ಮಹೀಂದ್ರಾ & ಮಹೀಂದ್ರಾ (ಎಂ&ಎಂ) ಮಾಜಿ ಚೇರ್‌ಮನ್ ಕೇಶುಬ್ ಮಹೀಂದ್ರಾ ಏಪ್ರಿಲ್ 12ರಂದು ಇಹಲೋಹ ತ್ಯಜಿಸಿದ್ದಾರೆ. 99ನೇ ವಯಸ್ಸಿನ ಕೇಶುಬ್ ಮಹೀಂದ್ರಾ ನಿಧನದ ಬಗ್ಗೆ ಇನ್‌ಸ್ಪೇಸ್ ಚೇರ್‌ಮನ್ ಪವನ್ ಕೆ ಗೆಯೋಂಕಾ ಟ್ವಿಟ್ಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೇಶುಬ್ ಮಹೀಂದ್ರಾ ತನ್ನ ತಂದೆಯ ಸಂಸ್ಥೆಯನ್ನು 1947ರಲ್ಲಿ ಸೇರ್ಪಡೆಯಾಗಿದ್ದಾರೆ. ಯುಟಿಲಿಟಿ ವಾಹನಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಸಂಸ್ಥೆ ಕೇಶುಬ್ ಮಹೀಂದ್ರಾರ ತಂದೆಯದ್ದಾಗಿದೆ.
ಕೇಶುಬ್ ಮಹೀಂದ್ರಾ 1963 ರಿಂದ 2012 ರವರೆಗೆ ಮುಂಬೈ-ಪಟ್ಟಿ ಮಾಡಲಾದ ಸಂಘಟಿತ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಹಾಗೆಯೇ ತನ್ನ ನಿವೃತ್ತಿಯ ನಂತರ, ಸೋದರಳಿಯ ಆನಂದ್ ಮಹೀಂದ್ರ ತಮ್ಮ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್‌ನ ಪದವೀಧರರಾದ ಕೇಶುಬ್ ಮಹೀಂದ್ರಾ ಸಂಸ್ಥೆಯನ್ನು ವಿಸ್ತಾರವಾಗಿ ಪರಿವರ್ತನೆ ಮಾಡಿದ್ದಾರೆ. 19 ಬಿಲಿಯನ್ ಡಾಲರ್‌ನ ಮಹೀಂದ್ರಾ ಗ್ರೂಪ್ ತನ್ನ ಟ್ರಾಕ್ಟರ್‌ಗಳು ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಿಗೆ ಹೆಸರುವಾಸಿಯಾಗಿದೆ.

ಸಾಫ್ಟ್‌ವೇರ್ ಸೇವೆಗಳು, ಆತಿಥ್ಯ ಮತ್ತು ರಿಯಲ್ ಎಸ್ಟೇಟ್‌ನಲ್ಲಿಯೂ ಸಹ ಹೆಸರುವಾಸಿಯಾಗಿದೆ. 2023 ರ ಭಾರತದ ಶ್ರೀಮಂತ ಬಿಲಿಯನೇರ್‌ಗಳ ಫೋರ್ಬ್ಸ್ ಪಟ್ಟಿ ಮರು ಪ್ರವೇಶ ಮಾಡಿದ ಕೆಲವು ದಿನಗಳ ನಂತರ ಕೇಶುಬ್ ಮಹೀಂದ್ರಾ ಸಾವನ್ನಪ್ಪಿದ್ದಾರೆ. ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ತನ್ನ 2023 ರ ಶ್ರೀಮಂತರ ಪಟ್ಟಿಯಲ್ಲಿ ಉಲ್ಲೇಖ ಮಾಡಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಹೊಸದಾಗಿ 16 ಬಿಲಿಯನೇರ್‌ಗಳನ್ನು ಪಟ್ಟಿಗೆ ಸೇರಿದ್ದಾರೆ ಎಂದಿದೆ.
ಭಾರತವು ಅತೀ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ 3ನೇ ದೇಶವಾಗಿದೆ. ಈ ಪಟ್ಟಿಯಲ್ಲಿ 99 ವರ್ಷದ ಕೇಶುಬ್ ಮಹೀಂದ್ರಾ ಕೂಡಾ ಕಾಣಿಸಿಕೊಂಡಿದ್ದಾರೆ. ಅದು ಕೂಡಾ ಇತ್ತೀಚೆಗೆ ಆ ಪಟ್ಟಿಗೆ ಕೇಶುಬ್ ಮಹೀಂದ್ರಾ ಮತ್ತೆ ಸೇರ್ಪಡೆಯಾಗಿದ್ದಾರೆ. ಕೇಶುಬ್ ಮಹೀಂದ್ರಾ ಅವರು ಮಹೀಂದ್ರಾ & ಮಹೀಂದ್ರಾ ಸಮೂಹದ ಅಧ್ಯಕ್ಷರಾಗಿದ್ದಾರೆ. ಕೇಶುಬ್ ಮಹೀಂದ್ರಾ ಆನಂದ್ ಮಹೀಂದ್ರ ಅವರ ಚಿಕ್ಕಪ್ಪ.
