21 ದಿನಗಳ ಲಾಕ್‌ಡೌನ್‌ನಿಂದ ದೇಶಕ್ಕೆ 9 ಲಕ್ಷ ಕೋಟಿ ರುಪಾಯಿ ನಷ್ಟ ಸಾಧ್ಯತೆ

ಕೊರೊನಾವೈರಸ್‌ ಹರಡುವುದನ್ನು ತಪ್ಪಿಸಲು 21 ದಿನಗಳ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿರುವ ನಿರ್ಧಾರದಿಂದಾಗಿ ದೇಶಕ್ಕೆ ಸುಮಾರು 120 ಬಿಲಿಯನ್ ಡಾಲರ್ (ಅಂದಾಜು 9 ಲಕ್ಷ ಕೋಟಿ ರುಪಾಯಿ) ಅಥವಾ ಜಿಡಿಪಿಯ 4 ಪರ್ಸೆಂಟ್‌ರಷ್ಟಿದೆ ಎಂದು ಆರ್ಥಿಕ ವಿಶ್ಲೇಷಕರು ಬುಧವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಲಾಕ್‌ ಡೌನ್‌ ಮಾಡಿರುವುದರಿಂದ ಬೆಳವಣಿಗೆಯು ಬಹಳ ಕುಂಠಿತವಾಗುತ್ತದೆ. ಹೀಗಾಗಿ ಆರ್ಥಿಕ ಪ್ಯಾಕೇಜ್ ಘೋಷಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

21 ದಿನಗಳ ಲಾಕ್‌ಡೌನ್‌ನಿಂದ ದೇಶಕ್ಕೆ 9 ಲಕ್ಷ ಕೋಟಿ ರುಪಾಯಿ ನಷ್ಟ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಮೊದಲ ದ್ವಿ-ಮಾಸಿಕ ನೀತಿ ಪರಿಶೀಲನೆಯನ್ನು ಏಪ್ರಿಲ್ 3 ರಂದು ಪ್ರಕಟಿಸಲಿದ್ದು, ಹೆಚ್ಚಿನ ದರ ಕಡಿತವನ್ನು ನೀಡಲು ಸಜ್ಜಾಗಿದೆ ಮತ್ತು ಹಣಕಾಸಿನ ಕೊರತೆಯ ಗುರಿಗಳನ್ನು ಉಲ್ಲಂಘಿಸಲಾಗುವುದು ಎಂದು ಸಹ ವಿಶ್ಲೇಷಕರು ತಿಳಿಸಿದ್ದಾರೆ.

ದೇಶದಲ್ಲಿ ಕರೋನವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೂರು ವಾರಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದರು. ಈಕ್ವಿಟಿ ಮಾರುಕಟ್ಟೆಗಳು ಬುಧವಾರದ ವಹಿವಾಟಿನ ಆರಂಭದಲ್ಲಿ 0.47 ಪರ್ಸೆಂಟ್ ರಷ್ಟು ಕುಸಿದವು. ಆದರೆ ನಂತರ ಚೇತರಿಕೆ ದಾಖಲಿಸಿದ್ದು ಬುಧವಾರ ಸೆನ್ಸೆಕ್ಸ್ 6.98 ಪರ್ಸೆಂಟ್ ಮತ್ತು ನಿಫ್ಟಿ 6.98 ಪರ್ಸೆಂಟ್ ಏರಿಕೆ ಕಂಡಿದೆ.

ಏಪ್ರಿಲ್ ಪರಿಶೀಲನೆಯಲ್ಲಿ ಆರ್‌ಬಿಐ 0.65 ಪರ್ಸೆಂಟ್ ರಷ್ಟು ದರ ಕಡಿತಕ್ಕೆ ಹೋಗುವ ಸಾಧ್ಯತೆಯಿದೆ ಮತ್ತು ವರ್ಷದ ಅವಧಿಯಲ್ಲಿ ಬಡ್ಡಿದರಗಳನ್ನು ಶೇಕಡಾ 1 ರಷ್ಟು ಕಡಿತಗೊಳಿಸುತ್ತದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+