರಾಗಿರುತ್ತಾರೆ. ವರ್ಷಕ್ಕೊಮ್ಮೆ ಬರೋ ಹಬ್ಬಕ್ಕಾದರೂ ಊರಿಗೆ ಹೋಗೋಣ ಅಂತಾ ಜನರು ಸಜ್ಜಾಗುತ್ತಿದ್ದಾರೆ. ಇದನ್ನೇ ಖಾಸಗಿ ಬಸ್ ಮಾಲೀಕರು ಬಂಡವಾಳ ಮಾಡಿಕೊಂಡು ಎಕ್ಕಾಮಕ್ಕಾ ದುಡ್ಡು ಪೀಕುತ್ತಿದ್ದಾರೆ.
ರಾಜ್ಯದ ವಿವಿದೆಡೆ ಒಂದೊಂದು ದಿನ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಕೆಲವೊಂದು ಕಡೆ ಸೋಮವಾರ ಇನ್ನು ಕರಾವಳಿ ಭಾಗದಲ್ಲಿ ಮಂಗಳವಾರ (ಸೆ 19) ಆಚರಿಸಲಾಗುತ್ತಿದೆ. ವಾರಾಂತ್ಯಕ್ಕೆ ಹೊಂದಿಕೊಂಡು ಹಬ್ಬ ಬಂದಿರುವುದರಿಂದ ಇಂದಿನಿಂದಲೇ (ಸೆ 15) ಬಸ್ ದರವನ್ನು ಏರಿಸಲಾಗಿದೆ.
ಬಸ್ ದರ ಏರಿಕೆಯಾಗಿದ್ದು ಒಂದು ಕಡೆಯಾದರೆ, ಇನ್ನೊಂದು ಖಾಸಗಿ ಬಸ್ಸುಗಳು ತುಂಬಿ ತುಳುಕುತ್ತಿವೆ. ಒನ್ ಟು ಡಬಲ್ ಕೊಟ್ಟರೂ ಟಿಕೆಟ್ ಸಿಗುತ್ತಿಲ್ಲ, ಸಿಕ್ಕರೂ ಲಾಸ್ಟ್ ಸೀಟ್. ಉದಾಹರಣೆಗೆ ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯದ ದಿನಗಳಲ್ಲಿ ಸಾವಿರ ರೂಪಾಯಿ ಇದ್ದರೆ, ವಾರಾಂತ್ಯದಲ್ಲಿ ಡಬಲ್ ಇದೆ. ಹಬ್ಬಕ್ಕೆ ಖಾಸಗಿ ಬಸ್ ದರ ಹೀಗಿದೆ (ರೆಡ್ ಬಸ್ ಮಾಹಿತಿಯ ಪ್ರಕಾರ)
ಸಾಮಾನ್ಯ ದಿನದ ದರ
ಬೆಂಗಳೂರು-ಮಂಗಳೂರು: 700 ರಿಂದ 800 ರೂ.
ಬೆಂಗಳೂರು-ಉಡುಪಿ: 880 - 1,050 ರೂ.
ಬೆಂಗಳೂರು-ಬಳ್ಳಾರಿ: 900 ರಿಂದ 1,050 ರೂ.
ಬೆಂಗಳೂರು-ಬೆಳಗಾವಿ : 900 ರಿಂದ 1,050 ರೂ.
ಬೆಂಗಳೂರು-ರಾಯಚೂರು: 850 ರಿಂದ 1,110 ರೂ.
ಹಬ್ಬದ ದಿನದ ದರ
ಬೆಂಗಳೂರು-ಮಂಗಳೂರು : 1,300 ರಿಂದ 2,500 ರೂ.
ಬೆಂಗಳೂರು-ಉಡುಪಿ: 1,500 ರಿಂದ 2,500 ರೂ.
ಬೆಂಗಳೂರು-ಬಳ್ಳಾರಿ: 1,000 ರಿಂದ 1,500 ರೂ.
ಬೆಂಗಳೂರು-ಬೆಳಗಾವಿ: 1600 ರಿಂದ 3,000 ರೂ.
ಬೆಂಗಳೂರು-ರಾಯಚೂರು: 850 ರಿಂದ 1,500 ರೂ.


Click it and Unblock the Notifications