ಸರ್ಕಾರ ಉದ್ಯೋಗಿಗಳಿಗೆ ಒಂದಿಲ್ಲೊಂದು ಯೋಜನೆ ಜಾರಿಗೊಳಿಸುತ್ತದೆ. ಅದರಂತೆ ಉದ್ಯೋಗಿಗಳು ಈ ಯೋಜನೆಗಳ ಲಾಭ ಪಡೆಯಲು ಕೆಲವು ವಿಧಾನಗಳನ್ನು ಪಾಲಿಸಬೇಕು. ಪ್ರಸ್ತುತ, ನೀವು ಉದ್ಯೋಗ ಆಧಾರಿತ ಭತ್ಯೆ (ELI) ಯೋಜನೆಯಡಿ ಇಪಿಎಸ್ ಖಾತೆಗೆ ಯುಎನ್ಎನ್ ಸಕ್ರಿಯಗೊಳಿಸುವುದು ಒಂದಾಗಿದೆ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಹ ಲಿಂಕ್ ಆಗಿರಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಲು ನಿಗದಿಪಡಿಸಲಾಗಿದ್ದ ಕಾಲಾವಕಾಶವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮತ್ತೆ ವಿಸ್ತರಣೆ ಮಾಡಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೌದು, ಉದ್ಯೋಗಿಗಳಿಗೆ ಯುಎಎನ್ ಸಕ್ರಿಯಗೊಳಿಸಲು ಈ ಮೊದಲು ನವೆಂಬರ್ 30ಕ್ಕೆ ಕೊನೆಯ ದಿನಾಂಕವಿತ್ತು.ಆದರೆ ಅದನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಲಾಗಿತ್ತು.ಇದೀಗ ಮತ್ತೆ ಜನವರಿ 15ರವರೆಗೂ ಕಾಲಾವಕಾಶ ನೀಡಿದೆ.

UAN ಅಂದ್ರೆ ಏನು?
ಯೂನಿವರ್ಸಲ್ ಅಕೌಂಟ್ ನಂಬರ್.ಇದು ಆಧಾರ್ ನಂಬರ್ನಂತೆ ಇದು ಒಬ್ಬ ಉದ್ಯೋಗಿಗೆ ಇರುವ ವಿಶೇಷ ಸಂಖ್ಯೆಯಾಗಿರುತ್ತದೆ. ಮತ್ತು ಇಪಿಎಫ್ಒ ಸರ್ವಿಸ್ಗಳನ್ನು ಆನ್ಲೈನ್ನಲ್ಲಿ ಪಡೆಯಲು ಉದ್ಯೋಗಿಗೆ ನೀಡಲಾಗುವ 12 ಅಂಕಿಗಳ ಒಂದು ಅನನ್ಯ ಸಂಖ್ಯೆ ಆಗಿದೆ.
ನೀವು ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆಯಾದರೂ ಅದೇ ಯುಎಎನ್ ನಂಬರ್ ಅನ್ನು ಮುಂದುವರಿಸಬಹುದು. ಒಂದೇ ಯುಎಎನ್ ನಂಬರ್ ಅಡಿ ಉದ್ಯೋಗಿಯ ಎಲ್ಲಾ ಇಪಿಎಫ್ ಅಕೌಂಟ್ಗಳು ಲಿಸ್ಟ್ ಆಗಿರುತ್ತವೆ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕು
ಇಪಿಎಫ್ ಅಕೌಂಟ್ನಿಂದ ಹಣವನ್ನು ಹಿಂಪಡೆದಾಗ ಅದು ನೇರವಾಗಿ ಬ್ಯಾಂಕ್ ಖಾತೆಗೆ ರವಾನೆಯಾಗಬೇಕೆಂದರೆ ಆ ಖಾತೆಗೆ ಉದ್ಯೋಗಿಯ ಆಧಾರ್ ಜೋಡಣೆ ಆಗಿರಬೇಕು. ಎಲ್ಲಾ ಡಿಬಿಟಿ ಯೋಜನೆಗಳಿಗೆ ಅವಶ್ಯಕವಾಗಿದೆ.
ಏನಿದು ಇಎಲ್ಐ ಸ್ಕೀಮ್?
ಕಳೆದ ಬಜೆಟ್ನಲ್ಲಿ (2024ರ ಜುಲೈ) ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯನ್ನು ಪ್ರಕಟಿಸಲಾಗಿದೆ. ಇದರ ಅಡಿಯಲ್ಲಿ ಮೂರು ಯೋಜನೆಗಳನ್ನು ಘೋಷಿಸಲಾಗಿದೆ. ಅದರಲ್ಲಿ ಹೊಸದಾಗಿ ಉದ್ಯೋಗಿಗಳಾಗಿರುವವರಿಗೆ ಒಂದು ತಿಂಗಳ ವೇತನವನ್ನು ಸರ್ಕಾರವೇ ನೀಡುತ್ತದೆ. ಇನ್ನೆರಡು ಸ್ಕೀಮ್ಗಳಲ್ಲಿ ಹೆಚ್ಚುವರಿ ಉದ್ಯೋಗಾವಕಾಶ ನೀಡುವ ಕಂಪನಿಗಳಿಗೆ ಸರ್ಕಾರ ಪ್ರೋತ್ಸಾಹದ ಹಣವನ್ನು ನೀಡುತ್ತದೆ.
ನಿಮಗೆ ಈ ಸ್ಕೀಮ್ಗಳ ಲಾಭ ಸಿಗಬೇಕಾದರೆ ಉದ್ಯೋಗಿಗಳಿಗೆ ಯುಎಎನ್ ಸಕ್ರಿಯಗೊಳ್ಳಬೇಕು. ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಆಗಿರಬೇಕು. ಅದಕ್ಕೆ ಜನವರಿ 15ಕ್ಕೆ ಕೊನೆಯ ದಿನವಾಗಿದೆ.


Click it and Unblock the Notifications