For Quick Alerts
ALLOW NOTIFICATIONS  
For Daily Alerts

ಪತ್ರಿಕೋದ್ಯಮಕ್ಕೆ 7300 ಕೋಟಿ ರುಪಾಯಿ ನೆರವಿನ ಘೋಷಣೆ ಮಾಡಿದ ಫೇಸ್ ಬುಕ್

|

ಕೊರೊನಾದಿಂದ ಸಮಸ್ಯೆಗೆ ತುತ್ತಾಗಿರುವ ಸುದ್ದಿ ಸಂಸ್ಥೆಗಳಿಗಾಗಿ ಜಾಗತಿಕ ಮಟ್ಟದಲ್ಲಿ $ 10 ಕೋಟಿ ಅಂದರೆ, ಭಾರತೀಯ ರುಪಾಯಿಗಳಲ್ಲಿ 7300 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ದೇಣಿಗೆ ನೀಡುವುದಾಗಿ ಸೋಮವಾರ ಫೇಸ್ ಬುಕ್ ಘೋಷಣೆ ಮಾಡಿದೆ. ಕೊರೊನಾ ಬಿಕ್ಕಟ್ಟಿನ ಬಗ್ಗೆ ನಂಬಲರ್ಹ ಸುದ್ದಿಯ ಅಗತ್ಯವನ್ನು ಮನಗಂಡು ಈ ನೆರವು ನೀಡುವುದಾಗಿ ತಿಳಿಸಲಾಗಿದೆ.

 

ಕೊರೊನಾ ವ್ಯಾಪಿಸಿರುವ ಈ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮ ವಲಯವು ವಿಶೇಷ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಫೇಸ್ ಬುಕ್ ನ ಸುದ್ದಿ ಸಹಭಾಗಿತ್ವದ ನಿರ್ದೇಶಕ ಕ್ಯಾಂಪ್ ಬೆಲ್ ಬ್ರೌನ್ ತಿಳಿಸಿದ್ದಾರೆ. "ಈ ಹಿಂದೆಂದಿಗಿಂತ ಪತ್ರಿಕೋದ್ಯಮಕ್ಕೆ ಹೆಚ್ಚಿನ ಅಗತ್ಯ ಇರುವಾಗ ಕೊರೊನಾದ ಆರ್ಥಿಕ ಪರಿಣಾಮದಿಂದ ಜಾಹೀರಾತು ಆದಾಯ ಕುಸಿಯುತ್ತಿದೆ. ಸ್ಥಳೀಯ ಪತ್ರಕರ್ತರಿಗೆ ಬಹಳ ತೊಂದರೆ ಆಗಿದೆ. ಜನರು ಸುರಕ್ಷತೆ ಸಲುವಾಗಿ ಮಹತ್ವದ ಮಾಹಿತಿ ತಿಳಿಯಲು ಅವರ ಕಡೆ ನೋಡುತ್ತಿದ್ದಾರೆ" ಎಂದಿದ್ದಾರೆ.

 
ಪತ್ರಿಕೋದ್ಯಮಕ್ಕೆ 7300 ಕೋಟಿ ನೆರವಿನ ಘೋಷಣೆ ಮಾಡಿದ ಫೇಸ್ ಬುಕ್

ಫೇಸ್ ಬುಕ್ ಪತ್ರಿಕೋದ್ಯಮ ಯೋಜನೆ ಮೂಲಕ 25 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಸ್ಥಳೀಯ ಸುದ್ದಿಗಾಗಿ ತುರ್ತು ಅನುದಾನ ಎಂದು ನೀಡಲಾಗುವುದು. ಇನ್ನು 75 ಮಿಲಿಯನ್ ಅನ್ನು ಹೆಚ್ಚುವರಿ ಮಾರ್ಕೆಟಿಂಗ್ ಶ್ರಮಕ್ಕಾಗಿ ಜಗತ್ತಿನಾದ್ಯಮ್ತ ಇರುವ ಸುದ್ದಿ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಹಳ ತೊಂದರೆಗೆ ಒಳಗಾದ ದೇಶಗಳಲ್ಲಿನ ಮುದ್ರಕರಿಗಾಗಿ ಫೇಸ್ ಬುಕ್ ಅನುದಾನ ನೀಡಲಿದೆ. ಕೊರೊನಾ ಕಾರಣಕ್ಕೆ ಲಾಕ್ ಡೌನ್ ಘೋಷಿಸಿರುವುದರಿಂದ ಹಲವು ಮಾಧ್ಯಮ ಸಂಸ್ಥೆಗಳು ಪ್ರಸಾರ ನಿಲ್ಲಿಸಿವೆ ಹಾಗೂ ಕೆಲವು ಮುಚ್ಚಿವೆ. ಜಾಹೀರಾತು ಇಲ್ಲದ ಕಾರಣಕ್ಕೆ ಅವುಗಳ ಸ್ಥಿತಿ ಚಿಂತಾಜನಕ ಆಗಿದೆ.

English summary

Face Book Announce 100 Million USD To Journalism

Facebook announces 100 million USD to journalism around the world to protest against Corona virus economic impact.
Story first published: Tuesday, March 31, 2020, 14:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X