ಕೇಶುಬ್ ಮಹೀಂದ್ರಾ ನಿವ್ವಳ ಮೌಲ್ಯ 9000 ಕೋಟಿ ರೂಪಾಯಿ ಆಗಿದೆ. ಕೇಶುಬ್ ಮಹೀಂದ್ರಾ ಐದು ದಶಕಗಳಿಂದ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದರು. 5 ದಶಕಗಳ ಕಾಲ ಗುಂಪಿನ ಮುಖ್ಯಸ್ಥರಾಗಿದ್ದ ನಂತರ ಆಗಸ್ಟ್ 2012 ರಲ್ಲಿ ನಿವೃತ್ತರಾದರು. ಭಾರತ ಸರ್ಕಾರವು ಸ್ಥಾಪಿಸಿದ ಹಲವಾರು ಸಮಿತಿಗಳಲ್ಲಿ ಕೇಶುಬ್ ಮಹೀಂದ್ರಾ ಇದ್ದಾರೆ. ಉತ್ತಮ ಕಾರ್ಪೊರೇಟ್ ಆಡಳಿತ ಮತ್ತು ನೈತಿಕತೆಗೆ ಹೆಸರುವಾಸಿಯಾಗಿದ್ದಾರೆ. 2007 ರಲ್ಲಿ, ಅರ್ನ್ಸ್ಟ್ ಮತ್ತು ಯಂಗ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ.
ಉದ್ಯಮಿಯಾಗಿದ್ದ ಕೇಶುಬ್ ಮಹೀಂದ್ರಾ ಜನರಿಗೆ ಸಹಾಯ ಮಾಡುವ ವಿಚಾರದಲ್ಲಿಯೂ ಹೆಸರುವಾಸಿಯಾಗಿದ್ದಾರೆ. ಅವರು ASSOCHAM ನ ಅಪೆಕ್ಸ್ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ. ಸದ್ಯಕ್ಕೆ, ಕಂಪನಿಯು ಸ್ವದೇಶಿ ಎಸ್‌ಯುವಿಗಳ ಅತೀ ದೊಡ್ಡ ತಯಾಕರ ಸಂಸ್ಥೆಯಾಗಿದೆ. ಮಹೀಂದ್ರ ಥಾರ್, ಮಹೀಂದ್ರ TUV 300, ಮಹೀಂದ್ರ XUV 700, ಮಹೀಂದ್ರ ಬೊಲೆರೊ ನಿಯೋ ಸೇರಿದಂತೆ ಹಲವಾರು ಪ್ರಸಿದ್ಧ ಕಾರುಗಳನ್ನು ತಯಾರಿ ಮತ್ತು ಮಾರಾಟ ಮಾಡುತ್ತದೆ.
ಮಹೀಂದ್ರಾದಲ್ಲಿ ಈಗ ಇದೆ ಆಫರ್!
ಪ್ರಮುಖ ಕಾರು ತಯಾರಿಕಾ ಸಂಸ್ಥೆಯಾದ ಮಹೀಂದ್ರಾ ಕಾರು ಕೊಡುಗೆಗಳನ್ನು ತಂದಿವೆ. ಈ ತಿಂಗಳು ಹಲವು ಮಾದರಿಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ. ಒಟ್ಟಾಗಿ ರೂ. 72 ಸಾವಿರದವರೆಗೆ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಥಾರ್, ಎಕ್ಸ್‌ಯುವಿ300, ಮರಾಝೋ, ಬೊಲೆರೊ ಮೊದಲಾದವುಗಳಲ್ಲಿ ನೀವು ರಿಯಾಯಿತಿಯನ್ನು ಪಡೆಯಬಹುದಾಗಿದೆ. ನೀವು ಆಯ್ಕೆ ಮಾಡುವ ಕಾರು ಮತ್ತು ರೂಪಾಂತರವನ್ನು ಅವಲಂಬಿಸಿ ನೀವು ಪಡೆಯುವ ರಿಯಾಯಿತಿಯು ಬದಲಾಗುತ್ತದೆ.


Click it and Unblock the Notifications